ನವದೆಹಲಿ:
ರಫೆಲ್ ಡೀಲ್ ಬಗ್ಗೆ ಸುದ್ಧಿ ಮಾಡಲು ಹೋಗಿ ತನ್ನ ಬುಡಕ್ಕೆ ತಂದುಕೊಂಡಂತಾಗಿದೆ ಕಾಂಗ್ರೆಸ್ ಪರಿಸ್ಥಿತಿ. ಫ್ರಾನ್ಸ್ ನೊಂದಿಗೆ ಭಾರತ ಮಾಡಿಕೊಂಡಿರುವ ರಫೆಲ್ ಫೈಟರ್ ಜೆಟ್ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಬಿಜೆಪಿ ಸರ್ಕಾರವನ್ನು ದೂರಿದ್ದ ಕಾಂಗ್ರೆಸ್, ದೂರುವ ಅತ್ಯುತ್ಸಾಹದಲ್ಲಿ ರಿಲಯನ್ಸ್ ಗ್ರೂಪ್ ನ ಅನಿಲ್ ಅಂಬಾನಿ ಅವರ ಹೆಸರನ್ನೂ ಉಲ್ಲೇಖಿಸಿತ್ತು, ಇದರಿಂದ ಕೊಪಗೊಂಡ ರಿಲಯನ್ಸ್ ನ ಅನಿಲ್ ಅಂಬಾನಿ ರಫೆಲ್ ಡೀಲ್ ಕುರಿತು ತಮ್ಮ ಹೆಸರು ತಂದಿರುವುದಕ್ಕೆ ದಾಖಲೆ ಕೊಡಿ ಎಂದು ರಾಹುಲ್ ಗಾಂಧಿಗೆ ಪತ್ರ ಸಹ ಬರೆದ್ದಿದ್ದಾರೆ ಮತ್ತು ಅಸಮಾಧಾನಗೊಂಡ ರಿಲಯನ್ಸ್ ಕಾಂಗ್ರೆಸ್ಸಿಗೆ ನೋಟೀಸ್ ನೀಡಿದೆ. ರಫೆಲ್ ಡಿಲ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ, ಬೇಕಾಬಿಟ್ಟಿ ಮಾತನಾಡಿದರೆ ಪರಿಣಾಮ ನೆಟ್ಟಗಿರೋಲ್ಲ ಎಂದು ಖಡಕ್ ವಾರ್ನಿಂಗ್ ಸಹ ನೀಡಿದೆ.
“ರಾಜಕಾರಣಿಗಳಿಗೆ ಮಾತನಾಡುವ ಹಕ್ಕಿದೆ ಎಂದ ಮಾತ್ರಕ್ಕೆ ಅವರು ಬೇಜವಬ್ದಾರಿಯಾಗಿ ಹೇಳಿಕೆ ನೀಡಬಹದು ಎಂದು ಎಲ್ಲಿಯೂ ಬರೆದಿಲ್ಲ! ಬೇಕಾಬಿಟ್ಟಿ ಮಾತನಾಡುವುದು, ಅಸಂಬದ್ಧ ಹೇಳಿಕೆ ನೀಡುವುದು, ಸುಳ್ಳುಆರೋಪ ಮಾಡುದರೆ ಸಹಿಸಿಕೊಳ್ಳುವುದಿಲ್ಲ ಎಂದಿದ್ದಾರೆ ಇನ್ನೊಮ್ಮೆ ಇಂಥ ಕೆಲಸ ಮಾಡಿದರೆ ಕಾನೂನಾತ್ಮಕ ಕ್ರಮ ಎದುರಿಸಬೇಕಾಗುತ್ತದೆ” ಎಂದು ರಿಲಯನ್ಸ್ ಗ್ರೂಪ್ ಕಾಂಗ್ರೆಸ್ ಪಕ್ಷದ ವಕ್ತಾರಾದ ಶ್ರೀ ಜೈವೀರ್ ಶೆರ್ಗಿಲ್ ಅವರಿಗೆ ನೋಟೀಸ್ ನೀಡಿದೆ.
![](https://prajapragathi.com/wp-content/uploads/2018/08/Anil-Ambani-770x433.jpg)