ದಿಲ್ಲಿಯಲ್ಲಿ 2ನೇ ದಿನ ಜಿರಲೆ ಹೋರಾಟ : ಸಿಇಸಿ ರಾಜೀನಾಮೆಗೆ ಆಗ್ರಹ : 200ಕ್ಕೂ ಹೆಚ್ಚು ಪ್ರತಿಭಟನಾಕಾರರ ವಶ

ನವದೆಹಲಿ: ದೆಹಲಿಯಾದ್ಯಂತ ಬಿಗಿ ಭದ್ರತೆಯ ನಡುವೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆಯು ಎರಡನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರವಾದ ಘೋಷಣೆಗಳನ್ನು ಕೂಗುತ್ತಾ ಜಂತರ್ ಮಂತರ್‌ನತ್ತ ಮೆರವಣಿಗೆ ಹೋಗುತ್ತಿದ್ದ 200ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಹಲವರನ್ನು ಎಳೆದುಕೊಂಡು ಹೋಗಿ ಪೊಲೀಸ್ ಬಸ್‌ಗಳಿಗೆ ಹತ್ತಿಸುತ್ತಿರುವುದು ಕಂಡುಬAದಿದೆ.

ರಾಜಧಾನಿಯ ವಿವಿಧ ಭಾಗಗಳಿಂದ ಜಂತರ್ ಮಂತರ್‌ನತ್ತ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದಾಗ ಸಿಜೆಪಿ ಬೆಂಬಲಿಗರೊAದಿಗೆ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ ಮತ್ತು ಕ್ರಾಂತಿಕಾರಿ ಯುವ ಸಂಘಟನೆ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳ ಸದಸ್ಯರನ್ನು ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದವರಲ್ಲಿ ಸಿಪಿಐ(ಎಂ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಕೂಡ ಸೇರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರತ್ತ ತೆರಳಿ ಅವರನ್ನು ಚದುರಿಸಲು ಪ್ರಯತ್ನಿಸಿದರು. ಪೊಲೀಸರು ವಶಕ್ಕೆ ಪಡೆದು ಬಸ್‌ಗಳತ್ತ ಕರೆದೊಯ್ಯುತ್ತಿದ್ದಾಗ ಹಲವು ಪ್ರತಿಭಟನಾಕಾರರು ತೀವ್ರ ಪ್ರತಿರೋಧ ಒಡ್ಡಿದರು.

ಆರ್‌ಕೆ ಆಶ್ರಮ ಮಾರ್ಗ್ ಮೆಟ್ರೋ ನಿಲ್ದಾಣದಿಂದ ಮೆರವಣಿಗೆ ನಡೆಸುತ್ತಿದ್ದವರನ್ನೂ ವಶಕ್ಕೆ ಪಡೆಯಲಾಯಿತು. ಪ್ರತಿಭಟನಾಕಾರರು ಜಂತರ್ ಮಂತರ್ ತಲುಪುವುದನ್ನು ತಡೆಯಲು ಪೊಲೀಸರು ಹಲವು ಕಡೆಗಳಲ್ಲಿ ಭಾರಿ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ.

ಆರ್‌ಕೆ ಆಶ್ರಮ ಮಾರ್ಗ್ ಬಳಿ 40ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಗರದಾದ್ಯಂತ ವಶಕ್ಕೆ ಪಡೆದವರ ಒಟ್ಟು ಸಂಖ್ಯೆ 200ರ ಆಸುಪಾಸಿಗೆ ತಲುಪಿದೆ ಎಂದು ಅವರು ಹೇಳಿದರು.

ತಮ್ಮ ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದು ನಂಗ್ಲೋಯಿಯ ಸೂರಜ್‌ಮಲ್ ಕ್ರೀಡಾಂಗಣಕ್ಕೆ ಕರೆದೊಯ್ಯಲಾಗಿದೆ. ಅಖಿಲ ಭಾರತ ಅಧ್ಯಕ್ಷ ಆದರ್ಶ್ ಎಂ. ಸಾಜಿ, ದೆಹಲಿ ರಾಜ್ಯ ಕಾರ್ಯದರ್ಶಿ ಸೂರಜ್ ಎಲಮೋನ್, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಅಭಿಜಿತ್ ಮಣಿಲಾಲ್ ಮತ್ತು ಇತರ ಹಲವು ಸದಸ್ಯರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಎಫ್‌ಐ ಹೇಳಿಕೆಯಲ್ಲಿ ತಿಳಿಸಿದೆ.

ಪಂಜರದAತಹ ಪೊಲೀಸ್ ವ್ಯಾನ್‌ಗಳ ಒಳಗೆ ತಮ್ಮ ನಾಯಕರ ಮೇಲೆ ಹಲ್ಲೆ ನಡೆಸಲಾಗಿದೆ. ಬ್ರಿಟ್ಟಾಸ್ ಅವರ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಮತ್ತು ನಂತರ ಅವರನ್ನು ಗಾಯಗೊಂಡ ಸ್ಥಿತಿಯಲ್ಲಿ ರಸ್ತೆ ಬದಿ ಬಿಟ್ಟುಹೋಗಿದ್ದಾರೆ ಎಂದು ಆರೋಪಿಸಿದೆ.

