
ತಿ.ನರಸೀಪುರ : ಚುನಾವಣಾ ಆಯೋಗ ರಾಜ್ಯದಲ್ಲಿ ನಡೆಸುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್)ಯಲ್ಲಿ ಮತದಾರರ ಪಟ್ಟಿಯಿಂದ ಅರ್ಹ ಮತದಾರರು ಕೈ ಬಿಟ್ಟು ಹೋಗದಂತೆ ಬೂತ್ ಮಟ್ಟದ ಪದಾಧಿಕಾರಿಗಳು ಹಾಗೂ ಬಿ ಎಲ್ ಎ ಗಳು ಎಚ್ಚರ ವಹಿಸಬೇಕು ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಮತ್ತು ಚಾ.ನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸೂಚನೆ ನೀಡಿದರು.
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಮಂಗಳವಾರ ಎಸ್ ಐ ಆರ್ ಸಂಬAಧ ಬೂತ್ ಮಟ್ಟದ ಸಭೆಯನ್ನು ನಡೆಸಿ ಮಾತನಾಡಿದ ಅವರು
ಪ್ರತಿಯೊಬ್ಬ ಮತದಾರರು ಕೂಡ ರಾಜ್ಯದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಹೆಸರನ್ನು ಉಳಿಸಿಕೊಳ್ಳುವ ಬಗ್ಗೆಯೂ ಜಾಗೃತಿಯನ್ನು ಮೂಡಿಸಬೇಕು ಎಂದು ಸಲಹೆ ನೀಡಿದರು.
ಮತದಾರರು ಹೆಸರು ಬಿಟ್ಟು ಹೋಗಿದ್ದಲ್ಲಿ, ಚುನಾವಣಾ ಆಯೋಗ ಸೂಚಿಸಿರುವ 11 ದಾಖಾಲಾತಿಗಳಲ್ಲಿ ಒಂದನ್ನು ಗುರುತಿನ ದಾಖಲೆಯಾಗಿ ನೀಡಿ, ನಿಮ್ಮ ಹೆಸರನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳಬೇಕು. ಬಿಟ್ಟು ಹೋದ
ಆರ್ಹ ಮತದಾರರು ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು ಎಂಬುದೇ ಎಸ್ಐ ಆರ್ ಪರಿಷ್ಕರಣೆಯ ಮುಖ್ಯ ಉದ್ದೇಶವಾಗಿದೆ.
ಬಿಎಲ್ಒಗಳು ಸಮೀಕ್ಷೆಗೆ ಬಂದ ವೇಳೆ ಹುಟ್ಟಿದ ದಿನಾಂಕ ದೃಢಪಡಿಸಿಕೊಳ್ಳಲು ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ ಶಾಲೆಯ ವರ್ಗಾವಣೆ ಪ್ರಮಾಣದಲ್ಲಿರುವಂತೆ ಜನ್ಮ ದಿನಾಂಕವನ್ನು ನಮೂದು ಮಾಡಬೇಕು ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಕಾಡ ಅಧ್ಯಕ್ಷ ರಂಗಸ್ವಾಮಿ, ಜಿ.ಪಂ ಮಾಜಿ ಸದಸ್ಯ ಕೆ.ಮಹದೇವ, ಪುರಸಭಾ ಮಾಜಿ ಅಧ್ಯಕ್ಷ ಹೆಳವರಹುಂಡಿ ಎನ್.ಸೋಮು, ಮಾಜಿ ಅಧ್ಯಕ್ಷೆ ವಸಂತ ಶ್ರೀಕಂಠ, ಟಿ.ಎಂ. ನಂಜುAಡಸ್ವಾಮಿ, ತಾ.ಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಮುಖಂಡರಾದ ಹುಣಸೂರು ಬಸವಣ್ಣ, ಸಂತೃಪ್ತಿ ಕುಮಾರ್, ಅವಮಾಸ್ಯೆ, ಉಕ್ಕಲಗೇರೆ ಬಸವಣ್ಣ, ಕರಿಯಪ್ಪ, ಸೋಮಣ್ಣ, ಅಂದಾನಿ, ಕುಪ್ಯಭಾಗ್ಯಮ್ಮ, ತಹಸೀಲ್ದಾರ್ ಟಿ.ಜಿ.ಸುರೇಶ್ಚಾರ್, ಇಓ ಡಾ.ಕೆ.ರಂಗಸ್ವಾಮಿ, ಬಿಸಿಎಂ ಎಂ.ರಾಜಣ್ಣ, ಸೆಸ್ಕಂಎಇಇ ವೀರೇಶ್, ಚರಿತಾ, ಶ್ವೇತಾ, ಪುರಸಭಾ ಮುಖ್ಯಾಧಿಕಾರಿ ಸಿ.ಶ್ರೀನಿವಾಸ್, ಕೆ.ಸಿ.ತ್ರಿವೇಣಿ, ಮಹೇಂದ್ರ, ವಿನಯಕುಮಾರ್, ಹರಿಶ್, ಹಾಗೂ ಇತರರು ಹಾಜರಿದ್ದರು.








