ಇಲಾಖೆ ಸ್ಪಷ್ಟಿಕರಣದ ನಂತರವು ಸ್ಥಳಾಂತರದ ಕ್ರಮದ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ

ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಮಾನವ – ಆನೆ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಆರಂಭಿಸಿರುವ ಆಪರೇಷನ್ ಗಜ ಕಾರ್ಯಾಚರಣೆ ಇದೀಗ ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳ ವಿರೋಧ, ಶಾಸಕಿ ನಯನಾ ಮೋಟಮ್ಮ ಅವರ ರಾಜೀನಾಮೆ ಹಾಗೂ ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನಕ್ಕೆ ಕಾರಣವಾಗಿದೆ. ಹಾಸನದ ಕಾಡಾನೆ ಸಮಸ್ಯೆಯನ್ನು ಚಿಕ್ಕಮಗಳೂರು ಜಿಲ್ಲೆಗೆ ವರ್ಗಾಯಿಸುವ ಉದ್ದೇಶ ಕಾರ್ಯಾಚರಣೆಗೆ ಇಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದ್ದರೂ, ಸ್ಥಳಾಂತರದ ಕ್ರಮದ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ತೀವ್ರಗೊಂಡಿದೆ.
ಹಾಸನದ ಮಾನವ – ಆನೆ ಸಂಘರ್ಷ ಹೆಚ್ಚಿರುವ ಪ್ರದೇಶಗಳಿಂದ ಕಾಡಾನೆಗಳನ್ನು ಸೂಕ್ತ ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆಗೆ ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರು, ತಮ್ಮ ಕ್ಷೇತ್ರದ ಜನರ ಸುರಕ್ಷತೆಯನ್ನು ಕಡೆಗಣಿಸಿ ಆನೆಗಳನ್ನು ಬಲವಂತವಾಗಿ ಚಿಕ್ಕಮಗಳೂರು ಕಡೆಗೆ ಓಡಿಸಲಾಗುತ್ತಿದೆ ಎಂದು ಆರೋಪಿಸಿ ವಿಧಾನಸಭಾಧ್ಯಕ್ಷರ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಕಾರ್ಯಾಚರಣೆಗೆ ಸಂಬAಧಿಸಿದAತೆ ಸಲ್ಲಿಸಿದ ಸ್ಥಿತಿಗತಿ ವರದಿಯಲ್ಲಿ ಅರಣ್ಯ ಇಲಾಖೆ, ಆನೆಗಳ ಚಲನವಲನದ ಮೇಲೆ ಮೂರು ತಂಡಗಳು ನಿಗಾ ಇರಿಸಿರುವುದಾಗಿ ತಿಳಿಸಿದೆ. ಸುಮಾರು 35 ಆನೆಗಳ ಎರಡು ದೊಡ್ಡ ಗುಂಪುಗಳು ಹಾಗೂ ಪ್ರತ್ಯೇಕವಾಗಿ ಸಂಚರಿಸುತ್ತಿರುವ ಆನೆಗಳ ಚಲನೆ ಗಮನಿಸಲಾಗುತ್ತಿದೆ. 17 ಮತ್ತು 18 ಆನೆಗಳ ಗುಂಪುಗಳು ತಟ್ಕೊಳ ಮೀಸಲು ಅರಣ್ಯದತ್ತ ಸಾಗಿದ್ದು, ಅವುಗಳ ಸಹಜ ಚಲನವಲನಕ್ಕೆ ಅವಕಾಶ ಕಲ್ಪಿಸುವುದು ಕಾರ್ಯಾಚರಣೆಯ ಉದ್ದೇಶ ಎಂದು ಇಲಾಖೆ ಹೇಳಿದೆ.
