ಹಾವೇರಿ :
ಜಿಲ್ಲೆಯ ಸವಣೂರ ತಾಲೂಕು ಬಹಳ ಹಿಂದುಳಿದ ಕ್ಷೇತ್ರವಾಗಿದ್ದು ಸದಾ ಮಳೆ ಇಲ್ಲದೇ ಬರದಿಂದ ರೈತರು ತತ್ತರಿಸಿದೆ. ಈ ಪರಸ್ಥಿತಿಯಲ್ಲಿ ರಾಜ್ಯ ಸರ್ಕಾರದ ಯೋಜನೆಯಾದ ಸವಣೂರು ತಾಲೂಕಿನ ಕಳಸೂರು ಏತ ನೀರಾವರಿ ಯೋಜನೆಯಡಿ ಕಾಮಗಾರಿ ಮಾಡುವಾಗ ರೈತರು ತಮ್ಮ ಹೊಲದಲ್ಲಿ ಕೆಲಸ ಪ್ರಾರಂಭ ಮಾಡಿದ್ದರು.
ತಾಲೂಕಿನ ಗ್ರಾಮಗಳಾದ ತೊಂಡೂರು ಹಾಗೂ ಹೊಸಳ್ಳಿ ಗ್ರಾಮದ ರೈತರ ಹೊಲಗಳಲ್ಲಿ ಕಾಮಗಾರಿಯನ್ನು ಮಾಡುವಾಗ ಯಾವದೇ ಸರ್ಕಾರಿ ಕಛೇರಿಯಿಂದ ರೈತರಿಗೆ ಒಂದು ನೋಟೀಸು ಸಹ ನೀಡದೇ ರೈತರನ್ನು ಹೆದರಿಸಿ ಕೆಲಸ ಪ್ರಾರಂಭ ಮಾಡಿರೋದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಗ್ರಾಮಗಳ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಅಧ್ಯಕ್ಷರಾದ ಸತೀಶಗೌಡ ಜೀ ಮುದಿಗೌಡ್ರ ಮಾತನಾಡಿ ಸತತ 3 ವರ್ಷಗಳಿಂದ ರೈತರು ಇದರ ಬಗ್ಗೆ ಸಂಬಂಧಪಟ್ಟ ಕಛೇರಿಗೆ ಮನವಿ ಸಲ್ಲಿಸಿದರೂ ಯಾವದೇ ಪ್ರಯೋಜನವಾಗಿಲ್ಲ.ಗ್ರಾಮಗಳಲ್ಲಿನ ರೈತರ ಹೊಲದಲ್ಲಿ ಪೈಪ ಲೈನ್ ಹಾಕಲು,ನೀರಿನ ಟ್ಯಾಂಕರ ನಿರ್ಮಿಸಲು ಹಾಗೂ ಸಾಗಾಣಿಕೆ ಮಾಡಲು ಟಿಪ್ಪರಗಳು ಓಡಾಡಿ ರೈತರ ಬೆಳೆ ಹಾನಿಯಾಗಿವೆ. ಸದರ ರೈತರಿಗೆ ಯಾವುದೇ ಪರಿಹಾರ ಸರ್ಕಾರದಿಂದ ದೊರೆತಿಲ್ಲ.
ಸದರ ಯೋಜನೆಯ ಕಾಮಗಾರಿಗೆ ನಾಶವಾಗಿ ರೈತರು ದಿಕ್ಕು ತೋಚದಂತಾಗಿದ್ದಾರೆ. ರೈತರಸಂಕಷ್ಟಕ್ಕೆ ಹಾಗೂ ಮನವಿಗಳಿಗೆ ಸರ್ಕಾರ ಸ್ಪಂದನೆ ನೀಡಿ ರೈತರಿಗೆ ಬೆಳೆ ಪರಿಹಾರವನ್ನು ನೀಡುವಂತಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯಿಂದ ಹಾಗೂ ರೈತರು ಉಗ್ರ ಹೋರಾಟಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಕರವೇ ಜಿಲಾ ್ಲಉಪಾಧ್ಯಕ್ಷ ನಂಧೀಶ ಗೊಡ್ಡೆಮ್ಮಿ.ಹಾವೇರಿ ತಾಲೂಕು ಅಧ್ಯಕ್ಷ ಬಸವರಾಜ ಹೊಂಬರಡಿ.ಹಿರೇಕೇರೂರು ತಾ ಅ ಗಿರೀಶ ಬಾರ್ಕಿ.ಹಾನಗಲ್ ತಾ ಅ ಸಂತೋಷ ಗಾಣಿಗೇರ.ರಟ್ಟೀಹಳ್ಳಿ ತಾ ಅ ಕರಿಯಪ್ಪ ಕೊರವರ. ಬ್ಯಾಡಗಿ ತಾ ಅ ನಾಗರಾಜ ಮಾಳಗಿ. ರಾಜು ಅಮ್ಮನವರ ಸುರೇಶ ಗೊಡ್ಡೆಮ್ಮಿ.ರುದ್ರಪ್ಪ ಗಿರಿಯಪ್ಪನವರ.ಕುಮಾರ ಹಿರೇಮಠ ಹಾಗೂ ಮುಂತಾದ ಹೊಸಳ್ಳಿ ಹಾಗೂ ತೊಂಡೂರ ಗ್ರಾಮದ ರೈತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
