ಸಮಗ್ರ ಅಭಿವೃದ್ಧಿಗೆ ಸರ್ಕಾರ ಸಂಕಲ್ಪ : ಸಿಎಂ ಡಿ.ಕೆ.ಶಿವಕುಮಾರ್

 

ಚಾಮರಾಜನಗರ/ ಕೊಳ್ಳೆಗಾಲ : ಜಿಲ್ಲೆಯ ಜನರಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಶಕ್ತಿ ತುಂಬುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಸಂಕಲ್ಪ ತೊಟ್ಟಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.

ಕೊಳ್ಳೇಗಾಲ ಪಟ್ಟಣದ ಎಂಜಿಎಸ್ವಿ ಕಾಲೇಜು ಆವರಣದಲ್ಲಿ ನಡೆದ ಕೊಳ್ಳೇಗಾಲ-ಹನೂರು ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆಯನ್ನು ಡೋಲು ಬಾರಿಸುವ ಮೂಲಕ ನೆರವೇರಿಸಿ ಅವರು ಮಾತನಾಡಿದರು.

ಇಡೀ ಸರ್ಕಾರ ಚಾಮರಾಜನಗರ ಜನತೆಯ ಜೊತೆಗಿದೆ. ಈ ಹಿಂದೆ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಈ ಜಿಲ್ಲೆಗೆ 3 ಸಾವಿರ ಕೋಟಿ ರೂ.ಗಳ ಕಾಮಗಾರಿಯನ್ನು ನೀಡಿ, ಜಿಲ್ಲೆಯ ಜನರನ್ನು ಅಭಿವೃದ್ಧಿಯ ಪಥಕ್ಕೆ ಕರೆದೊಯ್ಯುಲಾಗಿತ್ತು. ಜನರಿಂದ ಅಧಿಕಾರಕ್ಕೆ ಬಂದ ನಮ್ಮ ಗ್ಯಾರಂಟಿ ಸರ್ಕಾರ, ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಶಂಕುಸ್ಥಾಪನೆ ನೆರವೇರಿಸಿದೆ. ನಮ್ಮ ಮಂತ್ರಿಗಳು, ಸಂಸದರು, ಶಾಸಕರು ಸೇರಿದಂತೆ ಇಡೀ ಸರ್ಕಾರ ನಿಮ್ಮೊಂದಿಗಿದೆ. ಟೀಕೆ ಎದುರಿಸಿ ಗೆದ್ದರೆ ನಾಯಕನಾಗುತ್ತಾನೆ. ಸೋತರೆ ಮಾರ್ಗದರ್ಶಕನಾಗುತ್ತಾನೆ. ಈ ಭಾಗದ ಎಲ್ಲಾ ಜನಪ್ರತಿನಿಧಿಗಳು ಕ್ಷೇತ್ರದ ಹಾಗೂ ಜನರ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ನಿಮಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಶಕ್ತಿ ತುಂಬಲು ಸೇವೆ ಮಾಡುತ್ತಿದ್ದಾರೆ ಎಂದರು.