ಆನೆಗಳನ್ನು ಬಲವಂತವಾಗಿ ಓಡಿಸುವ ಬದಲು, ಅವುಗಳ ಐತಿಹಾಸಿಕ ಸಂಚಾರ ಮಾರ್ಗ ಹಾಗೂ ಅರಣ್ಯ ಪ್ರದೇಶಗಳ ಸಂಪರ್ಕವನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ. ಆನೆಗಳು ಕೃಷಿ ಜಮೀನು ಅಥವಾ ಜನವಸತಿ ಪ್ರದೇಶಗಳಿಗೆ ಪ್ರವೇಶಿಸಿದರೆ, ಗುಂಪುಗಳಾಗಿ ವಿಭಜನೆಯಾದರೆ ಅಥವಾ ಮತ್ತೆ ಹಾಸನ, ಬೇಲೂರು ಹಾಗೂ ಮೂಡಿಗೆರೆ ಕಡೆಗೆ ಹಿಂದಿರುಗಿದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಪರಿಶೀಲನೆ ನಡೆದಿದೆ.
ಆನೆಗಳ ಹಾವಳಿ ತಡೆಗೆ ಆನೆ ತಡೆ ಕಂದಕಗಳ ದುರಸ್ತಿ, ಸೌರ ಬೇಲಿಗಳ ಪುನಃಸ್ಥಾಪನೆ, ವಿದ್ಯುತ್ ಸಂಪರ್ಕ ಹಾಗೂ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಸೇರಿದಂತೆ ಹಲವು ಕ್ರಮಗಳನ್ನು ಇಲಾಖೆ ಪರಿಶೀಲಿಸುತ್ತಿದೆ. ತರಬೇತಿ ಪಡೆದ ಕುಮ್ಕಿ ಆನೆಗಳು, ಮಾವುತರು ಮತ್ತು ಪಶುವೈದ್ಯಕೀಯ ತಂಡಗಳೊAದಿಗೆ ತಾತ್ಕಾಲಿಕ ಶಿಬಿರ ಸ್ಥಾಪಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಇವು ಇನ್ನೂ ಪ್ರಸ್ತಾವನೆ ಮತ್ತು ಪರಿಶೀಲನೆಯ ಹಂತದಲ್ಲಿವೆ ಎಂದು ವರದಿ ಸ್ಪಷ್ಟಪಡಿಸಿದೆ.
ಆನೆಧಾಮವೇ ಶಾಶ್ವತ ಪರಿಹಾರ?
ಇದೇ ವೇಳೆ, ಕಾಡಾನೆ ಸಮಸ್ಯೆಗೆ ಆನೆಧಾಮ ಅಥವಾ ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್? ಪರಿಹಾರವಾಗಬಲ್ಲದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ. ತಾವು ಹಿಂದಿನ ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಈ ಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ, ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅನುಮತಿ ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ತಿರಸ್ಕರಿಸಿತ್ತು ಎಂದು ಅವರು ತಿಳಿಸಿದ್ದಾರೆ.
ಆನೆ – ಮಾನವ ಸಂಘರ್ಷಕ್ಕೆ ದೀರ್ಘಕಾಲಿಕ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವನ್ನು ಈ ಬೆಳವಣಿಗೆ ಮತ್ತೆ ಮುನ್ನೆಲೆಗೆ ತಂದಿದೆ. ಕಾಡಾನೆಗಳನ್ನು ಸ್ಥಳಾಂತರಿಸುವುದಷ್ಟೇ ಸಮಸ್ಯೆಗೆ ಪರಿಹಾರವಾಗುವುದಿಲ್ಲ; ಅವುಗಳ ಸಂಚಾರ ಮಾರ್ಗಗಳ ಸಂರಕ್ಷಣೆ, ಅರಣ್ಯ ಪ್ರದೇಶಗಳ ವಿಸ್ತರಣೆ ಮತ್ತು ಕಾಡಿನಂಚಿನ ಗ್ರಾಮಗಳ ಸುರಕ್ಷತೆಯೂ ಮುಖ್ಯವಾಗಿವೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ರಾಜೀನಾಮೆ ವಿಚಾರದಿಂದ ಪಕ್ಷದೊಳಗೆ ಚರ್ಚೆ
