ಹರಿಹರ:
ಪತ್ರಕರ್ತನೆಂದು ನಕಲಿ ಬಸ್ ಪಾಸ್ ತೋರಿಸಿ ಪ್ರಯಾಣಿಸಿದ ಆರೋಪದ ಮೇಲೆ ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಪೂರ್ವಾಚಾರಿ ಎಂಬ ವ್ಯಕ್ತಿ ವಿರುದ್ದ ಶುಕ್ರವಾರ ಸಂಜೆ ಇಲ್ಲಿನ ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ.
ಗುರುವಾರ ಬೆಳಿಗ್ಗೆ ನಂದಿತಾವರೆ ಬಳಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಹತ್ತಿದ್ದ ಪೂರ್ವಾಚಾರಿಗೆ ನಿರ್ವಾಹಕ ಟಿಕೆಟ್ ಪಡೆಯಲು ಹೇಳಿದಾಗ, ತುಮಕೂರಿನಿಂದ ಹರಿಹರಕ್ಕೆ ಸುದ್ದಿ ಮಾಡಲು ಬಂದಿದ್ದು, ಉಚಿತ ಪಾಸ್ ಇದೆ ಎಂದು ತೋರಿಸಿದ್ದಾನೆ. ಇದು ನಮ್ಮ ಸಂಸ್ಥೆ ನೀಡಿದ್ದಲ್ಲ ಟಿಕೆಟ್ ಪಡೆಯಿರಿ ಎಂದು ಹೇಳಿದರೂ ಕೇಳದೆ ಹರಿಹರದವರೆಗೆ ಪ್ರಯಾಣಿಸಿದ ಪೂರ್ವಾಚಾರಿಯನ್ನು ನಿರ್ವಾಹಕ ನಿಲ್ದಾಣಾಧಿಕಾರಿಗಳ ಬಳಿ ಕರೆದೊಯ್ದು, ಪಾಸ್ ಪರಿಶೀಲಿಸಿದಾಗ ಅದು ನಕಲಿ ಎಂಬುದು ತಿಳಿದಿದೆ.
ನಕಲಿ ಪಾಸ್ ಇಟ್ಟುಕೊಂಡು ಅಸಲಿ ಎಂದು ಸುಳ್ಳು ಹೇಳಿದ, ಉಚಿತವಾಗಿ ಪ್ರಯಾಣಿಸಿದ ಅಲ್ಲದೆ ಸಾರಿಗೆ ಸಂಸ್ಥೆಗೆ ಮೋಸ ಮಾಡಿದ ಆರೋಪದ ಮೇಲೆ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