
ಬೆಂಗಳೂರು : ಕಡತಗಳ ವಿಲೇವಾರಿ ಹಾಗೂ ಅನಾವಶ್ಯಕ ಕೆಲಸಗಳ ವಿಳಂಬ, ಲಂಚ, ಭ್ರಷ್ಟಾಚಾರ ಕಂಡುಬAದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ವಿಧಾನಸೌಧದಲ್ಲಿ ಶನಿವಾರ ಅವರು ಜಿಲ್ಲಾಧಿಕಾರಿಗಳು, ಸಿಇಒಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ರಾಜ್ಯದಲ್ಲಿನ ಮಳೆ, ಬೆಳೆ, ಸಿಎಸ್ಆರ್ ಶಾಲೆಗಳು, ಕಾನೂನು ಸುವ್ಯವಸ್ಥೆ, ಎಸ್ಐಆರ್ ಮತ್ತಿತರ ವಿಚಾರಗಳ ಬಗ್ಗೆ ಸಮಾಲೋಚನಾ ಸಭೆ ನಡೆಸಿದರು. ಸರ್ಕಾರದ ಎಲ್ಲಾ ಪ್ರಮುಖ ಇಲಾಖೆಗಳ ಮುಖ್ಯಸ್ಥರು, ಅಧಿಕಾರಿಗಳು ಜವಾಬ್ದಾರಿ ಅರಿತು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ ಎಂದು ಸೂಚನೆ ನೀಡಿದರು.
ಸಾರ್ವಜನಿಕರು, ಯೋಜನೆಗಳು, ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನೆ ಬಗ್ಗೆ ನಿರಂತರ ಗಮನಹರಿಸಿ. ವಿವಿಧ ಸರ್ಕಾರಿ ಇಲಾಖೆ ಅಧಿಕಾರಿಗಳ ವಾಹನಗಳನ್ನು ಗುರುತಿಸಲು ಪ್ರತ್ಯೇಕ ಕಲರ್ ಸ್ಟಿಕರಿಂಗ್ ಮಾಡಿಸಬೇಕು. ಉದಾಹರಣೆಗೆ ಅರಣ್ಯ ಇಲಾಖೆಗೆ ಹಸಿರು, ಆರೋಗ್ಯ ಇಲಾಖೆಗೆ ನೀಲಿ+ರೆಡ್ ಹೀಗೆ ಹಾಕಬೇಕು ಎಂದು ಸೂಚಿಸಿದರು.
ಸರ್ಕಾರಿ ವಾಹನಗಳ ದುರ್ಬಳಕೆ ಆಗಬಾರದು: ಜಿಲ್ಲಾಧಿಕಾರಿಗಳ ಹಂತದಲ್ಲಿ ಸರ್ಕಾರಿ ವಾಹನಗಳ ದುರ್ಬಳಕೆ ತಡೆಗೆ ಕ್ರಮ ವಹಿಸಬೇಕು. ಸರ್ಕಾರಿ ಕೆಲಸದ ಅವಧಿ ಹೊರತುಪಡಿಸಿ, ಸರ್ಕಾರಿ ವಾಹನ ಬಳಕೆಗೆ ನಿರ್ಬಂಧ ಹೇರಬೇಕು. ಜಿಲ್ಲಾ ಹಂತದ ಎಲ್ಲಾ ಅಧಿಕಾರಿಗಳ ದೂರವಾಣಿ ಸಂಖ್ಯೆ, ವಿಳಾಸಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಬೇಕು. ಅವರ ಲಭ್ಯತೆ/ಅಲಭ್ಯತೆ ಬಗ್ಗೆ ಇತರ ಅಧಿಕಾರಿಗಳಿಗೆ ನಿಖರ ಮಾಹಿತಿ ಇರಬೇಕು. ಎಸ್ಪಿ/ಡಿಸಿ/ಸಿಇಒ/ಡಿಎಫ್ಒ/ಡಿಡಿಪಿಐ/ಜಿಲ್ಲೆಯ ಮುಖ್ಯಾಧಿಕಾರಿಗಳು ಹಾಗೂ ಇಲಾಖೆಗಳ ಮುಖ್ಯಸ್ಥರ ದೂರವಾಣಿ 24 ಗಂಟೆಗಳೂ ಆನ್ ಇರಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಿದ ಸಿಎಂ, ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಗೊಬ್ಬರ, ಬೀಜ ಕೊರತೆ ಬಗ್ಗೆ ರೈತರು ಆತಂಕದಲ್ಲಿದ್ದಾರೆ. ಗೊಬ್ಬರ ದಾಸ್ತಾನು, ಸರಬರಾಜು, ವಿತರಣೆ, ಸಾಗಾಣಿಕೆ ಬಗ್ಗೆ ನಿಗಾ ವಹಿಸಿ. ಅಕ್ರಮ ಸಾಗಾಣಿಕೆ, ದಾಸ್ತಾನು, ಖರೀದಿ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಸಿಎಂ ಹೇಳಿದರು.
