ಹರಪನಹಳ್ಳಿ:
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಭಿವೃದ್ಧಿಗೆ 16ಕೋಟಿ ಅನುದಾನದಲ್ಲಿ ಸಾಕಷ್ಟು ಅಭಿವೃದ್ದಿಯಾಗಿದ್ದು ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ, ವಕೀಲ ಟಿ.ಎಚ್.ಎಂ.ವೀರುಪಾಕ್ಷಯ್ಯ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಸೋಮುವಾರ ಆರ್.ಕೆ.ವಿ.ವೈ.ಯೋಜನೆ ಕುರಿ ಮತ್ತು ಮೇಕೆ ಮಾರುಕಟ್ಟೆ ಹಾಗೂ ಎಪಿಎಂಸಿಯ ಆಡಳಿತ ಕಛೇರಿಗೆ 1ನೇ ಮಹಡಿ ನಿರ್ಮಾಣ ಕಾಮಗಾರಿ ಉದ್ಘಾಟನೆ, ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಹಿಂದೆ ಹರಪನಹಳ್ಳಿಗೆ ಪ್ರತ್ಯೇಕ ಮಾರುಕಟ್ಟೆ ಇಲ್ಲದೇ ಕೊಟ್ಟೂರು ಒಳಗೊಂಡು ಇತರೇ ತಾಲೂಕುಗಳಿಗೆ ರೈತರು ವ್ಯಾಪಾರಕ್ಕೆ ಹೋಗುವ ಪರಿಸ್ಥಿತಿ ಇತ್ತು. ಇದನ್ನು ಮನಗಂಡು ಹಿಂದಿನ ದಿವಂಗತ ಎಂ.ಪಿ.ಪ್ರಕಾಶ್ ರವರು ಪ್ರತ್ಯೇಕವಾಗಿ ಹರಪನಹಳ್ಳಿಗೆ ಎಪಿಎಂಸಿಯನ್ನು ಮಾಡಿದ್ದರು. ಮುಂದುವರೆದು ಮೂಲ ಸೌಕರ್ಯಗಳನ್ನು ಕಲ್ಪಿಸಲು ಹಿಂದಿನ ಶಾಸಕ ಎಂ.ಪಿ.ರವೀಂದ್ರ ಶ್ರಮಿಸಿದ್ದರು. ಜತೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಗೋದಾಮು ಒಳಗೊಂಡು ಅನೇಕ ಅಭಿವೃದ್ಧಿ ಕೆಲಸಗಳನ್ನು ಶ್ಯಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನರವರು ಸಹ ಸಹಕಾರ ನೀಡಿದ್ದಾರೆ ಎಂದರು.
ಜಿಪಂ ಸದಸ್ಯ ಹೆಚ್.ಬಿ.ಪರಶುರಾಮಪ್ಪ ಮಾತನಾಡಿ ಈ ತಾಲೂಕಿನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಾಯಿಗಳು ಇದ್ದು ಹಿಂದೆ ಯಾವುದೇ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇರಲಿಲ್ಲ. ಶ್ರೀ ಬೀರಲಿಂಗೇಶ್ವರ ಕುರಿಉಣ್ಣೆ ಸಂಘದಿಂದ ಹಂತ ಹಂತವಾಗಿ ಮಾರುಕಟ್ಟೆ ಆರಂಭಿಸಲಾಯಿತು ನಂತರ ಪುರಸಭೆಯ ಹಿಂಭಾಗದ ಸಂತೆಯಲ್ಲಿ ಕೂಡ ಮಾರುಕಟ್ಟೆ ಮಾಡಲಾಗುತ್ತಿತ್ತು ಅಲ್ಲದೇ ತಾಲೂಕಿನ ಕುರಿ, ಮೇಕೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಇದರಿಂದ ವೈವಾಟು ಹೆಚ್ಚಿದ ಹಿನ್ನೆಲೆಯಲ್ಲಿ ಕುರಿಸಂತೆಯನ್ನು ಎಪಿಎಂಸಿಯಲ್ಲಿ ಸುಸಜ್ಜಿತವಾದ ರಾಜ್ಯದಲ್ಲಿಯೇ ಮಾದರಿಯ ಕುರಿ ಸಂತೆ ನಿರ್ಮಾಣವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ವಿ.