ತುಮಕೂರು:
ಬೆನ್ನು ಹಾಗೂ ಕಾಲಿನ ರಕ್ಷಣೆಯ ಬಗ್ಗೆ ಅತಿದೊಡ್ಡ ಜಾಗೃತಿ ಮೂಡಿಸುವ ಕಾರ್ಯಕ್ರಮ ಎರಡು ಗಿನ್ನೆಸ್ ದಾಖಲೆಗಳ ಒಟ್ಟಿಗೇ ಸಾಧನೆ, ತುಮಕೂರು ಪದ್ಮಶ್ರೀ ಮತ್ತು ಡಾ. ಬಿ.ಸಿ. ರಾಯ್ ಪ್ರಶಸ್ತಿ ಪುರಸ್ಕೃತ ರೊಟೆರಿಯನ್ ಡಾ. ಜಾನ್ ಎಬನೆಝರ್ ಅವರಿಂದ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮ. ಡಾ. ಜಾನ್ ಎಬನೆಝರ್ ಅವರು ಬೆನ್ನು ಹಾಗೂ ಕಾಲಿನ ರಕ್ಷಣೆಯ ಬಗ್ಗೆ ಅತಿದೊಡ್ಡ ಅರಿ ಮೂಡಿಸುವ ಕಾರ್ಯಕ್ರಮ ನಡೆಸಿ ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ಒಟ್ಟಿಗೆ ಸಾದಿಸುವ ಪ್ರಯತ್ನ ತುಮಕೂರನ್ನು ಹಿಂದೆಂದೂ ಇಂತಹ ವೈದ್ಯಕೀಯ ಈಬಿರ ಇಲ್ಲಿ ನಡೆದಿರಲಿಲ್ಲ. 600 ಕ್ಕು ಹೆಚ್ಚು ಜನ ಎಸ್.ಐ.ಟಿ.ಯ ಬಿರ್ಲಾ ಸಭಾಂಗಣದಲ್ಲಿ 26.8.18 ರಂದು ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ರೊಟರಿ ಬೆಂಗಳೂರು ದಕ್ಷಿಣ ಸಂಸ್ಥೆ ಇತರ ಏಳು ರೊಟರಿ ಸಂಸ್ಥೆಗಳ ಜೊತೆಗೂಡಿ ನಡೆಸಿತ್ತು. ಎರಡು ವಿಶ್ವ ಗಿನ್ನೆಸ್ ದಾಖಲೆಗಳನ್ನು ಒಟ್ಟಿಗೇ ಸಾಧಿಸುವ ಇಂತಹ ಕಾರ್ಯಕ್ರಮ ಇದೇ ಮೊದಲ ಬಾರಿಗೆ ನಡೆದಿದೆ. ಇಲ್ಲಿ ಬೆನ್ನು ಮತ್ತು ಕಾಲಿನ ರಕ್ಷಣೆಯ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸಿ ಜನರಲ್ಲಿ ಜಾಗ್ೃತಿ ಮೂಡಿಸಲಾಯಿತು. ಈ ಶಿಬಿರ ಬೆಳಿಗ್ಗೆ 10 ಘಂಟೆಗೆ ಪ್ರಾರಂಭವಾಯಿತು.
