ತಿಪಟೂರು:
ಕೊಡಗು ಸಂತ್ರಸ್ತರಿಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀ ಸಿದ್ಧರಾಮೇಶ್ವರ ಪದವಿ ಪೂರ್ವ ಕಾಲೇಜು, ಶ್ರೀ ಬಸವೇಶ್ವರ ಪದವಿ ಪೂರ್ವ ವಿದ್ಯಾರ್ಥಿಗಳಿಂದ 15,500ರೂಗಳನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ಹಾಕುವ ಮೂಲಕ ಸಹಾಯ ಹಸ್ತ ನೀಡಿದ್ದಾರೆ.
ಸಂಗ್ರಹಿಸಿದ ಹಣವನ್ನು ತಹಸೀಲ್ದಾರ್‍ರವರ ಮಾರ್ಗದರ್ಶನದಲ್ಲಿ ನೇರವಾಗಿ ಮುಖ್ಯಮಂತ್ರಿಗಳ ಖಾತೆಗೆ ಜಮಾ ಮಾಡಲಾಯಿತು. ಹಳೇ ವಿದ್ಯಾರ್ಥಿಗಳಾದ ಕೆ.ಪಿ. ವರುಣ್, ಜಯಪ್ರಸಾದ್, ಚಂದನ್, ಕೃಷ್ಣ, ಈಶ್ವರ್, ಚೇತನ್, ತೇಜಸ್, ಬಸವರಾಜು, ಲಿಖಿತ್‍ಗೌಡ, ಆಕಾಶ್, ಮನು, ರೇಣುಕಾ ಇವರುಗಳು ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿದ್ದರು.
ವಿದ್ಯಾರ್ಥಿಗಳು ಸಂಗ್ರಹಿಸಿದ ಹಣವನ್ನು ಪ್ರಾಂಶುಪಾಲ ಪ್ರೊ. ಕೆ.ಎಂ. ರಾಜಣ್ಣನವರ ಸಮ್ಮುಖದಲ್ಲಿ ಬ್ಯಾಂಕ್‍ಗೆ ಸಂದಾಯ ಮಾಡಲಾಯಿತು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಂಚಾಲಕ ಡಾ. ಡಿ.ಆರ್. ಹೊನ್ನಾಂಜಿನಯ್ಯ, ವ್ಯವಸ್ಥಾಪಕಿ ರಂಗಲಕ್ಷ್ಮಿ, ಪ್ರೊ. ಜಯರಾಮಯ್ಯ ಮತ್ತಿತರರಿದ್ದರು.








