ರಾಮನ ಹೆಸರಲ್ಲೂ ಲೂಟಿ ಮನ್ ಕೀ ಬಾತ್‌ನಲ್ಲಿ ಹೇಳ್ತಾರಾ: ಖರ್ಗೆ ವ್ಯಂಗ್ಯ

ಬೆಂಗಳೂರು: ನಾನು ತಿನ್ನಲ್ಲ, ತಿನ್ನಲು ಬಿಡಲ್ಲ ಎಂದು ಹೇಳಿದವರು ರಾಮನ ಹೆಸರಲ್ಲೂ ದುಡ್ಡು ಹೊಡೆದಿದ್ದಾರೆ. ಈ ಬಗ್ಗೆ ಮನ್ ಕೀ ಬಾತ್ ಮಾಡ್ತೀರಾ, ಪರೀಕ್ಷೆ ಪೇ ಚರ್ಚೆ ಮಾಡುತ್ತೀರಾ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಪರೋಕ್ಷವಾಗಿ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಬೆಂಗಳೂರಿನಲ್ಲಿAದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನ ಹೆಸರಲ್ಲಿ ಇವರು ಮೋಸ ಮಾಡುತ್ತಾರೆ ಎಂದು ನಾನು ಹಿಂದೆಯೇ ಹೇಳಿದ್ದೆ ಎಂಬುದನ್ನು ನೆನಪಿಸಿ, ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿದವರು, ಪೂಜೆ ಮಾಡಿದವರು ಪ್ರಧಾನಿ ಮೋದಿ. ಈಗ ದುಡ್ಡು ಹೊಡೆದಿಲ್ಲ ಎಂದರೆ ಹೇಗೆ ನಂಬುವುದು ಎಂದು ಪ್ರಶ್ನಿಸಿದರು.೫ ವರ್ಷದಲ್ಲಿ ೫೦೦ ಕೋಟಿ ರೂಪಾಯಿ ರಾಮನ ಹಣ ತಿಂದಿದ್ದಾರೆ. ಎಲ್ಲಾ ತಪುö್ಪ ಕಾಂಗ್ರೆಸ್ ಸಮಾಜವಾದಿ ಪಕ್ಷದ ರಾಮನ ಭಕ್ತರದ್ದು ಎಂದು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ದುಡ್ಡು ಲೂಟಿಯಲ್ಲಿ ಬಿಜೆಪಿಯ ತಪ್ಪಿಲ್ಲವೇ ಎಂದು ಕಿಡಿಕಾರಿದರು.

ಬೀದಿಯಲ್ಲಿ ಮಾತಾಡಕ್ಕಾಗಲ್ಲ

ಬಿಡದಿಯ ಟೌನ್‌ಶಿಪ್ ನಿರ್ಮಾಣಕ್ಕೆ ಸಂಬAಧಿಸಿದAತೆ ಬೀದಿಯಲ್ಲಿ ಮಾತನಾಡಲು ಆಗುತ್ತಾ, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಎಷ್ಟು ಬಾರಿ ಬೀದಿಯಲ್ಲಿ ವಿರೋಧ ಪಕ್ಷದ ಜತೆ ಚರ್ಚೆ ಮಾಡಿದ್ದಾರೆ, ಇದು ಸರಿಯಲ್ಲ. ಅವರ ಹಿರಿತನಕ್ಕೆ ಇದು ಶೋಭ ತರಲ್ಲ ಎಂದರು.

ಯಾವುದೇ ಸಮಸ್ಯೆ ಇದ್ದರೂ ಬೀದಿಗಳಲ್ಲಿ ಚರ್ಚೆ ಮಾಡಲು ಆಗಲ್ಲ. ನೀತಿಗಳ ಬಗ್ಗೆ ವಿಧಾನಸೌಧದಲ್ಲೇ ಕುಳಿತು ಚರ್ಚೆ ಮಾಡಬೇಕಾಗುತ್ತದೆ. ಕುಮಾರಸ್ವಾಮಿಯವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಬೀದಿಯಲ್ಲಿ ಚರ್ಚೆ ಮಾಡೋಣ ಬನ್ನಿ ಎಂದು ಹೇಳುವುದು ವಿಚಿತ್ರ ಪ್ರವೃತ್ತಿ ಎಂದರು.

ದಾವಣಗೆರೆಯ ಹರಿಹರದಲ್ಲಿ ಶಂಕಿತ ಭಯೋತ್ಪಾದಕನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಎನ್‌ಐಎ ಸಹ ರಾಜ್ಯಕ್ಕೆ ಬಂದಿದೆ. ನಾವು ಅವರಿಗೆ ಸಹಕಾರ ಕೊಡುತ್ತಿದ್ದೇವೆ. ಕರ್ನಾಟಕ ಸ್ಲೀಪರ್ ಸೆಲ್ ಆಗಿಲ್ಲ, ಆಗಲು ಬಿಡುವುದೂ ಇಲ್ಲ. ಹೊರ ರಾಜ್ಯದಿಂದ ಇಲ್ಲಿಗೆ ಬಂದವರು ಈ ರೀತಿ ಮಾಡುತ್ತಿದ್ದಾರೆ. ನಮ್ಮ ಗುಪ್ತದಳ ಜಾಗೃತವಾಗಿದೆ ಎಂದು ಅವರು ಹೇಳಿದರು.

Recent Articles

spot_img

Related Stories

Share via
Copy link