ನಯನಾ ಮೋಟಮ್ಮ ಅವರ ರಾಜೀನಾಮೆ ವಿಚಾರ ಕಾಂಗ್ರೆಸ್ ಪಕ್ಷದೊಳಗೂ ಚರ್ಚೆಗೆ ಕಾರಣವಾಗಿದೆ. ಕಾರ್ಯಾಚರಣೆ ಆರಂಭಿಸುವ ಮುನ್ನ ಸಂಬAಧಪಟ್ಟ ಕ್ಷೇತ್ರಗಳ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂಬುದು ಶಾಸಕರ ಪ್ರಮುಖ ಆಕ್ಷೇಪ. ನವೆಂಬರ್ 25ರಂದು ನಡೆಯಬೇಕಿದ್ದ ಸಭೆಯನ್ನು ನವೆಂಬರ್ 30ಕ್ಕೆ ಮುಂದೂಡಲಾಗಿತ್ತು. ಆದರೆ, ಅದಕ್ಕೂ ಮುನ್ನವೇ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಚಿಕ್ಕಮಗಳೂರು ಶಾಸಕ ಟಿ.ಡಿ. ತಮ್ಮಯ್ಯ ಹಾಗೂ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಕೂಡ ಆನೆಗಳನ್ನು ಚಿಕ್ಕಮಗಳೂರು ಜಿಲ್ಲೆಗೆ ಸ್ಥಳಾಂತರಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಜನರ ಜೀವ, ಬೆಳೆ ಮತ್ತು ಜೀವನೋಪಾಯಕ್ಕೆ ಅಪಾಯ ಎದುರಾಗಬಹುದು ಎಂಬ ಆತಂಕವನ್ನು ಅವರು ಮುಂದಿಟ್ಟಿದ್ದಾರೆ. ಹಾಸನ ಡಿಎಫ್ಒ ಹರೀಶ್ ಅವರನ್ನು ಅಮಾನತುಗೊಳಿಸುವಂತೆಯೂ ಟಿ.ಡಿ. ತಮ್ಮಯ್ಯ ಒತ್ತಾಯಿಸಿದ್ದಾರೆ.
ಇತ್ತ, ಶಾಸಕಿ ನಯನಾ ಮೋಟಮ್ಮ ಅವರ ರಾಜೀನಾಮೆ ನಡೆಗೆ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ ಎನ್ನಲಾಗಿದೆ. ಕಾಡಾನೆಗಳನ್ನು ಕಾಡಿಗೆ ಬಿಡದೆ ಬೇರೆಲ್ಲಿಗೆ ಸ್ಥಳಾಂತರಿಸಬೇಕು? ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ರಾಜೀನಾಮೆ ನಿರ್ಧಾರದಿಂದ ಎಷ್ಟು ನೆರವಾಗುತ್ತದೆ? ಎಂಬ ಪ್ರಶ್ನೆಗಳು ಪಕ್ಷದೊಳಗೆ ಕೇಳಿಬರುತ್ತಿವೆ.
ಒಟ್ಟಾರೆ, ಮಾನವ – ಆನೆ ಸಂಘರ್ಷಕ್ಕೆ ಪರಿಹಾರ ಹುಡುಕುವ ಉದ್ದೇಶದಿಂದ ಆರಂಭವಾದ ಆಪರೇಷನ್ ಗಜ ಇದೀಗ ಅರಣ್ಯ ಇಲಾಖೆ, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಆಡಳಿತಾರೂಢ ಕಾಂಗ್ರೆಸ್ ನಡುವಿನ ವಿವಾದವಾಗಿ ರೂಪುಗೊಂಡಿದೆ. ಆನೆಗಳ ಸುರಕ್ಷಿತ ಸ್ಥಳಾಂತರದ ಜೊತೆಗೆ ಕಾಡಿನಂಚಿನ ಜನರ ಆತಂಕ ನಿವಾರಿಸುವ ಸಮನ್ವಯದ ಕ್ರಮವೇ ಈ ವಿವಾದಕ್ಕೆ ಅಂತಿಮ ಪರಿಹಾರವಾಗಬೇಕಿದೆ.
