ಕುಂಬಳ ಕಾಯಿ ದಪ್ಪದ ತೆಂಗಿನಕಾಯಿ ಬೆಳೆದ ದೊಡ್ಡೇರಿ ರೈತ…..!

ಗುಬ್ಬಿ:

  ಗಗನಕ್ಕೇರುತ್ತಿರುವ ತೆಂಗಿನಕಾಯಿ ಬೆಲೆಯಲ್ಲಿ ಮತ್ತು ತೆಂಗಿಗೆ ಹತ್ತು ಹಲವು ರೋಗಬಾದೆಗಳು ಸೋಕಿ ಇಳುವರಿ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಗುಬ್ಬಿ ತಾಲ್ಲೂಕಿನ ದೊಡ್ಡೇರಿ ಬಳಿ ತೋಟದಲ್ಲಿ ಇಲ್ಲೊಬ್ಬ ರೈತರು ಸಹಜ ಕೃಷಿಯಿಂದ ಕೊಟ್ಟಿಗೆ ಗೊಬ್ಬರ ಹಾಗೂ ಹಸುವಿನ ಗಂಜಲ ಹಾಕಿ ಕುಂಬಳ ಕಾಯಿ ದಪ್ಪದ ತೆಂಗಿನಕಾಯಿ ಬೆಳೆದಿದ್ದಾರೆ ಎಂದರೆ ನಾವೆಲ್ಲಾ ಆಶ್ಚರ್ಯ ಪಡುವಂತದ್ದೇ, ವೃತ್ತಿಗೂ ಪ್ರವೃತ್ತಿಗೂ ಅಜಗಜಾಂತರವಿರುವ ಕೆ ಆನಂದರಾಜು ಅವರ ಮುಕ್ಕಾಲು ಜೀವನ ಕಳೆದದ್ದು ರಂಗಭೂಮಿ ಕ್ಷೇತ್ರದಲ್ಲಿ, ಖ್ಯಾತ ರಂಗಕರ್ಮಿ ಹಿನ್ನೆಲೆ ಗಾಯಕಿ, ನಟಿ, ನಿರ್ದೇಶಕಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಬಿ ಜಯಶ್ರೀ ಯವರ ಪತಿ,

  ಇವರು ಗುಬ್ಬಿ ತಾಲೂಕು ಕಸಬಾ ಹೋಬಳಿ ಜಿ ಹೊಸಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ದೊಡ್ಡೇರಿ ಮಜಿರೆ ಗ್ರಾಮದಲ್ಲಿನ ಅವರ ಸುಮಾರು ಎರಡು ಎಕರೆ ತೋಟದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಹಾಕಿದ್ದಾರೆ ಇವುಗಳನ್ನು ವಾಣಿಜ್ಯಕ್ಕೆ ಉಪಯೋಗಿಸದೆ ಹಕ್ಕಿ ಪಕ್ಷಿಗಳು, ಸಣ್ಣ ಪುಟ್ಟ ಜೀವಿಗಳು ತಿನ್ನಲು ಗಿಡ ಮರಗಳಲ್ಲೇ ಬಿಟ್ಟಿರುತ್ತಾರೆ ಈ ತೋಟದಲ್ಲಿ ಸುಮಾರು 50 ತೆಂಗಿನ ಗಿಡಗಳನ್ನು ಹಾಕಿದ್ದು ಇದರಲ್ಲಿ ಪ್ರಗತಿಪರ ರೈತರಾದ ಆಲೂರು ಮೂರ್ತಿ ಯವರು ಕೊಟ್ಟಂಥಹ ತೆಂಗಿನ ಮರಗಳಿವೆ ಅವುಗಳಲ್ಲಿ ಕುಂಬಳಕಾಯಿ ಗಾತ್ರದ ಕಾಯಿ ಬಿಡುತ್ತಿದು ಸುತ್ತಮುತ್ತಲಿನ ರೈತರು ಹುಬ್ಬೇರಿಸಿ ನೋಡುವಂತಾಗಿದೆ, ಏನೇ ಆಗಲಿ ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತಂತೆ ಈ ಇಳಿ ವಯಸ್ಸಲ್ಲೂ ಕೃಷಿಮಾಡಿ ನೆಮ್ಮದಿಯ ಕಂಡುಕೊಂಡಿರಿವುದು ಪ್ರಶಂಶನೀಯ,

Recent Articles

spot_img

Related Stories

Share via
Copy link