ಬ್ಯಾಡಗಿ:
ಗ್ರಾಮೀಣ ಜನತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ರವಿವಾರ ಅವರು ತಾಲೂಕಿನ ಅಳಲಗೇರಿ ಗ್ರಾಮದಲ್ಲಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವತಿಯಿಂದ 1 ಕೋಟಿ 50 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಲಿರುವ ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದ ಹತ್ತು ಹಲವು ಗ್ರಾಮಗಳ ರಸ್ತೆಗಳಿಗೆ ಸೇತುವೆಗಳ ಅವಶ್ಯಕತೆ ಇದೇ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿರುವ ಅವಶ್ಯಕತೆ ಹೊಂದಿರುವ ಎಲ್ಲ ಗ್ರಾಮಗಳ ರಸ್ತೆಗಳಿಗೆ ಸೇತುವೆಗಳನ್ನು ನಿರ್ಮಿಸಿ ಕೊಡುವುದಾಗಿ ತಿಳಿಸಿದರಲ್ಲದೇ ತಾಲೂಕಿನ ಅನೇಕ ಗ್ರಾಮಗಳಲ್ಲಿ ಈಗಾಗಲೇ ಗ್ರಾಮದ ರಸ್ತೆಗಳನ್ನು ಕಾಂಕ್ರೀಟ್‍ಕರಣಗೊಳಿಸಲಾಗಿದ್ದು ತಾಲೂಕಿನ ಅನೇಕ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಸಮರ್ಪಕ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದ್ದು ಈ ಮೂಲಕ ಗ್ರಾಮೀಣ ಭಾಗಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವ ಸಂಕಲ್ಪ ಮಾಡಲಾಗಿದೆ ಎಂದರು.
ಬಿಜೆಪಿ ಧುರೀಣ ಸುರೇಶ ಯತ್ನಳ್ಳಿ ಮಾತನಾಡಿ ಅಭಿವೃದ್ದಿಯನ್ನೇ ಆಡಳಿತ ಮಂತ್ರವನ್ನಾಗಿಸಿಕೊಂಡು ಆಡಳಿತ ನಡೆಸುತ್ತಿರುವ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ದೇಶದ ಜೀವನಾಡಿಯಾಗಿರುವ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತಲಿದ್ದಾರೆ. ವಿವಿಧ ಯೋಜನೆಗಳಡಿಯಲ್ಲಿ ಹಲವಾರು ಗ್ರಾಮಗಳನ್ನು ಸರ್ವಾಂಗೀಣ ಅಭಿವೃದ್ದಿಗೆ ಒಳಪಡಿಸಿ ಅತ್ತುತ್ಯಮ ಗ್ರಾಮಗಳನ್ನಾಗಿ ನಿರ್ಮಿಸಲು ಪ್ರಯತ್ನಿಸುತ್ತಲಿರುವುದು ಸಂತೋಷ ತಂದಿದೆ ಎಂದರು.
ನಿವೃತ್ ಇಂಜನೀಯರ ಸಿ.ಆರ್.ಬಳ್ಳಾರಿ ಮಾತನಾಡಿದರು. ಗ್ರಾ.ಪಂ.ಅಧ್ಯಕ್ಷ ದಿಳ್ಳೆಪ್ಪ ಮೇಡ್ಲೆರಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯೆ ಅನಸೂಯಾ ಕುಳೇನೂರ, ತಾ.ಪಂ.ಸದಸ್ಯೆ ಪಾರ್ವತೆಮ್ಮ ಮುದಕಮ್ಮನವರ, ಗ್ರಾ.ಪಂ.ಉಪಾಧ್ಯಕ್ಷೆ ನೀಲಮ್ಮ ಕಿತ್ತೂರ, ಸದಸ್ಯರಾದ ನಾಗಪ್ಪ ಯತ್ನಳ್ಳಿ, ಹನುಮಂತಪ್ಪ ತಂಗೌಡ್ರ, ರವಿ ಪಟ್ಟಣಶೆಟ್ಟಿ, ಶಿವಬಸಪ್ಪ ಕುಳೇನೂರ, ಚಂದ್ರಶೇಖರ ಆನ್ವೇರಿ, ನಾಗಪ್ಪ ಕೋಟಿಯವರ, ಪುಟ್ಟಪ್ಪ ಕಿತ್ತೂರ, ಲೋಕೋಪಯೋಗಿ ಇಂಜನೀಯರ ಶೆಟ್ಟಿಕೇರಿ, ಸಹಾಯಕ ಇಂಜನೀಯರ ರಾಜಶೇಖರ ಹರಮಗಟ್ಟಿ, ಗುತ್ತಿಗೆದಾರ ಸುಭಾಶ ಕಪ್ಪಲಗುಡ್ಡ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