ಗುತ್ತಲ:
ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ ಬೀರಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವನ್ನು ಭಕ್ತಾಧಿಗಳು ಮೂರು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ವರ್ಷದಲ್ಲಿ ಎರಡು ಸರಿ ಅಂದರೆ ಶಿವರಾತ್ರಿ ಹಾಗೂ ನೂಲ ಹುಣ್ಣಿಮೆಯಲ್ಲಿ ನಡೆಯುವಂತ ಈ ಜಾತ್ರೆಗೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತಾದಿಗಳು ಜಾತ್ರೆಗೆ ಆಗಮಿಸಿ ಬೀರಲಿಂಗೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.
ಶಿವರಾತ್ರಿ ಹಾಗೂ ನೂಲ ಹುಣ್ಣಿಮೆಯ ಸಂಧರ್ಭದಲ್ಲಿ ಹಾಲು ಮತದ ಕಾಶಿ ಎಂದು ಕರೆಯುವ ಬಿಜಾಪುರ ಜಿಲ್ಲೆ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ಬರುವ ಹುಲ್ಲಜಂತಿಯಲ್ಲಿ ನಡೆಯುವಂತೆ ಗುತ್ತಲ ಪಟ್ಟಣದಲ್ಲಿ ಮೂರು ದಿನಗಳ ಕಾಲ ಜಾತ್ರೆ ವೈಭವದಿಂದ ಜರುಗುತ್ತದೆ.
ಜಾತ್ರೆಗೆ ಬಂದಂತಹ ಭಕ್ತಾಧಿಗಳು ತಮ್ಮ ಕಷ್ಟ ಕಾರ್ಪಣ್ಯಗಳನ್ನು ದೂರಮಾಡಿ ಜೀವನದಲ್ಲಿ ಸುಖ,ಶಾಂತಿ,ಸಮೃದ್ಧಿಯನ್ನು ಕರುಣಿಸಲಿ ಹಾಗೂ ಸರಿಯಾದ ಕಾಲಕ್ಕೆ ಮಳೆಯಾಗಿ ರೈತರು ಬೆಳೆದಂತಹ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಂಡು ನಂತರ ದೇವಸ್ಥಾನದ ಮುಂಭಾಗದ ಅಗ್ನಿಕುಂಡವನ್ನು ಹಾಯುವರು.
ಈ ಒಂದು ಜಾತ್ರೆಗೆ ಲಕ್ಷ್ಮೇಶ್ವರ,ರಾಣೆಬೆನ್ನೂರ,ದೇವರಗುಡ್ಡ,ಬಸಾಪುರ,ಭರಡಿ, ಕೂರಗುಂದ,ನೆಗಳೂರ,ಗುತ್ತಲ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಮೂಲಕ ಜಾತ್ರೆಯ ಮೆರಗನ್ನು ಹೆಚ್ಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