
ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ
ಬೆ0ಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಹಗರಣಕ್ಕೆ ಸಂಬ0ಧಿಸಿದ0ತೆ ಸಚಿವ ಬಿ. ನಾಗೇಂದ್ರ ಅವರು ಕೊನೆಗೂ ಶುಕ್ರವಾರ ಸಂಜೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ, ಒಂದೇ ಹಗರಣಕ್ಕಾಗಿ ಇಬ್ಬರು ಮುಖ್ಯಮಂತ್ರಿಗಳ ಅವಧಿಯಲ್ಲಿ ಎರಡು ಬಾರಿ ಸಚಿವ ಸ್ಥಾನ ಕಳೆದುಕೊಂಡ ಅಪರೂಪದ ವಿದ್ಯಮಾನಕ್ಕೆ ರಾಜ್ಯ ಸಾಕ್ಷಿಯಾಗಿದೆ.
ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಉಭಯ ಸದನಗಳ ಒಳಗೆ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿಪಕ್ಷ ಬಿಜೆಪಿ ನಡೆಸಿದ್ದ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರೊಂದಿಗೆ ನಡೆಸಿದ ಮಹತ್ವದ ಸಮಾಲೋಚನೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಪಕ್ಷ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ನಾಗೇಂದ್ರ ಅವರು ರಾಜೀನಾಮೆ ನೀಡುವುದೇ ಸೂಕ್ತ ಎಂಬ ಕಟ್ಟುನಿಟ್ಟಿನ ಸಂದೇಶವನ್ನು ವರಿಷ್ಠರು ರವಾನಿಸಿದ್ದರು ಎನ್ನಲಾಗಿದೆ.
ರಾಜೀನಾಮೆಗೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿ. ನಾಗೇಂದ್ರ, ಪ್ರತಿಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮನುವಾದಿಗಳ ಕುತಂತ್ರದಿ0ದ ನಾನು ಮೂರು ತಿಂಗಳು ಜೈಲಿಗೆ ಹೋಗಿದ್ದೆ. ಬಿಜೆಪಿ ಸದನವನ್ನು ನಡೆಯಲು ಬಿಡದೆ ಹಾಳು ಮಾಡಿದೆ. ದಲಿತರು, ಶೂದ್ರರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರು ಬದುಕಬಾರದು ಎನ್ನುವುದು ಬಿಜೆಪಿಯವರ ಮನುಸ್ಮöÈತಿ ಮನಸ್ಥಿತಿ ಎಂದು ಕಿಡಿಕಾರಿದರು.
ಉತ್ತರಕಾಂಡದಲ್ಲಿ ಶಂಭುಕನ ಹತ್ಯೆಯಾಯಿತು. ಆದರೆ ಇದು ವೇದ ಕಾಲ ಅಥವಾ ಪುರಾಣ ಕಾಲವಲ್ಲ. ಇದು ಸಂವಿಧಾನದ ಕಾಲ, ಅಂಬೇಡ್ಕರ್ ಯುಗ. ಈಗ ಶಂಭುಕನ ಹತ್ಯೆ ಮಾಡಲು ಸಾಧ್ಯವಿಲ್ಲ, ಸಂವಿಧಾನ ವಿರೋಧಿಗಳು ಈಗಲೂ ಮನುಸ್ಮöÈತಿ ಜಾರಿಗೆ ಪ್ರಯತ್ನಿಸುತ್ತಿದ್ದಾರೆ. ಆದರೆ ನಮ್ಮ ರಕ್ಷಣೆಗೆ ಸಂವಿಧಾನವಿದೆ ಎಂದು ಗುಡುಗಿದರು.
ವಾಲ್ಮೀಕಿ ನಿಗಮದ ಇದೇ ಹಗರಣಕ್ಕೆ ಸಂಬ0ಧಿಸಿದ0ತೆ ಬಿ. ನಾಗೇಂದ್ರ ಅವರು ಜೂನ್ 6, 2024ರಂದು ಅಂದಿನ ಸಿಎಂ ಸಿದ್ದರಾಮಯ್ಯ ಸಂಪುಟದಿ0ದ ಮೊದಲ ಬಾರಿಗೆ ರಾಜೀನಾಮೆ ನೀಡಿದ್ದರು. ತದನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ, ಇತ್ತೀಚೆಗಷ್ಟೇ (ಆಗಸ್ಟ್ 3, 2026) ನೂತನ ಸಿಎಂ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಮತ್ತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಈ ನಡೆಯನ್ನು ವಿರೋಧಿಸಿ ಪ್ರತಿಪಕ್ಷಗಳು ತೀವ್ರ ಪಟ್ಟು ಹಿಡಿದಿದ್ದರಿಂದ, ಅನಿವಾರ್ಯವಾಗಿ ಇದೀಗ ಮತ್ತೆ ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ.
ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ನಾಸೀರ್ ಹುಸೇನ್, ಸಿಎಂ ರಾಜಕೀಯ ಸಲಹೆಗಾರ ಡಾ.ಜಿ.ಸಿ.ಚಂದ್ರಶೇಖರ್, ಸಚಿವ ಡಾ.ಅಜಯ್ ಸಿಂಗ್, ಸಚಿವ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು.
ಇದು ಮನುಸ್ಮತಿ ಕಾಲವಲ್ಲ, ಅಂಬೇಡ್ಕರ್ ಯುಗ: ಬಿಜೆಪಿಗೆ ನಾಗೇಂದ್ರ ತಿರುಗೇಟು
ದೆಹಲಿ ಭೇಟಿ ಬಳಿಕ ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ ಪಡೆದ ಸಿಎಂ ಡಿಕೆ ಶಿವಕುಮಾರ್