ಗಜ ಸಮಸ್ಯೆಗೆ ಆನೆಧಾಮ ಪರಿಹಾರ
ಕೇಂದ್ರದಿAದ ಅನುಮತಿ ಇಲ್ಲ
ವಿಕಾಸಸೌಧದಲ್ಲಿ 6,342 ಗ್ರಾಮ ಗ್ರಂಥಾಲಯಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಈಶ್ವರ ಖಂಡ್ರೆ ಅವರು ರಾಜ್ಯದ ಕಾಡಿನಂಚಿನ ಗ್ರಾಮಗಳಲ್ಲಿನ ಆನೆ ಮತ್ತು ಮಾನವ ಸಂಘರ್ಷಕ್ಕೆ ಆನೆಧಾಮ (ಎಲಿಫೆಂಟ್ ಸಾಫ್ಟ್ ರಿಲೀಸ್ ಸೆಂಟರ್) ಪರಿಹಾರವಾಗಬಲ್ಲದು. ಈ ಹಿಂದೆ ಅರಣ್ಯ ಸಚಿವನಾಗಿದ್ದಾಗ ಈ ಯೋಜನೆ ರೂಪಿಸಿದ್ದೆ. ಆದರೆ, ಕೇಂದ್ರ ಸರ್ಕಾರ ಹುಲಿ ಸಂರಕ್ಷಿತ ಧಾಮದಲ್ಲಿ ಇದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿತ್ತು. ತೋಟಗಳಲ್ಲೇ ಹುಟ್ಟಿ, ತೋಟದಲ್ಲೇ ಬೆಳೆಯುವ ಆನೆಗಳಿಂದ ಸಮಸ್ಯೆ ಹೆಚ್ಚಾಗಿದೆ. ಇಂತಹ ಆನೆಗಳನ್ನು ಆನೆಧಾಮದಲ್ಲಿ ಬಿಟ್ಟರೆ ಸಮಸ್ಯೆ ನಿಯಂತ್ರಿಸಬಹುದು. ರಾಮಲಿಂಗಾರೆಡ್ಡಿ ಅವರು ಹಿರಿಯ ಮತ್ತು ಅನುಭವಿ ಸಚಿವರಾಗಿದ್ದು, ಅವರು ಈಗಾಗಲೇ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಅವರು ಈ ಸಮಸ್ಯೆಗೆ ಪರಿಹಾರ ಒದಗಿಸುತ್ತಾರೆ ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.
ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕು
ಮುಖ್ಯಮಂತ್ರಿಗಳು ಜಪಾನ್ ಪ್ರವಾಸದಲ್ಲಿರುವ ಸಂದರ್ಭದಲ್ಲೇ ಶಾಸಕಿ ರಾಜೀನಾಮೆ ವಿಚಾರ ಮುನ್ನೆಲೆಗೆ ಬಂದಿರುವುದು ಪಕ್ಷದ ನಾಯಕರ ಅಸಮಾಧಾನಕ್ಕೆ ಮತ್ತಷ್ಟು ಕಾರಣವಾಗಿದೆ. ರಾಜೀನಾಮೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ, ಶಾಸಕಿ ನಯನಾ ಮೋಟಮ್ಮ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಕಾಡಾನೆಗಳನ್ನು ಕಾಡಿಗೆ ಬಿಡದೆ ಬೇರೆಲ್ಲಿಗೆ ಸ್ಥಳಾಂತರಿಸಬೇಕು? ಆನೆ-ಮಾನವ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಬೇಕೇ ಹೊರತು ರಾಜೀನಾಮೆಯಂತಹ ನಿರ್ಧಾರಗಳಿಂದ ಸಮಸ್ಯೆ ಬಗೆಹರಿಯುತ್ತದೆಯೇ ಎಂಬ ಪ್ರಶ್ನೆ ಪಕ್ಷದೊಳಗೆ ಕೇಳಿಬರುತ್ತಿದೆ.
ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರೂ ಶಾಸಕಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಆನೆಗಳನ್ನು ಎಲ್ಲಿಗೆ ಬಿಡಬೇಕು ಎಂಬುದನ್ನು ಅವರೇ ಹೇಳಲಿ ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಆನೆ – ಮಾನವ ಸಂಘರ್ಷ ತಡೆಗಟ್ಟಲು ಸರ್ಕಾರದ ಮಟ್ಟದಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕು ಎಂಬುದು ಕಾಂಗ್ರೆಸ್ ನಾಯಕರ ಅಭಿಪ್ರಾಯವಾಗಿದೆ.
ಮೂಡಿಗೆರೆಯಲ್ಲಿ ಹೆಚ್ಚಿದ ಪ್ರತಿಭಟನೆ ಕಾವು
ಬೇಲೂರು ಭಾಗದಿಂದ ಮೂಡಿಗೆರೆ ತಾಲೂಕಿನತ್ತ ಕಾಡಾನೆಗಳ ಹಿಂಡನ್ನು ಓಡಿಸುತ್ತಿರುವ ಅರಣ್ಯ ಇಲಾಖೆಯ ಆಪರೇಷನ್ ಗಜ ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಕಾಂಗ್ರೆಸ್ ಕಾರ್ಯಕರ್ತರು ಮೂಡಿಗೆರೆ ಪಟ್ಟಣದ ಅರಣ್ಯ ಇಲಾಖೆ ಕಚೇರಿ ಮುಂಭಾಗ ಭಾರಿ ಪ್ರತಿಭಟನೆ ನಡೆಸಿದರು. ಬೇಲೂರಿನಿಂದ ಕಾಡಾನೆಗಳನ್ನು ತತ್ಕೊಳ ಅರಣ್ಯ ಪ್ರದೇಶದತ್ತ ಅಟ್ಟುತ್ತಿರುವುದರಿಂದ ಸ್ಥಳೀಯ ರೈತರು ಮತ್ತು ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಅರಣ್ಯ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಯಾವುದೇ ಕಾರಣಕ್ಕೂ ಕಾಡಾನೆಗಳನ್ನು ತತ್ಕೊಳ ಅರಣ್ಯ ಪ್ರದೇಶಕ್ಕೆ ಓಡಿಸಬಾರದು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ದುಡುಕಿ ರಾಜೀನಾಮೆ ಕೊಡುವುದು ಸರಿಯಲ್ಲ
ಕಾಡಾನೆ ಹಾವಳಿ ನಿಯಂತ್ರಣ ವಿಚಾರವಾಗಿ ಆಡಳಿತ ಪಕ್ಷದ ಶಾಸಕರು ರಾಜೀನಾಮೆ ನೀಡುವ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ದುಡುಕಿ ರಾಜೀನಾಮೆ ಕೊಡುವುದು ಸರಿಯಲ್ಲ ದುಡುಕಿ ರಾಜೀನಾಮೆ ಕೊಡುವುದು ಸರಿಯಲ್ಲ. ಸದ್ಯಕ್ಕೆ ರಾಜೀನಾಮೆ ನಿರ್ಧಾರವನ್ನು ಕೈಬಿಡಲಾಗಿದ್ದು, ಮುಖ್ಯಮಂತ್ರಿಗಳು ಬಂದ ನಂತರ ಚರ್ಚಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಈ ವಿಚಾರವಾಗಿ ನಾನು ಈಗಾಗಲೇ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಸ್ಥಳೀಯ ಶಾಸಕರೊಂದಿಗೆ ಮಾತುಕತೆ ನಡೆಸಿದ್ದೇನೆ. ಸ್ವತಃ ಸಿಎಂ ಕೂಡ ಶಾಸಕರೊಂದಿಗೆ ಮಾತನಾಡಿದ್ದಾರೆ. ದುಡುಕಿ ರಾಜೀನಾಮೆ ಕೊಡುವ ಬದಲು ನಾವೆಲ್ಲರೂ ಸೇರಿ ಸಮಸ್ಯೆ ಬಗೆಹರಿಸಲು ಕೆಲಸ ಮಾಡಬೇಕು ಎಂಬುದನ್ನು ಅವರ ಗಮನಕ್ಕೆ ತಂದಿದ್ದೇನೆ. ಹೀಗಾಗಿ ಅವರು ಸದ್ಯಕ್ಕೆ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ” ಎಂದರು.
