ತುಮಕೂರು ನಗರದಲ್ಲಿ ಅಪ್ರಾಪ್ತರ ವಾಹನ ಚಾಲನೆಗೆ ಪೋಷಕರ ವಿರುದ್ಧವೂ ಕ್ರಮ

ತುಮಕೂರು:

      ತುಮಕೂರು ನಗರದಲ್ಲಿ ಇತ್ತೀಚೆಗೆ ಅಪ್ರಾಪ್ತ ವಯಸ್ಸಿನವರು ಅಪಾಯಕಾರಿಯಾಗಿ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಿರುವ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ದಿವ್ಯ ವಿ.ಗೋಪಿನಾಥ್ ಅವರು ‘‘ಇನ್ನು ಮುಂದೆ ಅಪ್ರಾಪ್ತ ವಯಸ್ಕರಿಗೆ ವಾಹನಗಳನ್ನು ಚಾಲನೆಗೆ ನೀಡುವಂತಹ ಪಾಲಕರುಗಳ ಮೇಲೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’’ ಎಂದು ಎಚ್ಚರಿಕೆ ನೀಡಿದ್ದಾರೆ.

14 ಕೇಸು, 22 ಸಾವಿರ ದಂಡ

      ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘‘ಆಗಸ್ಟ್ 14 ರಂದು ಪೊಲೀಸರು ತುಮಕೂರು ನಗರದಲ್ಲಿ ವಿಶೇಷ ಅಭಿಯಾನ ನಡೆಸಿ ಅಪ್ರಾಪ್ತ ವಯಸ್ಸಿನ ದ್ವಿಚಕ್ರ ವಾಹನ ಸವಾರರ ವಿರುದ್ದ 20 ಪ್ರಕರಣಗಳನ್ನು ದಾಖಲು ಮಾಡಿದ್ದು, ಒಟ್ಟು 22,600 ರೂ. ದಂಡ ವಿಧಿಸಲಾಗಿದೆ’’ ಎಂದು ತಿಳಿಸಿದ್ದಾರೆ.

ಜುಲೈನಲ್ಲಿ 10,027 ಕೇಸು : 20 ಲಕ್ಷ ರೂ.ದಂಡ ಸಂಗ್ರಹ:

      ‘‘ಜುಲೈ ತಿಂಗಳಿನಲ್ಲಿ ತುಮಕೂರು ನಗರ ವೃತ್ತದ ವತಿಯಿಂದ ‘‘ರಸ್ತೆ ಸುರಕ್ಷತಾ ಮಾಸಾಚರಣೆ’’ ಹಮ್ಮಿಕೊಂಡಿದ್ದು, ಈ ಸಂಬಂ‘ ತುಮಕೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮತ್ತು ಮೋಟಾರು ವಾಹನ ಕಾಯ್ದೆ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಒಟ್ಟು 10,027 ಪ್ರಕರಣಗಳನ್ನು ದಾಖಲಿಸಿ ಒಟ್ಟಾರೆ 20 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ’’ ಎಂದು ಅವರು ಮಾಹಿತಿ ನೀಡಿದ್ದಾರೆ.

ಸದರಿ ಪ್ರಕರಣ ಮತ್ತು ದಂಡದ ವಿವರ ಈ ಕೆಳಕಂಡಂತಿದೆ:-

1)ಚಾಲನಾ ಪರವಾನಿಗೆ ಇಲ್ಲದೇ ವಾಹನ ಚಾಲನೆ ಮಾಡುವವರ ವಿರುದ್ಧ 1904 ಪ್ರಕರಣಗಳನ್ನು ದಾಖಲು ಮಾಡಿ 6,63,300 ರೂ. ದಂಡ ವಿಧಿಸಲಾಗಿದೆ.
2)ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡಿದವರ ವಿರುದ್ಧ 4294 ಪ್ರಕರಣಗಳನ್ನು ದಾಖಲಿಸಿ 4,29,400/- ರೂ. ದಂಡ ವಿಧಿಸಲಾಗಿದೆ.
3)ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿರುವವರ ವಿರುದ್ಧ 196 ಪ್ರಕರಣಗಳನ್ನು ದಾಖಲು ಮಾಡಿ 2,87,900 ರೂ. ದಂಡ ವಿಧಿಸಲಾಗಿದೆ.
4)ವಾಹನ ನಿಲುಗಡೆ ನಿಷೇಧಿತ ಸ್ಥಳದಲ್ಲಿ ವಾಹನ ನಿಲ್ಲಿಸುವವರ ವಿರುದ್ಧ 441 ಪ್ರಕರಣಗಳನ್ನು ದಾಖಲು ಮಾಡಿ 44,100 ರೂ. ದಂಡ ವಿಧಿಸಲಾಗಿದೆ.
5)ಸೀಟ್ ಬೆಲ್ಟ್ ಧರಿಸದೆ ವಾಹನ ಚಾಲನೆ ಮಾಡಿದ ಚಾಲಕರ ವಿರುದ್ಧ 384 ಪ್ರಕರಣಗಳನ್ನು ದಾಖಲು ಮಾಡಿ 38,400 ರೂ. ದಂಡ ವಿಧಿಸಲಾಗಿದೆ.
6)ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ ಮಾಡಿದವರ ವಿರುದ್ಧ 154 ಪ್ರಕರಣಗಳನ್ನು ದಾಖಲು ಮಾಡಿ 15,400 ರೂ. ದಂಡ ವಿಧಿಸಲಾಗಿದೆ.
7)ಇತರೆ ಮೋಟಾರು ವಾಹನ ಕಾಯ್ದೆ ಅಡಿ 2377 ಪ್ರಕರಣಗಳನ್ನು ದಾಖಲು ಮಾಡಿ 3,81,500 ರೂ. ದಂಡ ವಿಧಿಸಲಾಗಿದೆ ಎಂದು ಡಾ. ದಿವ್ಯ ವಿ.ಗೋಪಿನಾಥ್ ವಿವರಿಸಿದ್ದಾರೆ.

 

Recent Articles

spot_img

Related Stories

Share via
Copy link