ಗುತ್ತಲ:
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅಗ್ನಿಕುಂಡ ಜಾತ್ರಾ ಮಹೋತ್ಸವ ಸ.4 ರಂದು ಜುರುಗಲಿದೆ. ಲಿಂ.ಸಂಗನಬಸವ ಸ್ವಾಮೀಜಿ ಕೃಪಾಶೀರ್ವಾದಿಂದ ಜಂಗಮಕ್ಷೇತ್ರ ಲಿಂಗನಾಯಕನಹಳ್ಳಿ ಚನ್ನವೀರ ಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ. ಅಂದು ಬೆಳಗ್ಗೆ ವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ನೆರವೇರುವವು. ನಂತರ ಪುರವಂತರು ಹಾಗೂ ಸಮಾಳದವರು ಮತ್ತು ನಂದಿಕೋಲದವರು ಶ್ರೀಗಳ ಆಶೀರ್ವಾದ ಪಡೆದು ದೇವಸ್ಥಾಣದಿಂದ ಉತ್ಸವ ಮೂರ್ತಿಯ ಪಲ್ಲಕ್ಕಿ ಉತ್ಸವದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೊರಟು ಅಲ್ಲಲ್ಲಿ ಒಡಪುಗಳನ್ನು ಸಾರುತ್ತ, ಪವಾಡಗಳನ್ನು ಪ್ರದರ್ಶಿಸುತ್ತಾ ಪುನಃ ದೇವಸ್ಥಾನ ತಲುಪಿ. ಸಂಜೆ 3.30 ಗಂಟೆಗೆ ದೇವಸ್ಥಾನದ ಮುಂದೆ ನಿರ್ಮಿಸಿದ ಅಗ್ನಿಕುಂಡ ಪ್ರವೇಶ ಕಾರ್ಯಕ್ರಮ ಜರುಗುದು ಎಂದು ದೇವಸ್ಥಾನದ ಕಮೀಟಿ ಪ್ರಕಟಣೆಗೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