ಗೆದ್ದ ಬಳಿಕ ವಾರ್ಡಿನ ಜನರಿಗೆ ಕೈ ಮುಗಿದರು; ಜನರ ಋಣ ತೀರಿಸಲು ಪ್ರಯತ್ನ;ಚಂದ್ರಶೇಖರ್

ಚಿತ್ರದುರ್ಗ;
               ನಿರೀಕ್ಷೆಯಂತೆಯೇ ನಗರಸಭೆಯ 4ನೇ ವಾರ್ಡಿನಲ್ಲಿ ಜಾತ್ಯಾತೀತ ಜನತಾ ದಳದ ಅಭ್ಯರ್ಥಿ ಹಾಗೂ ಹಾಲಿ ಸದಸ್ಯ ಚಂದ್ರಶೇಖರ್ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ.
              ಹಿಂದಿನ ಅವಧಿಯಲ್ಲಿ ಇದೇ ವಾರ್ಡಿನಲ್ಲಿ ಗೆಲುವು ಸಾಧಿಸಿದ್ದ ಚಂದ್ರಶೇಖರ್ ಅವರು ಒಮ್ಮೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಈ ಚುನಾವಣೆಯಲ್ಲಿ ಮತ್ತೆ ಬಿಜೆಪಿಯ ಅಶೋಕ್ (ಜಿಮ್ಮಿ) ಅವರ ವಿರುದ್ದ ಬಹುಮತಗಳಿಂದ ಗೆದ್ದಿದ್ದಾರೆ.
              ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ತಮ್ಮ ಅಭಿಮಾನಿಗಳು ಮತ್ತು ಕಾರ್ಯಕರ್ತರ ಜೊತೆಗೆ ವಾರ್ಡಿನತ್ತ ಮುಖಮಾಡಿದರು. ಬಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು ವಾರ್ಡಿನಲ್ಲಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.
ಬಳಿಕ ನೂತನ ಸದಸ್ಯಬ ಚಂದ್ರಶೇಖರ್ ಅವರು ವಾರ್ಡಿನ ಎಲ್ಲಾ ಬೀದಿ, ಗಲ್ಲಿಯ ಮನೆಗಳಿಗೂ ತೆರಳಿ ತಮ್ಮನ್ನು ಗೆಲ್ಲಿಸಿದ್ದಕ್ಕಾಗಿ ಮತದಾರರಿಗೆ ಕೈ ಮುಗಿದರು. ವಾರ್ಡಿನ ಕೆಲವು ಗಣ್ಯರ ಪಾದಮುಟ್ಟಿಯೂ ನಮಸ್ಕರಿಸಿದರು
ಜನರ ಋಣ ತೀರಿಸಲು ಪ್ರಯತ್ನ
              ಚುನಾವಣೆಯಲ್ಲಿ ತಮ್ಮ ಮೇಲೆ ಅಪಾರ ನಂಬಿಕೆ ಇಟ್ಟು ಜನರು ಗೆಲ್ಲಿಸಿದ್ದಾರೆ. ನನ್ನ ಅವಧಿಯಲ್ಲಿ ಜನರ ನಿರೀಕ್ಷೆಯಂತೆ ಕೆಲಸ ಮಾಡುವುದಾಗಿ ಚಂದ್ರಶೇಖರ್ ಭರವಸೆ ನೀಡಿದರು
            ವಾರ್ಡಿನಲ್ಲಿ ಕುಡಿಯುವ ನೀರು, ರಸ್ತೆ, Z್ಪರಂಡಿ ವ್ಯವಸ್ಥೆಯೂ ಸೇರಿದಂತೆ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಲಬ್ಯಗಳನ್ನ ದೊರೆಕಿಸಿಕೊಡಲು ಅದ್ಯತೆ ನೀಡಲಾಗುವುದು. ಕಸ ನಿರ್ವಣೆಯೂ ಸೇರಿದಂತೆ ಇಡೀ ವಾರ್ಡಿನಲ್ಲಿ ಸ್ವಚ್ಚತೆಗೆ ಒತ್ತು ಕೊಡಲಾಗುವುದು ಎಂದು ಹೇಳಿದರು
              ಕಳೆದ ಅವಧಿಯಲ್ಲಿಯೂ ವಾರ್ಡಿನ ಜನರಿಗೆ ಕೆಲಸ ಮಾಡಿಕೊಟ್ಟಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ಇನ್ನೂ ಹೆಚ್ಚಿನ ಜವಾಬ್ದಾರಿ ನೀಡಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಇಲ್ಲಿನ ಸಮಸ್ಯೆಗಳ ಪಟ್ಟಿ ಮಾಡಿ ಹಂತ ಹಂತವಾಗಿ ಬಗೆಹರಿಸಲು ಕ್ರಮಕೈಗೊಳ್ಳುವುದಾಗಿ ಚಂದ್ರಶೇಖರ್ ನುಡಿದರು

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link