ಲಂಡನ್: 
ರಾಹುಲ್ ಗಾಂಧಿ ಪ್ರತಿ ದಿನ ಒಂದೊಂದು ವಿವಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಇಂದು ಲಂಡನ್ ನಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕೆಲಸವಿಲ್ಲ. ಕೇವಲ ಜನರಿಗೆ ವೀಸಾ ಮಾಡಿಕೊಡುವುದನ್ನು ಬಿಟ್ಟು ಅವರೇನೂ ಮಾಡುವುದಿಲ್ಲ” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಜರ್ಮನಿ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿರುವ ಅವರು, ಶುಕ್ರವಾರ ಲಂಡನ್ ನಲ್ಲಿ ಮಾತನಾಡುತ್ತಿದ್ದರು. “ಭಾರತದ ವಿದೇಶಾಂಗ ಸಚಿವರು ಹೆಚ್ಚು ಸಮಯ ವೀಸಾ ನೀಡುವ ಕೆಲಸವನ್ನೇ ಮಾಡುತ್ತಾರೆ ಎಂದು ಹಲವರು ಹೆಳುವುದನ್ನು ಕೇಳಿದ್ದೇನೆ. ಆ ಮಾತಿನ ಅರ್ಥವೇನು? ಅವರಿಗೆ ವೀಸಾ ಮಾಡುವುದನ್ನು ಬಿಟ್ಟು ಬೇರೆ ಕೆಲಸ ಇಲ್ಲ ಎಂದಲ್ಲವೇ?/” ಎಂದು ಪ್ರಶ್ನಿಸಿದ್ದಾರೆ ರಾಹುಲ್ ಗಾಂಧಿ.
ಪರದೇಶಕ್ಕೆ ಹೋಗಿ ಬಿಜೆಪಿ ಸರ್ಕಾರದ ಮೇಲೆ ಒಮದಿಲ್ಲೊಮದು ಆರೋಪ ಹೊರಿಸುತ್ತಿರುವ, ನರೇಂದ್ರ ಮೋದಿ ಸೇರಿದಂತೆ ಆಡಳಿತ ಪಕ್ಷದ ಹಲವರ ಕುರಿತು ವಿವಾದಾತ್ಮಕ ಮಾತುಗಳನ್ನಾಡುತ್ತಿರುವ ರಾಹುಲ್ ಗಾಂಧಿ ಅವರ ಮಾತಿನ ಬಾಣಕ್ಕೆ ಇದೀಗ ಸಿಕ್ಕಿಕೊಂಡವರು ಸುಷ್ಮಾ








