
ಶಿಕಾರಿಪುರ: ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಬರುವ ಜಮೀನುಗಳ ವಾಸ್ತವ ಸ್ಥಿತಿಗತಿ, ಗಡಿರೇಖೆ ಗೊಂದಲ ಆಗುತ್ತಿರುವ ತಾಂತ್ರಿಕ ಲೋಪದೋಷಗಳ ಕುರಿತು ನಗರದ ಐ ಬಿಯಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸಭೆಯಲ್ಲಿ ಶಾಸಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ತಾಲ್ಲೂಕಿನ ರೈತ ಬಾಂಧವರ ಹಾಗೂ ಸಾರ್ವಜನಿಕರ ದಶಕಗಳ ಪ್ರಮುಖ ತೊಂದರೆಗೆ ಕಾರಣವಾಗಿರುವ ಡೀಮ್ಡ್ ಫಾರೆಸ್ಟ್ (ಭಾವಿತ ಅರಣ್ಯ) ಸಮಸ್ಯೆಗೆ ತಾರ್ಕಿಕ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಜಂಟಿ
ಸಭೆಯ ಇಲಾಖೆಗಳ ನಡುವಿನ ಗೊಂದಲಗಳನ್ನು ತಕ್ಷಣವೇ ನಿವಾರಿಸಲು ಜಂಟಿ ಸರ್ವೆ ನಡೆಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಅರ್ಹ ಸಾಗುವಳಿ ಜಮೀನುಗಳನ್ನು ಮುಕ್ತಗೊಳಿಸಲು ಮತ್ತು ಮಲೆನಾಡಿನ ರೈತರ ಹಿತರಕ್ಷಣೆಯನ್ನು ಕಾಯ್ದುಕೊಳ್ಳಲು ಸರ್ಕಾರದ ಉನ್ನತ ಮಟ್ಟದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ಕಾನೂನಾತ್ಮಕವಾಗಿ ಮತ್ತು ಆಡಳಿತಾತ್ಮಕವಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ನಿರಂತರವಾಗಿ ಮುಂದುವರೆಸಲು ಸಭೆಯಲ್ಲಿ ಸೂಚಿಸಿದರು.
ಸಂಸದ ಬಿ ವೈ ರಾಘವೇಂದ್ರ ಮಾತನಾಡಿದರು.
ತಹಶೀಲ್ದಾರ್ ವಾಣಿ.ಯು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು, ಹಾಗೂ ಕೆ ಎಸ್ ಗುರುಮೂರ್ತಿ, ಸುಧೀರ್ ಮಾರವಳ್ಳಿ, ಬೆಣ್ಣೆ ಪ್ರವೀಣ್, ಇನ್ನಿತರರಿದ್ದರು








