ಬ್ಯಾಡಗಿ:
ಎಪಿಎಂಸಿ ವರ್ತಕರ ಸಂಘದ ವತಿಯಿಂದ“ಬ್ಯಾಡಗಿಚಿಲ್ಲಿಎಕ್ಸ್ಫೋ”ಎಂಬ ಬೃಹತ್‍ರಾಷ್ಟ್ರಮಟ್ಟದಕಾರ್ಯಕ್ರಮ ವನ್ನು ಸೆ.ಮತ್ತು9ರಂದುಮಾರುಕಟ್ಟೆಯಲ್ಲಿನಸಿದ್ಧೇಶ್ವರ ಕಲ್ಯಾಣಮಂಟಪದಲ್ಲಿಆಯೋಜಿಸಲಾಗಿದೆಎಂದು ಮಾಜಿ ಶಾಸಕ ಹಾಗೂ ವರ್ತಕರ ಸಂಘದಅಧ್ಯಕ್ಷ ಸುರೇಶಗೌಡ ಪಾಟೀಲ ಹೇಳಿದರು.
ಸೋಮವಾರ ಪಟ್ಟಣದ ಶ್ರೀ ಶಿದ್ಧೇಶ್ವರ ಕಲ್ಯಾಣಮಂಟಪದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದಅವರು.ವರ್ತಕರ ಸಂಘದ 40 ನೇ 2017-18 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಧಾರಣ ಸಭೆಯನ್ನು ಅವಿಸ್ಮರಣೀಯವಾಗಿಸುವ ನಿಟ್ಟಿನಲ್ಲಿಕಾರ್ಯಕ್ರಮವನ್ನುಆಯೋಜಿಲಾಗುತ್ತಿದೆಎಂದರು.
ವಿಜಯ್ ಸಂಕೇಶ್ವರ ಉಪಸ್ಥಿತಿ:ಅಂತರಾಷ್ಟ್ರೀಯ ಮಟ್ಟದಲ್ಲಿಖ್ಯಾತಿ ಪಡೆದಿರುವ ಬ್ಯಾಡಗಿ ಮೆಣಸಿನಕಾಯಿ ಮೂಲ ತಳಿ ಹಾಗೂ ವಿವಿಧ ತಳಿಗಳ ಬಗೆಗಿನ ಮಾಹಿಗಳನ್ನು ಒಂದೇ ಸ್ಥಳದಲ್ಲಿ ಪಡೆದುಕೊಳ್ಳಬಹುದಾಗಿದೆಎಂದರಲ್ಲದೇಮಾಜಿ ಸಂಸದ ಹಾಗೂ ವಿಆರ್‍ಎಲ್ ಸಂಸ್ಥಾಪಕ ವಿಜಯ ಸಂಕೇಶ್ವರಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದುಕಾರ್ಯಕ್ರಮದಲ್ಲಿನಊಟದ ವ್ಯವಸ್ಥೆಗೆ 2 ಲಕ್ಷ ರೂಗಳನ್ನು ನೀಡಿದ್ದಾಗಿ ತಿಳಿಸಿದರು.
40 ಸ್ಟಾಲ್‍ಗಳು:ಕಾರ್ಯದರ್ಶಿ ರಾಜು ಮೋರಗೇರಿ ಮಾತನಾಡಿ,40 ನೇ ವರ್ಷ ಸಭೆಯಾದ್ದರಿಂದಕಾರ್ಯಕ್ರಮದಲ್ಲಿಒಟ್ಟು ವಿವಿಧ 40 ಸ್ಟಾಲ್‍ಗಳಿಗೆ ಅವಕಾಶ ಕಲ್ಪಿಸಲಾಗಿದೆ.“ಬ್ಯಾಡಗಿಚಿಲ್ಲಿಎಕ್ಸ್ಫೋ”ದ ಮೊದಲನೇ ದಿನದಂದುಸಂವಾದಕಾರ್ಯಕ್ರಮ ನಡೆಯಲಿದೆ. ಮತ್ತು 9 ರಂದುದೇವಿಹೋಸೂರಿನಆಹಾರಸಂಸ್ಕರಣಾ ಮಹಾವಿದ್ಯಾಲಯದ ವಿಶೇಷಾಧಿಕಾರಿಡಾ.ಟಿ.ಬಿ.ಅಲ್ಲೋಳಅವರಿಂದಆಹಾರ ಸಂಸ್ಕರಣಾ ಪ್ರಾಮುಖ್ಯತೆ ಮತ್ತು ವಿವಿಧ ಮೆಣಸಿನಕಾಯಿ ತಳಿಗಳ ಬಗ್ಗೆ, ಹಾಗೂ ತರಕಾರಿ ವಿಭಾಗದಸಹಾಯಕ ಪ್ರಾಧ್ಯಾಪಕಡಾ.
ಪ್ರಭುದೇವ ಅಜ್ಜಪ್ಪಳವರ ಅವರಿಂದ ಮೆಣಸಿನಕಾಯಿ ಬೆಳೆ ಉತ್ಪಾದನೆಯಲ್ಲಿತಾಂತ್ರಿಕತೆಕುರಿತಂತೆ, ಮತ್ತು ಮೆಣಸಿನಕಾಯಿ ಬೆಳೆಯಲ್ಲಿ ಕೀಟ ಮತ್ತುರೋಗ ನಿಯಂತ್ರಣಾ ಕ್ರಮಗಳ ಕುರಿತಂತೆಡಾ.ಅಬ್ದುಲ್‍ಖರೀಂಅವರಿಂದ ಸಂವಾದ ಕಾರ್ಯಗಾರಗಳು ನಡೆಯಲಿವೆ ಎಂದರು..
