ನೂತನ ಎಸ್ ಬಿ ಐ ಗ್ರಾಹಕ ಸೇವಾ ಕೇಂದ್ರ ಸ್ಥಾಪನೆ

ಶಿಗ್ಗಾವಿ

     ಎಸ್‍ಬಿಐ ನ ಗ್ರಾಹಕರ ಸೇವಾ ಕೇಂದ್ರವು ಗ್ರಾಮಸ್ಥರಿಗೆ ಸ್ವಾಲ್ಪೆ ಹಣವಾದರೂ ಸಮಯಕ್ಕೆ ಸರಿಯಾಗಿ ಹಣವು ದೊರೆತು, ದೂರದ ಗ್ರಾಮಗಳಿಗೆ ಹೋಗಿ ಹಣವನ್ನು ಇಡುವದಾಗಲಿ ಪಡೆಯುವದಾಗಲಿ ಅನುಕೂಲಕರವಾಗಿದ್ದು ಇದನ್ನು ಬರುವ ದಿನಗಳಲ್ಲಿ ಎಸ್‍ಬಿಐ ಶಾಖೆಯಾಗಿ ಪರಿವರ್ತನೆಯಾಗಲಿ ಎಂದು ವೇ.ಮೂ. ಸೋಮಯ್ಯನವರ ಹಿರೇಮಠ ಹೇಳಿದರು.

     ತಾಲೂಕಿನ ಕುನ್ನೂರ ಗ್ರಾಮದ ಗ್ರಾಮ ಪಂಚಾಯತ ಆವರಣದಲ್ಲಿ ಎಸ್‍ಬಿಐ ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು, ಗ್ರಾಮದಲ್ಲಿ ಹಣವನ್ನು ಇಡಲು ತೆಗೆಯಲು ಬ್ಯಾಂಕ್ ಇಲ್ಲದೆ ಇದ್ದುದರಿಂದ ಆರ್ಥಿಕವಾಗಿ ಹಿಂದುಳಿಯುವಂತಾಗಿದೆ ಆದ್ದರಿಂದ ಈ ಸೇವಾ ಕೇಂದ್ರವನ್ನು ಪ್ರತಿಯೊಬ್ಬರು ಪಡೆದುಕೊಂಡು ತಮ್ಮ ದಿನ ನಿತ್ಯದ ಅನುಕೂಲತೆಗಳನ್ನು ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷೆ ಬಸವಣ್ಣೆವ್ವ ಒಡವಳ್ಕಿ ವಹಿಸಿದ್ದರು.

       ಕಾರ್ಯಕ್ರಮ ಮುಖ್ಯ ಅತಿಥಿಗಳಾದ ಪತ್ರಕರ್ತ ಬಿ.ಎಸ್.ಹಿರೇಮಠ ಮಾತನಾಡಿ ಕುನ್ನೂರ ಗ್ರಾಮಕ್ಕೆ ಎಸ್‍ಬಿಐ ನೂತನವಾದ ಗ್ರಾಹಕರ ಸೇವಾ ಕೇಂದ್ರವನ್ನು ಪ್ರಾರಂಬಿಸಿದ್ದು ಶಾಖೆಯನ್ನೆ ಪ್ರಾರಂಬಿಸಿದಂತೆ ಪ್ರಾರಂಭೋತ್ಸವ ಆರಂಭವನ್ನು ಮಾಡಿದ್ದನ್ನು ನೋಡಿದರೆ ಹರ್ಷವೆನಿಸುತ್ತದೆ

     ಎಸ್‍ಬಿಐ ಸೇವಾ ಕೇಂದ್ರದ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಹಕರ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು, ಮುಂಬರುವ ದಿನಗಳಲ್ಲಿ ಗ್ರಾಮದಲ್ಲಿ ಬ್ಯಾಂಕ್ ಕೂಡಾ ವ್ಯವಹಾರಿಕವಾಗಿ ಸಾಕಷ್ಟು ಅವಶ್ಯವಾಗಿದ್ದು ಬರುವ ದಿನದಲ್ಲಿ ಎಸ್‍ಬಿಐ ಅಧಿಕಾರಿಗಳು ಶಾಖೆಯನ್ನು ಕುನ್ನೂರ ಗ್ರಾಮಕ್ಕೆ ಪ್ರಾರಂಭಿಸಲು ಗ್ರಾಮಸ್ಥರ ಪರವಾಗಿ ಒತ್ತಾಯವನ್ನು ಮಾಡುತ್ತೆನೆ ಎಂದರು.

        ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕವಾಗಿ ಮಾತನಾಡಿದ ಮುಖಂಡರಾದ ಪರಶುರಾಮ ಕಾಳಿ ಮಾತನಾಡಿ ಹಣ ಬೇಕು ಅಂದರೆ ಶ್ರೀಮಂತರ ಮನೆ ಬಾಗಿಲಲ್ಲಿ ನಿಲ್ಲುವಂತಹ ವ್ಯವಸ್ಥೆಯು ಇತ್ತು ಆದರೆ ಇಂದು ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಿಂದ ಬ್ಯಾಂಕ ವ್ಯವಹಾರಕ್ಕೆ ಪ್ರತಿಯೊಬ್ಬರು ಖಾತೆಯನ್ನು ತೆರೆದಿದ್ದು ಹಣಕಾಸಿನ ವ್ಯವಹಾರಕ್ಕೆ ಎಸ್‍ಬಿಐ ಗ್ರಾಹಕರ ಸೇವಾ ಕೇಂದ್ರವನ್ನು ತೆರೆದಿದ್ದು ಎಸ್‍ಬಿಐ ಅಧಿಕಾರಿಗಳಿಗೆ ಅಭಿನಂದನೆ ಬರುವ ದಿನಗಳಲ್ಲಿ ಪ್ರತಿಯೋಬ್ಬರು ಹೆಚ್ಚಿನ ಖಾತೆಯನ್ನು ಮಾಡಿಸಿ ಇದರ ಸದುಪಯೋಗವನ್ನು ಮಾಡಿಕೋಳ್ಳಬೇಕು ಎಂದರು

        ಮುಖ್ಯ ಅತಿಥಿಗಳಾಗಿ ಪಂಚಾಯತ ಅಭಿವೃದ್ದಿ ಅಧಿಕಾರಿ ಪ್ರಕಾಶ ಔಂಧಕರ, ಸದಸ್ಯರಾದ ರಾಮಣ್ಣ ಇಂದೂರ, ಮತ್ರ್ಯಾಮಪ್ಪ ಮತ್ತಿಗಟ್ಟಿ, ಬಸನಗೌಡ ಬ್ಯಾಹಟ್ಟಿ, ಶಂಕ್ರಪ್ಪ ಹುಲಸೋಗ್ಗಿ, ಇಮಾಂಬೀ ಕುರಟ್ಟಿ, ಬಾಬುಲಾಲ ತಡಸ, ಮಹಾವೀರ ಕೋಳೂರ, ಮಾಬೂಸಾಬ ಜಿಗಳೂರ, ಹೊಸೂರ ಎಸ್‍ಬಿಐ ಶಾಖೆಯ ಅಧಿಕಾರಿ ರಾಘವೇಂದ್ರ, ಗ್ರಾ.ಪಂ ಮಾಜಿ ಅಧ್ಯಕ್ಷ ನಿಂಗಪ್ಪ ದೊಡ್ಡಮನಿ, ಬಾಬಾಜಾನ ಕುರಟ್ಟಿ, ಕಲ್ಲಪ್ಪ ಬೀರವಳ್ಳಿ, ಯಮನಪ್ಪ ನವಲೂರ, ಆಸ್ಪಕಲೀ ಮತ್ತೆಖಾನವರ, ಸೇರಿದಂತೆ ಹಲವರು ಇದ್ದರು.
ಕಾರ್ಯಕ್ರಮವನ್ನು ಚೌಡೇಶ ಕಲ್ಲಪ್ಪ ಬೀರವಳ್ಳಿ ಸ್ವಾಗತಿಸಿದರೆಪಕ್ಕೀರೇಶ ಕೋಟಗಾರ ಒಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link