ಕೇಂದ್ರದಿAದ ಸರಬರಾಜು ಕಡಿಮೆ ಇದೆ. ಗೊಬ್ಬರದ ಅಗತ್ಯತೆ ಗಮನಿಸಿ ಕ್ರಮ ವಹಿಸಬೇಕು. ಹೆಚ್ಚು ಮಳೆ ಬೀಳುವ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕಾ, ಪರಿಹಾರ ಕ್ರಮಗಳನ್ನು ಸನ್ನದ್ದತಾ ಸ್ಥಿತಿಯಲ್ಲಿಡಿ. ಜಿಲ್ಲಾ ಹಂತದಲ್ಲಿ ಪೊಲೀಸ್ ಇಲಾಖೆ ಮಹತ್ವದ ಕಾರ್ಯ ನಿರ್ವಹಿಸಬೇಕಿದೆ. ಕಾನೂನು ಸುವ್ಯವಸ್ಥೆ ನಿಯಂತ್ರಣ, ಕೋಮು ದ್ವೇಷ, ಹರಡುವುದನ್ನು ತಡೆಯಬೇಕು. ತಾಲೂಕುಗಳಲ್ಲಿ ಆದಷ್ಟು ಶೀಘ್ರವಾಗಿ ರೌಡಿ ನಿಗ್ರಹ ದಳ ರಚಿಸಿ. ಗಾಂಜಾ, ಮಾದಕ ದ್ರವ್ಯ ಸಾಗಾಣಿಕೆ, ವಿತರಣೆ, ಮಾರಾಟ ತಡೆಯಿರಿ. ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ನಿಗಾ ಇರಲಿ. ಶಾಲಾ ಕಾಲೇಜು ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಿ ಎಂದು ಅವರು ತಾಕೀತು ಮಾಡಿದರು.
100 ದಿನಗಳ ಅಭಿಯಾನಕ್ಕೆ ಸೂಚನೆ: ರಾಜ್ಯಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ 100 ದಿನಗಳ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಸಿಎಂ ಅವರು ತಾವು ಘೋಷಿಸಿದ 6 ಜನಪ್ರಿಯ ಯೋಜನೆಗಳ ಬಗ್ಗೆ 100 ದಿನಗಳ ಕಾಲ ವಿಶೇಷ ಅಭಿಯಾನ ನಡೆಸಲು ಸೂಚನೆ ನೀಡಿದರು.
ಭಾರತ್ ಜೋಡೋ ಸಂಘಗಳ ರಚನೆ, ವಿದ್ಯಾರ್ಥಿಗಳ ಬಸ್ ಪಾಸ್, ನಿಯಮ ಉಲ್ಲಂಘಿಸಿ 2,400 ಚದರ್ ಅಡಿವರೆಗಿನ ನಿವೇಶನಗಳಲ್ಲಿ ನಿರ್ಮಿಸಿರುವ ಮನೆಗಳಿಗೆ ಸ್ವಾಧೀನಾನುಭವ ಪತ್ರದಿಂದ (ಒಸಿ) ವಿನಾಯಿತಿ ಆದೇಶ, ಯುವ ಜನಾಂಗಕ್ಕೆ ಉದ್ಯೋಗ ಕಲ್ಪಿಸಲು ಖಾಸಗಿ ಉದ್ಯೋಗ ವಿನಿಮಯ ಕೇಂದ್ರ ರಚನೆ, ರಾಜ್ಯಾದ್ಯಂತ ಬಿ ಖಾತೆ ನಿವೇಶನಗಳಿಗೆ ಎ ಖಾತೆ ನೀಡುವ ಯೋಜನೆಯನ್ನು ಮುಂದಿಟ್ಟು ಸರ್ಕಾರದ ಅಭಿಯಾನ ನಡೆಸುವ ಕುರಿತು ತೀರ್ಮಾನಿಸಲಾಗಿದೆ.
