ಹೂವಿನಹಡಗಲಿ :
ಸುಕ್ಷೇತ್ರ ಬೆಟ್ಟದ ಮಲ್ಲೇಶ್ವರ ಜೀರ್ಣೋದ್ಧಾರ ಸಮಿತಿಯಿಂದ 1 ಲಕ್ಷ ರೂಗಳ ನೆರವನ್ನು ಕೊಡಗು ಸಂತ್ರಸ್ತರ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಯಿತು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಬಾವಿಬೆಟ್ಟಪ್ಪನವರು ಮಾತನಾಡಿ ಕೊಡಗಿನ ಜನತೆ ತಮ್ಮ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಅವರಿಗೆ ನೆರವು ನೀಡುವುದರ ಮೂಲಕ ಸ್ವಲ್ಪ ಪ್ರಮಾಣದ ಸಹಾಯ ಮಾಡಿದಂತಾಗುತ್ತದೆ ಎನ್ನುವುದು ನಮ್ಮ ಸಮಿತಿಯ ಅಭಿಪ್ರಾಯವಾಗಿದೆ ಎಂದರು.
ಶಾಸಕರಾದ ಪಿ.ಟ.ಪರಮೇಶ್ವರನಾಯ್ಕ ಮಾತನಾಡಿ ಸಂಕಷ್ಟದ ಪರಿಸ್ಥಿತಿಯಲ್ಲಿ ನೆರಹಾವಳಿಯಿಂದ ಕೊಡಗಿನ ಜನತೆ ಜೀವನ ಅಸ್ತವ್ಯಸ್ತಗೊಂಡಿದ್ದು, ಅವರಿಗೆ ನೆರವು ನೀಡಿದಂತಹ ಬೆಟ್ಟದ ಮಲ್ಲೇಶ್ವರ ಜೀರ್ಣೋದ್ಧಾರ ಸಮಿತಿಯ ಕಾರ್ಯ ಶ್ಲಾಘನೀಯ ಎಂದರು.
ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಕೆಂಚಮ್ಮನಹಳ್ಳಿ ಹಾಲಪ್ಪ, ಸದಸ್ಯರಾದ ಮಂಜುನಾಥ, ದೇವೇಂದ್ರಪ್ಪ, ತಾ.ಪಂ. ಅಧ್ಯಕ್ಷ ಹಾಲೇಶ, ತಾ.ಪಂ.ಸದಸ್ಯ ನಾರಾಯಣಸ್ವಾಮಿ, ಹಾಗೂ ವೀರಭದ್ರಗೌಡ, ಸೇರಿದಂತೆ ಹಲವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