1500 ಜನಸೇರುವ ನೀರಿಕ್ಷೇ:ಕಾರ್ಯಕ್ರಮದ ಮೊದಲ ದಿನ ಸುಮಾರು 1500 ಜನರು ಸೇರುವ ನೀರಿಕ್ಷೆಯಿದ್ದು, ವಿವಿಧ ಬ್ಯಾಂಕ್‍ಗಳು, ಬಜಾಜ ಫೈನಾನ್ಸ್,ಟಾಟಾ ಫೈನಾನ್ಸ್ ಸೇರಿದಂತೆ ಹಲವಾರು ವಿಮೆ ಕಂಪನಿಗಳು ಭಾಗವಹಿಸಲಿವೆ. ಗುಜರಾತ್‍ಚೆಂಬರ್‍ಆಫ್‍ಕಾಮರ್ಸಅಧ್ಯಕ್ಷರಾದಹಿರಣಗಾಂಧಿ ಸೇರಿದಂತೆಗೂಂಟೂರಚೆಂಬರ್‍ಆಫ್‍ಕಾಮರ್ಸನತಲಾ10 ಜನ ವರ್ತಕರು ಸದಸ್ಯರು.ಹಾವೇರಿಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯಅಧ್ಯಕ್ಷ ಸದಸ್ಯರು ಸೇರಿದಂತೆಹುಬ್ಬಳ್ಳಿ,ರಾಯಚೂರ, ಆದೋನಿ, ಗುಲ್ಬರ್ಗ, ಕುಂದಗೊಳ,ಅಣ್ಣಿಗೇರಿ, ಬಳ್ಳಾರಿ, ಹಲವಾರು ಪ್ರದೇಶಗಳಿಂದ ಸಾವಿರಾರುರೈತರುಕಾರ್ಯಕ್ರಮದಲ್ಲಿ ಭಾಗವಸಲಿದ್ದಾರೆಎಂದರು.
ಮಹಿಳಾ ವರ್ತಕರಿಗೆ ಸನ್ಮಾನ:ವರ್ತಕರ ಸಂಘದ ವತಿಯಿಂದ ಪ್ರತಿ ವರ್ಷದ ಸಭೆಯಲ್ಲಿ ಪುರುಷ ವರ್ತಕರಿಗೆ ಸನ್ಮಾನ ಮಾಡಲಾಗುತ್ತಿದ್ದುಆದರೆ ಈ ಬಾರಿ ವಿಶೇಷ ಎಂಬಂತೆ ಮಹಿಳಾ ವರ್ತಕರಿಗೆ ಸನ್ಮಾನಕಾರ್ಯಕ್ರಮವನ್ನುಎರ್ಪಡಿಸಲಾಗಿದೆ. ಅಲ್ಲದೇ ಶನಿವಾರ ಸಂಜೆ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆಎಂದರು..
ಬ್ಯಾಡಗಿಮೂಲ ತಳಿ ಉಳಿಸಬೇಕಿದೆ:ಉಳಿವೆಪ್ಪ ಕಬ್ಬೂರ ಮಾತನಾಡಿ, ಅಖಂಡಧಾರವಾಡಜಿಲ್ಲೆಯಲ್ಲಿ ಬ್ಯಾಡಗಿ ಮೆಣಸಿನ ಕಾಯಿ ತನ್ನ ನೈಸರ್ಗಿಕ ಬಣ್ಣರುಚಿಯಿಂದಲೆ ಪ್ರಖ್ಯಾತಿ ಪಡೆದಿತ್ತು. ಆದರೆ ಇದೀಗ ಬ್ಯಾಡಗಿ ಮೂಲ ತಳಿಗೆ ಧಕ್ಕೆ ಬಂದಿ ದ್ದು ತಳಿ ಉಳಿಸುವುದಕ್ಕೆ ಸರಕಾರಗಳು ವಿಫಲವಾಗುತ್ತಿವೆ. ಅಲ್ಲದೇ ನಿರಂತರವಾಗಿಒಂದೆ ಬೆಳೆಯನ್ನು ಬೆಳೆಯುತ್ತಿರುವ ಕಾರಣ ಮಣ್ಣು ಸಹ ತನ್ನ ಫಲವತ್ತತೆ ಕಳೆದುಕೊಂದಿದ್ದು ಮೆಣಸಿನಕಾಯಿ ಇಳುವರಿ ಕೊರತೆಯಿಂದರೈತರು ಬೆಳೆಯಲು ಹಿಂದೇಟು ಹಾಕುತ್ತಿರುವುದುದುರಂತದ ಸಂಗತಿಆದ್ದರಿಂದಕಾರ್ಯಕ್ರಮದಲ್ಲಿ ಈ ಕುರಿತಂತೆ ವಿಜ್ಞಾನಿಗಳ ಗಮನ ಸೆಳೆಯಲಾಗುವುದುಎಂದರು.
ಈ ಸಂದರ್ಬದಲ್ಲಿ ವರ್ತಕರಾದಕುಮಾರಗೌಡ್ರ ಪಾಟೀಲ. ಏ.ಆರ್.ನದಾಫ. ಎಸ್.ಜಿ.ಚಂದ್ರಾಪಟ್ಟಣ, ದೇವರಾಜ ಹುಡೇದ ವಿ.ವಿ.ಹಿರೇಮಠ, ಸೇರಿದಂತೆಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