ನಮ್ಮ ಮೆಟ್ರೋದಲ್ಲಿ “ಸಲಿಂಗ ಕಾಮಿ” ಕಾಟ

ಬೆಂಗಳೂರು:

                      ರಾಜಧಾನಿ ಬೆಂಗಳೂರಿನ ಸಂಚಾರಿ ದಟ್ಟಣೆ ನಿವಾರಣೆಗೆ ಆಶಾ ಕಿರಣವಾಗಿರುವ ನಮ್ಮ ಮೆಟ್ರೋದಲ್ಲಿ “ಸಲಿಂಗ ಕಾಮಿ”ಗಳ [ಪುರುಷರಿಗೆ ಪುರುಷರೇ ಲೈಂಗಿಕ ಕಿರುಕುಳ ನೀಡುವ ] ಕಾಟ ಹೆಚ್ಚಾಗಿದೆ.

                      ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪುರುಷರು ಪುರುಷರಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾತ್ತಿದ್ದು, ಪ್ರತಿನಿತ್ಯ ಮುಜುಗರ, ಯಾತನೆ, ಹಿಂಸೆ ಅನುಭವಿಸುವ ಪರಿಸ್ಥಿತಿ ಅಸಹನೀಯ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

                      ಸಂಚಾರಿ ದಟ್ಟಣೆಯ ನೆಪದಲ್ಲಿ ಸಲಿಂಗಿಗಳು ಗುಪ್ತಾಂಗಳನ್ನು ಮಟ್ಟುವುದು, ಸ್ಪರ್ಷಿಸುವುದು, ನಯವಾಗಿ ತಬ್ಬಿಕೊಳ್ಳುವುದು, ಹೀಗೆ ಹತ್ತು ಹಲವು ರೀತಿಯ ಕಿರುಕುಳಗಳನ್ನು ನೀಡುತ್ತಾರೆ. ಆಂಗಿಕವಾಗಿ ಚೇಡಿಸುವ, ಮತ್ತಿತರ ಚೇಷ್ಟೆಗಳು ನಿರಂತರವಾಗಿ ನಡೆಯುತ್ತಿದೆ. ಸಲಿಂಗಿಗಳ ಸ್ಪರ್ಷ, ನೋಟ ಎಲ್ಲವನ್ನೂ ಅನಾವರಣಗೊಳಿಸುತ್ತದೆ.

                      ಕಿರುಕುಳ ಅನುಭವಿಸಿದವರೆ ಇದು ಗೊತ್ತಾಗುತ್ತದೆ. ಒಮ್ಮೊಮ್ಮೆ ಮೈ ಮೇಲೆ ಹಾವು ಹರಿದಂತಾಗುತ್ತದೆ. ಮತ್ತೊಮ್ಮೆ ಸಹಿಸಲಾಗದ ನಡವಳಿಕೆ ಅನಿಸುತ್ತದೆ. ಮೆಟ್ರೋ ರೈಲಿನಲ್ಲಿ ನಿರಂತರವಾಗಿ ಸಂಚರಿಸುವವರಿಗೆ ಇದರ ಅನುಭವವಾಗಿರುತ್ತದೆ.

                      ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ದೂರು ನೀಡಲು ವ್ಯವಸ್ಥೆಯಿದೆ. ಆದರೆ ಪುರುಷರ ಮೇಲೆ ಪುರುಷರೇ ನಡೆಸುವ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡುವ ವ್ಯವಸ್ಥೆ ಇಲ್ಲ. ಇದರ ದುರ್ಲಾಭ ಪಡೆಯುವ ಸಲಿಂಗಿಗಳು ತಮ್ಮ ಆಟಾಟೋಪವನ್ನು ಸದ್ದಿಲ್ಲದೇ ಮುಂದುವರೆಸಿದ್ದಾರೆ.

                      ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಬಿಡುವಿಲ್ಲದೇ ಸಂಚರಿಸುವ ಮೆಟ್ರೋ ರೈಲುಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಮಾಣ ಕಡಿಮೆ ಇದೆ. ಆದರೆ ಸಲಿಂಗಿಗಳ ಕಾಟ ವಿಪರೀತವಾಗಿದೆ. ಅದರಲ್ಲೂ ಪ್ರಯಾಣದಟ್ಟಣೆ ಹೆಚ್ಚಾಗಿರುವ ಬೆಳಗ್ಗೆ 8.30 ರಿಂದ 10.30 ಗಂಟೆ, ಸಂಜೆ 4.30 ರಿಂದ 6.30 ಹಾಗೂ ರಾತ್ರಿ 9 ರ ನಂತರ ಸಲಿಂಗಿಗಳ ಕಾಟ ತೀವ್ರವಾಗಿದೆ.

                       ರಾತ್ರಿ ವೇಳೆಯಲ್ಲಿ ಮದ್ಯಪಾನ ಮಾಡಿ ಬರುವ ಸಲಿಂಗಿಗಳ ಕಾಟ ಮತ್ತಷ್ಟು ಅಸಹನೀಯವಾಗಿರುತ್ತದೆ. ಮೆಟ್ರೋದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿಗಳ ವ್ಯವಸ್ಥೆ ಮಾಡಲಾಗಿದ್ದು, ಬಹುತೇಕ ಮಂದಿ ಮಹಿಳೆಯರು ಸುರಕ್ಷಿತವಾಗಿದ್ದಾರೆ. ಹಾಗೆ ನೋಡಿದರೆ ಪುರುಷರೇ ತೀವ್ರ ತೊಂದರೆಗೆ ಈಡಾಗುತ್ತಿದ್ದಾರೆ.

                       ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರು ಇತ್ತೀಚಿಗೆ ಸುತ್ತೊಲೆಯೊಂದನ್ನು ಹೊರಡಿಸಿ, ಬಾಲಕರು ಮತ್ತು ಪುರುಷರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಷ್ಟೇ ತೀವ್ರವಾಗಿ ಪರಿಗಣಿಸಬೇಕು ಎಂದು ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿದ್ದರು. ಆದರೆ ಎಲ್ಲೂ ಈ ಸೂಚನೆ ಪಾಲನೆಯಾಗುತ್ತಿಲ್ಲ.

                        ಕಬ್ಬನ್ ಪಾಕ್, ಲಾಲ್ ಬಾಗ್ ಮತ್ತಿತರ ಕೆಲವು ಪ್ರದೇಶಗಳಲ್ಲಿ ಸಲಿಂಗ ಕಾಮಿಗಳ ಅಟ್ಟಹಾಸ ತೀವ್ರವಾಗಿದೆ. ಇದೀಗ ಪ್ರಮುಖ ಸಮೂಹ ಸಾರಿಗೆ ಮೆಟ್ರೋಗೂ ಇದು ವಿಸ್ತರಣೆಯಾಗಿದ್ದು, ಜನದಟ್ಟಣೆ ಸಂದರ್ಭದಲ್ಲಿ ಪ್ರಯಾಣ ಮಾಡಲು ಪ್ರಾಯಾಸಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link