ಅಂಜಿನಪ್ಪ ಮಾತನಾಡಿ ತಾಲೂಕು ಹಿಂದುಳಿದ್ದರು ಕೂಡ ಮಾರುಕಟ್ಟೆ ಉತ್ತಮವಾಗಿದ್ದು ಕೆಲವು ಮೂಲಸೌಕರ್ಯಗಳು ಕೊರತೆಯಿಂದ ಸರಿಯಾದ ವೈವಾಟು ನಡೆಯುತ್ತಿರಲ್ಲಿ ಹಿಂದಿನ ಶಾಸಕ ಎಂ.ಪಿ.ರವೀಂದ್ರರವರು ಬೇಟಿ ನೀಡಿ ಸಾಕಷ್ಟು ಅನುದಾನದ ಮೂಲಕ ರಸ್ತೆ, ವಿದ್ಯುತ್, ಕುಡಿಯುವ ನೀರು, ಪ್ರಾಂಗಣ, ಗೋದಾಮು ನಿರ್ಮಾಣ ಮಾಡಲಾಗಿದೆ ಎಂದ ಅವರು ನಮ್ಮ ತಾಲೂಕಿನ ರೈತರು, ಕೂಲಿಕಾರರು ಇದ್ದು ಕುರಿ, ಮೇಕೆ ಸಂತೆಯ ಜತೆಗೆ ಎತ್ತು ಒಳಗೊಂಡು ಜಾನುವಾರಗಳ ಮಾರಾಟ ಮತ್ತು ಕೊಳ್ಳಲು ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಗೆ ಹೋಗುತ್ತಿದ್ದು ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿ ಹಾಗೂ ಜನಪ್ರತಿನಿಧಿಗಳು ಇಚ್ಛಶಕ್ತಿವಹಿಸಿ ರೈತರಿಗೆ ಅನುಕೂಗಲಿದ್ದು ಎತ್ತಿನ ಸಂತೆಯನ್ನು ಸಹ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಪಿಎಂಸಿ ಅಧ್ಯಕ್ಷ ಡಿ.ಜಂಬಣ್ಣ ವಹಿಸಿದ್ದರು. ವಕೀಲ ಅಬ್ದುಲ್ ರೆಹಮಾನ್ ಸಾಬ್, ಎಪಿಎಂಸಿ ಉಪಾಧ್ಯಕ್ಷ ಬೆನಕಶೆಟ್ಟಿ ಅಜ್ಜಪ್ಪ, ತಾಪಂ ಸದಸ್ಯ ಶಿಂಗ್ರಿಹಳ್ಳಿ ನಾಗರಾಜ, ಸಹಾಯಕ ನಿರ್ದೇಶಕಿ ಪಿ.ಮಂಜುಳಾದೇವಿ, ಕೆ.ಶಿಲ್ಪಾಶ್ರೀ, ಕೆ.ಎಂ.ಬಸವರಾಜಯ್ಯ, ಎಪಿಎಂಸಿ ಸದಸ್ಯರಾದ ಎಚ್.ವೀರಪ್ಪ, ನಳಿನ ರಾಮನಗೌಡ, ಬಿ.ಎನ್.ಉಮೇಶ, ಕೆ.ಬಸವರಾಜ, ತಾವರ್ಯನಾಯ್ಕ, ಎಂ.ಅನ್ನಪೂರ್ಣಮ್ಮ, ಮುದುಗಲ್ ಗುರುನಾಥ, ಬಿ.ರಾಮಪ್ಪ, ಅಶೋಕಗೌಡ, ಪಿ.ಸುರೇಶ, ಕೃ.ಮಾ.ಇ.ಅಭಿಯಂತರ ಬಿ.ಎಂ.ಪಾಟೀಲ್, ವರ್ತಕ ದನರಾಜ್ ಜೈನ್, ಎಲ್.ಕೊಟ್ರೇಶ್, ಎನ್.ಪ್ರಕಾಶ್, ಗೊಂಗಡಿ ನಾಗರಾಜ, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