ಕೊಳ್ಳೇಗಾಲಕ್ಕೆ ಒಳ್ಳೆಯ ಕಾಲ ಬಂದಿದೆ : ಶಿವನು ಗಂಗೆಗೆ ತನ್ನ ತಲೆಯ ಮೇಲೆ ಸ್ಥಾನ ನೀಡಿದ್ದರೆ, ಕಾಂಗ್ರೆಸ್ ಸರ್ಕಾರ ಜನರ ಹೃದಯಗಳಲ್ಲಿ ಸ್ಥಾನ ಪಡೆದಿದೆ. ಕೊಳ್ಳೆಗಾಲಕ್ಕೆ ಒಳ್ಳೆಯ ಕಾಲ ಬಂದಿದೆ. ಇಲ್ಲಿಗೆ ಅಭಿವೃದ್ಧಿ ಕಾಲಿಟ್ಟಿದೆ. ಹನೂರಿಗೆ ಅಭಿವೃದ್ಧಿ ಹರಿಯುತ್ತಿದೆ. ಕೊಳ್ಳೆಗಾಲದಲ್ಲಿ ರೇಷ್ಮೆ ಪಾರಂಪರಿಕ ವೃತ್ತಿಯಾಗಿದೆ. ನಾನು ಕೂಡ ರೇಷ್ಮೆ ನಾಡಿನಿಂದ ಬಂದವನು. ಕನಕಪುರ, ರಾಮನಗರ, ಮಾಗಡಿ, ಕೊಳ್ಳೆಗಾಲ, ಮಳವಳ್ಳಿ, ಹನೂರು, ಶಿಡ್ಲಘಟ್ಟಗಳಲ್ಲಿ ಅತಿ ಹೆಚ್ಚು ರೇಷ್ಮೆ ಬೆಳೆಯಲಾಗುತ್ತಿದೆ. ಮೈಸೂರು ಸಿಲ್ಕ್ ಪ್ರಸಿದ್ಧ ಬ್ರಾಂಡ್. ಟಿಪುö್ಪಸುಲ್ತಾನ್ ಅವರು ನಾಡಿಗೆ ರೇಷ್ಮೆ ಪರಿಚಯಿಸಿದರು. ಪ್ರಸ್ತುತ ಬಳ್ಳಾರಿ, ಹಾವೇರಿ, ಗದಗ ಸೇರಿದಂತೆ ವಿವಿಧೆಡೆ ರೇಷ್ಮೆ ಬೆಳೆಯಲಾಗುತ್ತಿದೆ. ಚೈನಾದಿಂದ ರೇಷ್ಮೆ ಆಮದು ನಿಂತ ಮೇಲೆ, ನಮ್ಮ ರೇಷ್ಮೆಗೆ ಉತ್ತಮ ಬೆಲೆ ದೊರೆಯುತ್ತಿದೆ. ಇದನ್ನು ಶಾಶ್ವತವಾಗಿ ಉಳಿಸಲು ಮಂಗಳೂರಿನ ಸಂಪುಟ ಸಭೆಯಲ್ಲಿ ಕೈಮಗ್ಗ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡಲು ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ನಿಮ್ಮೆಲ್ಲರ ಬದುಕಿಗೆ ಹೊಸ ರೂಪ ನೀಡುವ ನಿರ್ಧಾರ ಮಾಡಿದೆ ಎಂದರು.

2028ಕ್ಕೂ ಗ್ಯಾರಂಟಿಗಳು ಮುಂದುವರೆಯಲಿದೆ: ಮುಂದಿನ ದಿನಗಳಲ್ಲಿಯೂ ನಿಮ್ಮ ಶಕ್ತಿ ಸ್ಪೂರ್ತಿ ಹಾಗೂ ನಮ್ಮ ಅಭಿವೃದ್ಧಿಯಿಂದ 2028 ಕ್ಕೂ ನಿಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಎಲ್ಲ ಗ್ಯಾರಂಟಿಗಳು ಮುಂದುವರೆಯಲಿದೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತರುವ ಶಪಥ ನಾವು ಮಾಡಿದ್ದೇವೆ. ಅಭಿವೃದ್ಧಿ ಎಂದರೆ ಕಟ್ಟಡ ಮಾತ್ರವಲ್ಲ, ಜನರ ಕನಸುಗಳನ್ನು ರೂಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಹೊಸ ಕಾಮಗಾರಿಗಳಿಗೆ ಭರವಸೆಯ ದೊಡ್ಡ ಆರಂಭ : ಸುಮಾರು 25 ಕ್ಕೂ ಹೆಚ್ಚು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿದೆ. ಹೊಸ ಕಾಮಗಾರಿಗಳಿಗೆ ಭರವಸೆಯ ದೊಡ್ಡ ಆರಂಭ ನೀಡಲಾಗಿದೆ. ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇವೆ. ನಾನು ಸಿಎಂ ಆದ ನಂತರ, ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಮಾಡಿದ್ದೇನೆ. ಪ್ರಜಾಸೇವೆ ಇಲಾಖೆಯಿಂದ ಶಾಸಕರು, ಸಚಿವರು ರಾಜ್ಯದ ಪ್ರತಿ ಜಿಲ್ಲೆ, ತಾಲ್ಲೂಕು, ಹೋಬಳಿ, ಪಂಚಾಯತಿಗಳಿಗೆ ಮೊದಲನೇ ಮತ್ತು ಮೂರನೇ ಶನಿವಾರ ಭೇಟಿ ನೀಡಲು ಸೂಚನೆ ನೀಡಿದ್ದೇನೆ ಎಂದರು.

ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲು ಬೇಡಿಕೆಯಿದ್ದು, ಇದನ್ನು ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ನೀರಾವರಿ ಇಲಾಖೆಯ ಮೂಲಕ ಅನೇಕ ಕಾಮಗಾರಿಗಳನ್ನು ಕೈಗೊಂಡು ಜಿಲ್ಲೆಯನ್ನು ಕೃಷಿ ಯೋಗ್ಯ ಭೂಮಿ ಮಾಡಲು ಕೋಟ್ಯಾಂತರ ಹಣ ಬಿಡುಡೆ ಮಾಡುತ್ತಾ ಬಂದಿದೆ” ಎಂದರು.

ಭಾರತ್ ಜೋಡೋ ಯಾತ್ರೆ ನಡೆದಲ್ಲೆಲ್ಲಾ ಕಾಂಗ್ರೆಸ್ ಗೆ ಗೆಲುವು : ರಾಹುಲ್ ಗಾಂಧಿಯವರು ತಮಿಳುನಾಡಿನಿಂದ ಈ ಜಿಲ್ಲೆಗೆ ಬಂದು ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು. ಅವರು ನಡೆದಲ್ಲೆಲ್ಲಾ, ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ ಜನರು ಇತಿಹಾಸ ನಿರ್ಮಿಸಿದರು. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ. ದಾನಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟು ಜನರ ಜೀವನಮಟ್ಟ ಸುಧಾರಿಸಿದೆ. ಪ್ರತಿ ಜಿಲ್ಲೆಯಲ್ಲಿಯೂ 50 ಸಾವಿರ ನಿವೇಶನ ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ? ಎಂದರು.

ಕರ್ನಾಟಕ ಹೊಸ ರೂಪಕ್ಕೆ ಹೆಜ್ಜೆ ಇಟ್ಟಿದೆ :

ಕೆಲವು ಪಕ್ಷದವರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದರೆ, ಅದು ಹಗಲುಕನಸು. ಈ ರಾಜ್ಯ ಹೊಸ ರೂಪಕ್ಕೆ ಹೆಜ್ಜೆ ಇಟ್ಟಿದೆ. ಇಂದು ಸುವರ್ಣಾವತಿ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಸರಣಿ ಕೆರೆಗಳ ಸಮಗ್ರ ಅಭಿವೃದ್ಧಿಗೆ 120 ಕೋಟಿ ಕಾಮಗಾರಿಗೆ ಕಾರ್ಯದೇಶ ನೀಡಲಾಗಿದೆ. ಹನೂರಿನಲ್ಲಿ ಅಂತರ್ಜಲ ಅಭಿವೃಧ್ಧಿಗೆ ಸೂಕ್ತ ಅನುದಾನ ನೀಡಲಾಗಿದೆ. ಚಾಮರಾಜನಗರದ ಬಳಿ ಕಾಲುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗುಂಡ್ಲುಪೇಟೆ ತಾಲ್ಲೂಕಿಗೆ 450 ಕೋಟಿ ವೆಚ್ಚದಲ್ಲಿ ನೀರಾವರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 1000 ಕೋಟಿ ರೂ.ಗಳ ನೀರಾವರಿ ಕಾಮಗಾರಿಗಳನ್ನು ನೀಡಲಾಗಿದ್ದು, ನನ್ನ ಅವಧಿಯಲ್ಲಿ ಇಷ್ಟು ದೊಡ್ಡ ಅಭಿವೃದ್ಧಿಯನ್ನು ಜಿಲ್ಲೆ ಕಾಣುತ್ತಿದೆ. ಅಲ್ಪಸಂಖ್ಯಾತರು ಹಾಗೂ ಬುಡಕಟ್ಟು ಜನಾಂಗದವರ ಆಹಾರ ಕಿಟ್ ಗಳ ಬೇಡಿಕೆಗಳನ್ನು ಪರಿಗಣಿಸಲು ನನ್ನ ಸರ್ಕಾರ ಬದ್ಧವಾಗಿದೆ” ಎಂದರು.

