ದಕ್ಷಿಣಕನ್ನಡ:
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿದ, ಧರ್ಮಸ್ಥಳ ವಿರೋಧಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ವಿಚಾರಕ್ಕೆ ಸಂಬಂಧಪಟ್ಟಂತೆ ಯೂಟ್ಯೂಬ್ನಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದ ಅಡಿ ಟಿ. ಜಯಂತ್ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ FIR ದಾಖಲಿಸಿಕೊಂಡಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ವಿಚಾರಕ್ಕೆ ಸಂಬಂಧಪಟ್ಟಂತೆ, ಇದೊಂದು ಷಡ್ಯಂತ್ರ ಎಂದು ಟಿ.ಜಯಂತ ಒಂದು ಯುಟ್ಯೂಬ್ ಚಾನೆಲ್ನಲ್ಲಿ ಪ್ರಸಾರ ಮಾಡಿದ್ದ. ಗಡಿಪಾರಿನ ಕುರಿತು ಜಿಲ್ಲಾಡಳಿತದ ಆದೇಶದ ಸತ್ಯತೆ ತಿಳಿದಿದ್ದರೂ ಕೂಡ ಜಯಂತ್ ಅಪೂರ್ಣವಾದ ಮಾಹಿತಿ ನೀಡಿದ್ದಾನೆ. ಇದೊಂದು ಷಡ್ಯಂತ್ರ ಎಂದು ಸುಳ್ಳು ಸುದ್ದಿ ಹರಿಬಿಟ್ಟ ಆರೋಪದ ಮೇರೆಗೆ ಬೆಳ್ತಂಗಡಿ ಠಾಣೆಯಲ್ಲಿ ಬಿಎನ್ಎಸ್ 353 (1) (b) ಅಡಿ ಪ್ರಕರಣ ದಾಖಲಾಗಿದೆ.








