ಕೊರಟಗೆರೆ:
ತಾಲ್ಲೂಕಿನ ಸಿ.ಎನ್.ದುರ್ಗ ಹೋಬಳಿಗೆ ಸೇರಿದ ಕಬ್ಬಿಗೆರೆ ಶಾಲೆಯ ಮಕ್ಕಳು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಜ್ಯೋತಿ ಉದ್ದ ಜಿಗಿತ, ಎತ್ತರ ಜಿಗಿತ, 600 ಮೀ.ಓಟ, ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದರು.
ಹೆಣ್ಣು ಮಕ್ಕಳ ರಿಲೇಯಲ್ಲಿ ದ್ವಿತೀಯ ಸ್ಥಾನ, ನರಸಿಂಹಮೂರ್ತಿ ಉದ್ದಜಿಗಿತದಲ್ಲಿ ಪ್ರಥಮ, 400 ಮೀ. ಓಟ ಭರತ ಪಿ. ತೃತೀಯ, 600 ಮೀ. ಓಟ ಕಿರಣ ತೃತೀಯ, 200 ಮೀ.ಓಟದಲ್ಲಿ ಚಂದನ ತೃತೀಯ, ಕಬಡ್ಡಿ ಹೆಣ್ಣು ಮಕ್ಕಳ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದರು. ಮುಖ್ಯೋಪಾಧ್ಯಾಯ ಚನ್ನಪ್ಪ, ಸಹಶಿಕ್ಷಕರಾದ ಚೌಡಯ್ಯ, ನಾಗರತ್ನಮ್ಮ, ಕ್ರೀಡಾ ತರಬೇತುದಾರರಾದ ಲಲಿತಮ್ಮ ಅವರುಗಳು ಮಕ್ಕಳನ್ನು ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