ಇದೇ ಸಂದರ್ಭದಲ್ಲಿ ಸಿಎಂ ಡಿ.ಕೆ. ಶಿವಕು ಮಾರ್ ಅವರು ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ವಿವಿಧ ಇಲಾಖೆ ವತಿಯಿಂದ ದೊರೆಯುವ ಸವಲತ್ತುಗಳನ್ನು ವಿತರಿಸಿದರು.ಕಾರ್ಯಕ್ರಮದಲ್ಲಿ ಸಚಿವರಾದ ಸಿ.ಪುಟ್ಟರಂ ಗಶೆಟ್ಟಿ, ಮುನಿಯಪ್ಪ, ಯು.ಟಿ.ಖಾದರ್, ಚಲುವರಾಯಸ್ವಾಮಿ, ಸಂಸದ ಸುನೀಲ್ ಬೋಸ್ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಗಣೇಶ್ ಪ್ರಸಾದ್, ಮಂಜುನಾಥ್, ಮಾಜಿ ಶಾಸಕ ಆರ್.ನರೇಂದ್ರ, ಕಾಡಾ ಅಧ್ಯಕ್ಷ ಪಿ.ಮರೀಸ್ವಾಮಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ವಿ.ಚಂದ್ರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಯೋಗೇಶ್, ಜಿಲ್ಲಾಧಿಕಾರಿ ಶ್ರೀರೂಪ, ಸಿಇಒ ಮೋನಾರೋತ್, ಎಸ್ಪಿ ಮುತ್ತುರಾಜ್ ಸೇರಿದಂತೆ ಇತರರು ಇದ್ದರು.ನುಡಿದಂತೆ ನಡೆಯುವ ಇತಿಹಾಸ ನಮ್ಮ ಸರ್ಕಾರಕ್ಕಿದೆ
ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ನನ್ನನ್ನೂ ಒಳಗೊಂಡAತೆ ಜಿಲ್ಲೆಯ ನಾಯಕರು, ಕೊರೋನಾದಿಂದ ಮರಣ ಹೊಂದಿದ 33 ಜನರ ಮನೆಗಳಿಗೆ ಭೇಟಿ ನೀಡಿ, ಧೈರ್ಯ ತುಂಬಿದ್ದೆವು. ಮೈಸೂರು ಮಹಾರಾಜರು ನಿಮ್ಮ ಭೂಮಿಗೆ ಶಕ್ತಿ, ಇತಿಹಾಸ ನೀಡಿದ್ದಾರೆ. ಈ ಜಿಲ್ಲೆಯಲ್ಲಿ ಚಾಮರಾಜೇಶ್ವರ ದೇವಸ್ಥಾನವಿದೆ. ಅವರು ಆಳಿದ ಪ್ರದೇಶವಿದು. ಅವರ ನೆನಪಿನಲ್ಲಿ ಚಾಮರಾಜನಗರವೆಂದು ಜಿಲ್ಲೆಗೆ ಹೆಸರಿಡಲಾಗಿದೆ. ಈ ಜಿಲ್ಲೆ ದಟ್ಟವಾದ ಅರಣ್ಯ, ವನ್ಯಮೃಗಗಳ ಧಾಮ ಮತ್ತು ಸಂಸ್ಕöÈತಿಯ ತಾಣವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಶಾಸಕರನ್ನು ನೀಡಿರುವ ಜಿಲ್ಲೆಯಿದು ಎಂದರು.

Recent Articles

spot_img

Related Stories

Share via
Copy link