ಕೃಷಿ ಚಟುವಟಿಕೆಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಕೊರತೆಯಾಗಬಾರದು. ಜಲಾಶಯಗಳಲ್ಲಿ ನೀರಿನ ಸಂಗ್ರಹವನ್ನು ಸಮರ್ಪಕವಾಗಿ ಕಾಯ್ದುಕೊಳ್ಳುವ ಮೂಲಕ ಕುಡಿಯುವ ನೀರಿಗೆ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ಶೈಕ್ಷಣಿಕ ಚಟುವಟಿಕೆಗಳ ವಿಚಾರದಲ್ಲಿ ನಿಗಾ ವಹಿಸಬೇಕು. ರಸ ಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕೆಲವು ಕಡೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಸ್ಥಿತಿಯನ್ನು ಜಿಲ್ಲಾಡಳಿತ ಸೂಕ್ಷ÷್ಮವಾಗಿ ನಿಭಾಯಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಕೊರತೆಯ ಮುನ್ಸೂಚನೆ ಇದೆ. ಹವಾಮಾನ ವರದಿಗೆ ಅನುಗುಣವಾಗಿ ಕೃಷಿ ಬೆಳೆಗಳನ್ನು ಬೆಳೆಯಲು ಕೃಷಿಕರಿಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಕೈಗಾರಿಕೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು. ಅನಗತ್ಯವಾಗಿ ನಿಯಮಗಳ ನೆಪ ಹೇಳಿ ತೊಂದರೆ ಕೊಡಬಾರದು, ಭೂ ಪರಿವರ್ತನೆ, ಮಂಜೂರಾತಿ ಸೇರಿದಂತೆ ಹಲವಾರು ವಿಚಾರಗಳಲ್ಲಿ ವಿಳಂಬ ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಅನರ್ಹರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ ಮುಖ್ಯಮಂತ್ರಿಯವರು, ರಸ್ತೆ ಸುಧಾರಣೆ, ಮೂಲ ಸೌಲಭ್ಯಗಳ ಸೃಷ್ಟಿ, ಮಳೆ ಅನಾಹುತಗಳ ಮುನ್ನೆಚ್ಚರಿಕೆ ಸೇರಿದಂತೆ ಹಲವಾರು ವಿಚಾರಗಳಲ್ಲಿ ಕಾಳಜಿ ವಹಿಸುವಂತೆ ಆದೇಶಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಕೃಷ್ಣಭೈರೇಗೌಡ, ಯು.ಟಿ.ಖಾದರ್ ಸೇರಿದಂತೆ ಹಲವಾರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.
ಕಾನೂನು ಸುವ್ಯವಸ್ಥೆ: ಎಚ್ಚರ ವಹಿಸಿ
ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಈ ಶಾಂತಿಯ ತೋಟವನ್ನು ಮುಂದುವರೆಸಿಕೊAಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಿ. ಸಮಾಜಘಾತುಕ ಶಕ್ತಿಗಳು ತಲೆಎತ್ತದಂತೆ ಕಾರ್ಯನಿರ್ವಹಿಸಿ. ಜನಸಾಮಾನ್ಯರಿಗೆ ಅನಗತ್ಯ ತೊಂದರೆ ಕೊಡಬೇಡಿ. ಅವರ ಜತೆ ಬಹಳ ಸಂಯಮ, ಸೌಜನ್ಯದಿಂದ ವರ್ತಿಸಿ ಕಂದಾಯ ಇಲಾಖೆ ಮತ್ತಷ್ಟು ಜನಪರವಾಗಬೇಕು. ಈ ಇಲಾಖೆ ರೈತರು ಮತ್ತು ಜನಸಾಮಾನ್ಯರಿಗೆ ನೇರ ಸಂಬAಧಪಟ್ಟ ಇಲಾಖೆಯಾಗಿದ್ದು, ನಿಯಮಗಳ ನೆಪ ಹೇಳಿ ಯಾವುದನ್ನು ವಿಳಂಬ ಮಾಡಬೇಡಿ. ಭೂ ಪರಿವರ್ತನೆ ಇರಬಹುದು, ಭೂ ಮಂಜೂರಾತಿ ಇರಬಹುದು, ಖಾತೆ, ಪೋಡಿ ವಿಚಾರದಲ್ಲೂ ಅತ್ಯಂತ ಕ್ಷಿಪ್ರವಾಗಿ ಕೆಲಸಗಳು ಆಗಬೇಕು. ವಿಳಂಬ ಧೋರಣೆಯಾದರೆ ಅದನ್ನು ನಾನು ಸಹಿಸಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.








