ಮಾದರಿ ಸಿಸಿ ರಸ್ತೆ ಲೋಕಾರ್ಪಣೆ

ದಾವಣಗೆರೆ :

  ಮಹಾನಗರ ಪಾಲಿಕೆಯ 21ನೇ ವಾರ್ಡಿನ ಸೂಪರ್ ಮಾರ್ಕೇಟ್ ಬಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಮಾದರಿ ಸಿಸಿ ರಸ್ತೆಯನ್ನು ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಭಾನುವಾರ ಬೆಳಿಗ್ಗೆ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಈ ಹಿಂದೆ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸಚಿವರಾಗಿದ್ದ ವೇಳೆ ಮಹಾನಗರ ಪಾಲಿಕೆಯ 14ನೇ ಹಣಕಾಸು ಯೋಜನೆಯಡಿ ಈ ಭಾಗದಲ್ಲಿ ಮಾದರಿ ರಸ್ತೆಯನ್ನು ನಿರ್ಮಿಸುವ ಉದ್ದೇಶದಿಂದ 40 ಲಕ್ಷ ರೂಗಳನ್ನು ಬಿಡುಗಡೆಗೊಳಿಸಿದ್ದರು. ಇದೀಗ ಕಾಮಗಾರಿ ನಡೆದು ಉತ್ತಮ ರಸ್ತೆಯಾಗಿದೆ. ಈ ಮಾದರಿ ರಸ್ತೆಯಲ್ಲಿ   ಎಸ್.ಎಸ್.ಡೆವಲಪರ್ಸ್‍ನ ಶಿರಾಜ್ ಷೇಕ್ ಅವರು ಗಿಡಗಳಿಗೆ ಟ್ರೀಗಾರ್ಡ್‍ಗಳನ್ನು ಕೊಡುಗೆ ಆಗಿ ನೀಡಿರುವುದು ಸಂತಸ ತಂದಿದೆ ಎಂದರು.

   ಈ ಸಂದರ್ಭದಲ್ಲಿ ಮಾಜಿ ಶಾಸಕ ಶಿರಾಜ್ ಷೇಕ್, ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ, ಮಹಾನಗರ ಪಾಲಿಕೆ ಸದಸ್ಯರುಗಳಾದ ದಿನೇಶ್.ಕೆ.ಶೆಟ್ಟಿ, ಅಶ್ವಿನಿ ಪ್ರಶಾಂತ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ನಾಗರಾಜ್, ಅಜ್ಜಪ್ಪ ಪವಾರ್, ರೇವಣಪ್ಪ, ವೆಂಕಟೇಶ್, ಭಾಸ್ಕರ್, ಪಂಚಪ್ಪ ತೆರದಾಳ್, ಶ್ರೀಕಾಂತ್ ಬಗರೆ, ರವಿ ಶಾಮಿಯಾನ, ಯುವರಾಜ್, ಬಸವರಾಜ್,ಕರಿಬಸಪ್ಪ, ಅಭಿಯಂತರ ಉಮೇಶ್, ಗುತ್ತಿಗೆದಾರ ಪ್ರವೀಣ್ ಜಯಣ್ಣ ಮತ್ತಿತರರಿದ್ದರು.

Recent Articles

spot_img

Related Stories

Share via
Copy link