ಶಿರಸಿ :
ಗಣೇಶ್ ಚತುರ್ಥಿ ಹತ್ತಿರವಾಗುತ್ತಿದ್ದು, ಗಣೇಶ ಮೂರ್ತಿ ವಿಸರ್ಜನೆ ಮಾಡುವ ಸ್ಥಳವಾದ ನಟರಾಜ ರಸ್ತೆಯ ಚಿಲುಮೆಕೆರೆ ಕೆರೆಯನ್ನು ಇಂದು ಶಿರಸಿ ನಗರಸಭೆ ಅಧ್ಯಕ್ಷರಾದ ಶರ್ಮಿಳಾ ಮಾದನಗೇರಿಯವರು,ಉಪಾಧ್ಯಕ್ಷ ರಮಕಾಂತ್ ಭಟ್ ಸ್ಥಾಯಿ ಕಮಿಟಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಹಾಗೂ ನಗರಸಭೆ ಎಇಇ ಪ್ರಶಾಂತ ವರ್ಣೇಕರ ಅವರೊಂದಿಗೆ ಪರಿಶೀಲನೆ ನಡೆಸಿದರು. ಹಾಗೂ ಚಿಲುಮೆ ಕೆರೆಗೆ ಬಣ್ಣ, ಸಿ ಸಿ ಕ್ಯಾಮೆರಾ, ಲೈಟ್ ವ್ಯವಸ್ಥೆ, ತಗಡಿನ ಸೀಟ್ ಅಳವಡಿಕೆ ಸೇರಿದಂತೆ ಇತರೆ ತುರ್ತು ಕಾರ್ಯಗಳನ್ನು ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.