ಸುಮಾರು 50 ಜನ ನರ್ಸ್‍ಗಳು, ಪ್ಯಾರಾಮೆಡಿಕ್ಸ್, ಸ್ವಯಂಸೇವಕರು ಇದರಲ್ಲಿ ಸಹಾಯ ನೀಡಿದರು. ರೊಟರಿ ಬೆಂಗಳೂರು ದಕ್ಷಿಣ ಸಂಸ್ಥೆಯ ಅಧ್ಯಕ್ಷ ರೊಟೆರಿಯನ್ ಎಚ್. ಆರ್. ಸತೀಶ್, ಎಂ.ಏಸ್. ಜಯಚಂದ್ರ ಆರಾಧ್ಯ ಶಿಬಿರದ ಮುಖ್ಯ ಸಂಚಾಲಕರು, ಮತ್ತು ಅಧ್ಯಕ್ಷರು ಶಿಬಿರ ಉದ್ಘಾಟಿಸಿ ಡಾ ಜಾನ್ ಅವರು ಸಾರ್ವಜನಿಕರಲ್ಲಿ ಬೆನ್ನು ಮತ್ತು ಕಾಲಿನ ರಕ್ಷಣೆಯ ಬಗ್ಗೆ ಅರಿವು ಮೂಡಿಸುತ್ತಿರುವುದನ್ನು ಪ್ರಶಂಸಿದರು. ಐವರು ಹಿರಿಯ ಕನಸ್ಸಲ್ಟmಂಟ್ಸ್ ರೋಗಿಗಳನ್ನು ಪರೀಕ್ಷಿಸಿ ಸಲಹೆ ನೀಡಿದರು. ಕೆಳಬೆನ್ನಿನ ಮತ್ತು ಕಾಲಿನ ನೋವು ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯ ಸಮಸ್ಯೆ ಎನಿಸಿವೆ. ಇವಕ್ಕೆ ಮುಖ್ಯ ಕಾರಣ ಮ್ಮ ಆಧುನಿಕ ಒತ್ತಡದ ಜೀವನ ಶೈಲಿ. ಈ ಸಮಸ್ಯೆಗೆ ಸೂಕ್ತ ಪರಿಹಾರ ಬಹಳ ದುಬಾರಿ ಅಲ್ಲದೆ ಇನ್ನೂ ಸರಿಯಾಗಿ ಸಿಕ್ಕಿಲ್ಲ. ಆಧುನಿಕ ವಿಧಾನಗಳು ಮತ್ತು ಇದಕ್ಕೆ ಪರಿಹಾರವಲ್ಲ. ಡಾ. ಜಾನ್ ಅವರು ಈ ವಿಷಯದ ಬಗ್ಗೆ ¸ Àರಿಯಾದ ಮಾಹಿತಿ ನೀಡಿದ್ದಲ್ಲದೆ, ಆರೋಗ್ಯಕರ ಜೀವನ ಶೈಲಿಯಿಂದ ಹೇಗೆ ಇಲ್ಲದೆಯೇ ನಾವು ಮನೆಯಲ್ಲೇ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ವಿವರಿಸಿದರು. ಬºಳ ವಿರಳವಾಗಿ ಇಂತಹ ವೈದ್ಯಕೀಯ ಶಿಬಿರಗಳು ಜನರನ್ನು ಆಕಷಿಸುತ್ತವೆ. ಆದರೆ ಡಾ. ಜಾನ್ ಅವರು ತುಮಕೂರಿನ ನಾಗರಿಕರ ಮೇಲೆ ತಮ್ಮ ಮಾಯಾಜಾಲ ಹರಡಿದ್ದರು.
ಜನರು ಹೀಗೆ ಸ್ಪಂದಿಸಿದ್ದು ಅವರಿಗೆ ಸಾಮಾನ್ಯ ಮೂಳೆಗೆ ಸಂಬಂಧಿಸಿದ ಕಾಯಿಲೆಗಳ ವಿರುದ್ಧ ಸಮರ ಸಾರಲು ಉತ್ತೇಜಿಸಿದೆ. ಶಿಬಿರದ ಕೊನೆಯಲ್ಲಿ ಇಡೀ ಜನಸಮೂಹ ಒಟ್ಟಿಗೇ ಎದ್ದು ಜಾನ್ ಅವರಿಗೆ ಚಪ್ಪಾಳೆಯ ಮೂಲಕ ಅಭಿನಂದಿಸಿತು. ಆನರ ಹಿತಕ್ಕಾಗಿ ಅವರಿಗೆ ಆರೋಗ್ಯದ ಬಗ್ಗೆ ಸರಿಯಾದ ಜ್ಞಾನ ನೀಡಿ ಅವರನ್ನು ಸಬಲೀಕರಣಗೋಳಿಸಿದ ಇಂತಹ ‘ಗುಡ್ ಸಮಾರಿಟನ್’ ಅವರನ್ನು ಅಭಿನಂದಿಸಲು ವಿಶ್ವವೇ ಒಂದು ಕ್ಷಣ ಸ್ತಬ್ದವಾಯಿತು ಎನ್ನಬಹುದು. ಈ ವರದಿಯನ್ನು ತಮ್ಮ ಜನಪ್ರಿಯ ದಿನಪತ್ರಿಕೆಯಲ್ಲಿ ಪ್ರಕಾಶಿಸಿ ಅದು ಜನಸಾಮಾನ್ಯರಿಗೆ ತಲುಪುವಂತೆ ಮಾಡಬೇಕೆಂದು ಕೋರುತ್ತೇನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
