ಲೋಕಸಭಾ ಚುನಾವಣೆ: ವೆಚ್ಚ ವೀಕ್ಷಕರ ಆಗಮನ

ಬಳ್ಳಾರಿ

       ಲೋಕಸಭಾ ಚುನಾವಣೆ-2019ರ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗವು ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಇಬ್ಬರು ಹಿರಿಯ ಅಧಿಕಾರಿಗಳನ್ನು ವೆಚ್ಚ ವೀಕ್ಷಕರನ್ನಾಗಿ ನೇಮಿಸಿದ್ದು, ಅವರು ಬಳ್ಳಾರಿಗೆ ಗುರುವಾರ ಆಗಮಿಸಿದ್ದಾರೆ.
ಹಿರಿಯ ಐಆರ್‍ಎಸ್ ಅಧಿಕಾರಿ ಮನ್ವೀಶ್‍ಕುಮಾರ್ ಅವರು ಕೂಡ್ಲಿಗಿ, ಹಡಗಲಿ, ಸಂಡೂರು ಮತ್ತು ಹಗರಿಬೊಮ್ಮನಹಳ್ಳಿ ವಿಧನಸಭಾಕ್ಷೇತ್ರಗಳ ಖರ್ಚುವೆಚ್ಚಗಳ ಮೇಲೆ ನಿಗಾ ವಹಿಸಲಿದ್ದಾರೆ. ಇವರು ಕೂಡ್ಲಿಗಿಯ ಸರಕಾರಿ ಅತಿಥಿಗೃಹ(ಐಬಿ)ದಲ್ಲಿ ತಂಗಲಿದ್ದು, ಅವರ ಮೊ:8277113984 ಇದೆ.

        ಇಂಡಿಯನ್ ಪೋಸ್ಟಲ್ ಮತ್ತು ಟೆಲಿಕಾಂ ಪ್ರಾಧಿಕಾರ ಹಣಕಾಸು ಸೇವೆ(ಟಿಎಎಫ್‍ಎಸ್) ಹಿರಿಯ ಅಧಿಕಾರಿಗಳಾಗಿರುವ ಅನಿತಾ ಮಹಾದಾಸ್ ಅವರು ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ, ವಿಜಯನಗರ ಮತ್ತು ಕಂಪ್ಲಿ ವಿಧಾನಸಭಾ ಕ್ಷೇತ್ರಗಳ ಖರ್ಚು-ವೆಚ್ಚದ ಮೇಲೆ ನಿಗಾವಹಿಸಲಿದ್ದು,ಅವರು ಬಳ್ಳಾರಿಯ ಸರಕಾರಿ ಅತಿಥಿಗೃಹದಲ್ಲಿ ತಂಗಲಿದ್ದಾರೆ. ಅವರ ಮೊ:8277115913/9448542144 ಆಗಿದೆ.

       ಸಾರ್ವಜನಿಕರು ಚುನಾವಣಾ ಖರ್ಚು-ವೆಚ್ಚಗಳ ಕುರಿತು ದೂರು,ಮಾಹಿತಿ ನೀಡಲು ವೆಚ್ಚ ವೀಕ್ಷಕರನ್ನು ಪ್ರತಿದಿನ ಬೆಳಗ್ಗೆ 10ರಿಂದ 11ರ ಅವಧಿಯೊಳಗೆ ಅಥವಾ ಸಂಜೆ ಭೇಟಿ ಮಾಡಬಹುದು ಎಂದು ಜಿಲ್ಲಾಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link