ರಾಜ್ಯದ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ

ಬೆಂಗಳೂರು
           ಕೇಂದ್ರ ಸರಕಾರ ಇಂದು ರಾಜ್ಯದಲ್ಲಿ ಖರೀದಿ ಕೇಂದ್ರಗಳ ಮೂಲಕ ಹೆಸರುಕಾಳು ಖರೀದಿಯನ್ನು ಕೂಡಲೇ ಆರಂಭಿಸಲು ಅನುಮೋದನೆ ನೀಡಿ ಆದೇಶ ಹೊರಡಿಸಿದೆ.ರಾಜ್ಯದ ಮನವಿಗೆ ಕೇಂದ್ರ ಸರ್ಕಾರ ಕೊನೆಗೂ ಸ್ಪಂದಿಸಿದ್ದು, 23,250 ಮೆಟ್ರಿಕ್ ಟನ್ ಹೆಸರುಕಾಳನ್ನು ಬೆಂಬಲ ಯೋಜನೆಯಡಿ 90 ದಿನಗಳಲ್ಲಿ ಖರೀದಿ ಪ್ರಕ್ರಿಯೆ ಮುಗಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

         ಕೇಂದ್ರದ ನೋಡಲ್ ಏಜೆನ್ಸಿ ಹೆಸರುಕಾಳು ಖರೀದಿ ಪ್ರಕ್ರಿಯೆ ಮುಗಿದ ದಿನದಿಂದ 15 ದಿನಗಳ ಅವಧಿಯಲ್ಲಿ ಖರಿದಿಸಿದ ಹೆಸರುಕಾಳನ್ನು ತೀರುವಳಿ ಮಾಡಬೇಕು. ಹಾಗು ಸಂಭಂದಿಸಿದ ಉಗ್ರಾಣಗಳ ರಸೀದಿ ಪಡೆದು ಕೇಂದ್ರ ನೋಡಲ್ ಏಜೆನ್ಸಿಯು ರಾಜ್ಯಮಟ್ಟದ ಖರೀದಿ ಸಂಸ್ಥೆಗಳಿಗೆ ಹಣ ಪಾವತಿ ಮಾಡಬೇಕೆಂದೂ ಕೂಡ ಕಟ್ಟು ನಿಟ್ಟಿನ ಸೂಚನೆ ಹೊರಡಿಸಲಾಗಿದೆ.

         ಅಲ್ಲದೇ ರಾಜ್ಯ ಸರಕಾರ ಕನಿಷ್ಟ 15 ದಿನಗಳ ಅವಧಿಯ ಖರೀದಿಗೆ ಆವರ್ತ ನಿಧಿ ಮಂಜೂರು ಮಾಡಿ ಸಂಬಂಧಿಸಿದ ರೈತರಿಗೆ ಆಧಾರ್ ನಂಬರ್ ಜೋಡಣೆ ಆಗಿರುವ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವ ಕ್ರಮವನ್ನೂ ಕೂಡಾ ತುರ್ತಾಗಿ ಮಾಡಲು ಆದೇಶಿಸಲಾಗಿದೆ.
         ಕೇಂದ್ರ ಕೃಷಿ ಸಚಿವ ರಾಧಾಮೋಹನ ಸಿಂಗ್ ಅವರನ್ನು ಸಂಸದ ಪ್ರಹ್ಲಾದ್ ಜೋಷಿ ದೆಹಲಿಯಲ್ಲಿಂದು ಭೇಟಿ ಮಾಡಿ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
          ರಾಜ್ಯದ ಪ್ರಸ್ತಾವನೆ ಬಗ್ಗೆ ಕೇಂದ್ರ ಸರ್ಕಾರ ಕೇವಲ 4 ದಿನಗಳಲ್ಲಿ ಬಗ್ಗೆ ಕ್ರಮ ತೆಗೆದುಕೊಂಡಿದೆ. ಹೀಗಾಗಿ ರಾಜ್ಯ ಸರಕಾರ ಕೂಡಲೇ ಆಯಾ ಜಿಲ್ಲಾಡಳಿತದ ಮೂಲಕ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಪ್ರಹ್ಲಾದ್ ಜೋಷಿ ಒತ್ತಾಯಿಸಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link