ದೆಹಲಿಯ ಸೇಕ್ರೆಡ್ ಹಾರ್ಟ್ ಚರ್ಚ್ನ ಧರ್ಮಗುರು ಫಾದರ್ ಬಿಜು ಕ್ಸೇವಿಯರ್ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಪೊಲೀಸರ ದೌರ್ಜನ್ಯದ ದೃಶ್ಯವನ್ನು ಸೆರೆಹಿಡಿಯುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ ಎಂದು ಆ ಸಂಘಟನೆ ದೂರಿದೆ.

ಭಾನುವಾರ ಮಧ್ಯಾಹ್ನ 2.30ಕ್ಕೆ ಆರ್‌ಕೆ ಆಶ್ರಮ ಮಾರ್ಗದಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದ ಎಐಎಸ್?ಎ ಅಧ್ಯಕ್ಷೆ ನೇಹಾ ಬೋರಾ, ವಿಜಯ್ ಚೌಕ್ ಬಳಿ ಇತರ ಪ್ರತಿಭಟನಾಕಾರರೊಂದಿಗೆ ವಶಕ್ಕೆ ಪಡೆಯಲಾಯಿತು. ಭದ್ರತಾ ಸಿಬ್ಬಂದಿ ತಮ್ಮತ್ತ ಬರುತ್ತಿದ್ದಂತೆ, ಬೋರಾ ಅವರು ಸಂಘಟನೆಯ ಇತರ ಸದಸ್ಯರೊಂದಿಗೆ ಘೋಷಣೆಗಳನ್ನು ಕೂಗುತ್ತಿರುವುದು ದೃಶ್ಯಗಳಲ್ಲಿ ಕಂಡುಬAದಿದೆ. ಪೊಲೀಸರು ತಡೆಯಲು ಮತ್ತು ವಶಕ್ಕೆ ಪಡೆಯಲು ಪ್ರಯತ್ನಿಸಿದಾಗ ಅವರು ಮತ್ತು ಇತರ ಪ್ರತಿಭಟನಾಕಾರರು ಪ್ರತಿರೋಧ ಓಡುತ್ತಿರುವುದು ಕಂಡುಬAದಿತು.

ಕಾನಾಟ್ ಪ್ಲೇಸ್ ಮೆಟ್ರೋ ನಿಲ್ದಾಣ ಮತ್ತು ಗುರುದ್ವಾರ ಬಾಂಗ್ಲಾ ಸಾಹಿಬ್ ಬಳಿ ತಮ್ಮ ಹಲವಾರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಜೆಪಿ ತಿಳಿಸಿದೆ. ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ಪ್ರತಿಭಟನಾಕಾರರು ಮಾನವ ಸರಪಳಿಯನ್ನು ರಚಿಸಲು ಪ್ರಯತ್ನಿಸುತ್ತಿರುವುದನ್ನು ಸಂಘಟನೆ ಹಂಚಿಕೊAಡಿರುವ ವೀಡಿಯೊಗಳು ತೋರಿಸಿವೆ. ಗುರುದ್ವಾರ ಬಾಂಗ್ಲಾ ಸಾಹಿಬ್ ಬಳಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವೈದ್ಯರು ಮತ್ತು ಇತರ ಪ್ರತಿಭಟನಾಕಾರರನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ಸಂಘಟನೆ ಆರೋಪಿಸಿದೆ.

ಮತ್ತೊಂದು ಬೆಳವಣಿಗೆಯಲ್ಲಿ, ನಿಗಂಬೋಧ್ ಘಾಟ್ ಬಳಿ ಕೆವೈಎಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪೋಸ್ಟರ್‌ಗಳನ್ನು ಹಿಡಿದು, ಅವರು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಕಾನಾಟ್ ಪ್ಲೇಸ್ ಬಳಿಯೂ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸುತ್ತಿರುವುದು ಕಂಡುಬAದಿದೆ. ಭದ್ರತೆಯ ಕಾರಣಕ್ಕಾಗಿ ದೆಹಲಿಯಾದ್ಯಂತ 30 ಸಾವಿರಕ್ಕೂ ಹೆಚ್ಚು ಪೊಲೀಸ್ ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

 

ಇಸ್ತೀಫಾ ದೋ, ಇಸ್ತೀಫಾ ದೋ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ, ಪ್ರತಿಭಟನಾಕಾರರು ಕನ್ನಾಟ್ ಪ್ಲೇಸ್‌ನ ಇನ್ನರ್ ಸರ್ಕಲ್ ಮತ್ತು ರಾಜೀವ್ ಚೌಕ್ ಬಳಿ ಮೆರವಣಿಗೆ ನಡೆಸುತ್ತಿರುವ ದೃಶ್ಯಗಳು ಕಂಡುಬAದವು. ಜ್ಞಾನೇಶ್ ಕುಮಾರ್ ಇಸ್ತೀಫಾ ದೋ, ಇಸ್ತೀಫಾ ದೋ (ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿ) ಎಂದು ಪ್ರತಿಭಟನಾಕಾರರು ಕೂಗುತ್ತಿದ್ದುದು ಕೇಳಿಸಿತು.

Recent Articles

spot_img

Related Stories

Share via
Copy link