ರಾಜೀನಾಮೆ ವಾಪಸ್ ಪಡೆಯೋಲ್ಲ : ನಯನಾ ಮೋಟಮ್ಮ
ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಸೇರಿದಂತೆ ಭದ್ರಾ ಅಭಯಾರಣ್ಯ, ಭದ್ರಾ ಅಭಯಾರಣ್ಯ ಭಾಗಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸುವ ಆಪರೇಷನ್ ಗಜ ಚಟುವಟಿಕೆಗೆ ನಮ್ಮ ಸಹಮತ ಇಲ್ಲ. ಇದನ್ನು ವಿರೋಧಿಸಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಮ್ಮ ಪಕ್ಷದ ಜಿಲ್ಲೆಯ ಶಾಸಕರು ಬೆಂಬಲ ಸೂಚಿಸಿದ್ದಾರೆ. ವಿಧಾನಸಭೆ ಸ್ಪೀಕರ್ ಅವರು ಇದೇ ವಿಚಾರ ಕುರಿತು ಅರಣ್ಯ ಇಲಾಖೆಯ ಸಭೆಯನ್ನು ನ.25ರಂದು ಬುಧವಾರ ಕರೆದಿದ್ದಾರೆ. ಅವರು ಮನವಿಗೆ ಮಣಿದುಕೊಳ್ಳುವುದರೊಂದಿಗೆ ರಾಜೀನಾಮೆ ಹಿಂಪಡೆಯುವುದಿಲ್ಲ. ಇದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ನಯನಾ ಮೋಟಮ್ಮ ಅವರ ಖಚಿತ ನುಡಿ.
ನಮ್ಮ ಜಿಲ್ಲೆಯಲ್ಲಿ ಕಾಡಾನೆಗಳ ಸಮಸ್ಯೆಯಿದೆ. ಮೂಡಿಗೆರೆ ಕ್ಷೇತ್ರದಲ್ಲೂ ಹಲವಾರು ಆನೆ ದಾಳಿಗೆ ಜನ ಕಳವಳಗೊಂಡಿದ್ದಾರೆ. ಆನೆಗಳನ್ನು ಸೆರೆ ಹಿಡಿಯಲಾಗಿದೆ. ಹಿಡಿದಿದ್ದರೂ ಸಮಸ್ಯೆ ಇನ್ನೂ ಕಡಿಮೆಯಾಗಿಲ್ಲ. ಇದನ್ನು ನಾವು ಕಗ್ಗಂಟು ಎನಿಸಿಕೊಳ್ಳುತ್ತಿದ್ದೇವೆ. ಆದರೆ, ಬೇಲೂರು ತಾಲೂಕಿನಲ್ಲಿ ಇರುವ 56 ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಅಟ್ಟಿಸುವ ಎನ್ನುವ ತೀರ್ಮಾನ ಕೈಗೊಂಡು ರಾಜಕೀಯ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಶುರು ಮಾಡಿದೆ. ನಮ್ಮ ಗಮನಕ್ಕೂ ತಾರದೇ ಆನೆ ಯೋಜನೆ ನಿರ್ಧಾರಕ ಮಂಡಳಿಯ ಆಪರೇಷನ್ ಗಜ ಎನ್ನುವ ಹೆಸರಿನಲ್ಲಿ ಆನೆ ಓಡಿಸುವ ಚಟುವಟಿಕೆಗೆ ಚಾಲನೆ ಕೊಟ್ಟಿದ್ದಾರೆ. ಇದೇ ಕಾರಣದಿಂದಲೇ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು.
ಶ್ರೇಣಿಯಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಚಿಕ್ಕಮಗಳೂರು ಶಾಸಕ ತಮ್ಮಯ್ಯ, ಅವರು ಬೆಂಬಲ ನೀಡಿದರೆಂದು ನಯನಾ.








