ಶಿರಾದಲ್ಲಿ ಅಮರಜೀವಿ ಸೋಮಣ್ಣ ಸ್ಮರಣ ಸಂಚಿಕೆಯ ಲೋಕಾರ್ಪಣೆ

ಶಿರಾ:

           ನಗರದ ಸ್ನೇಹಕೂಟ ಪ್ರಕಾಶನದ ವತಿಯಿಂದ ಶ್ರೀ ರಂಗನಾಥ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ದಿ.ಕೆ.ಸೋಮಶೇಖರಪ್ಪ ಅವರನ್ನು ಕುರಿತ ಅಮರಜೀವಿ ಸೋಮಣ್ಣ ಸ್ಮರಣ ಸಂಚಿಕೆಯ ಲೋಕಾರ್ಪಣ ಸಮಾರಂಭವನ್ನು ಸೆ:8 ರ ಶನಿವಾರದಂದು ಕೈಗೊಳ್ಳಲಾಗಿದೆ.
              ಅಂದು ಬೆಳಿಗ್ಗೆ 10.45ಕ್ಕೆ ನಗರದ ಶ್ರೀ ಕೆ.ಮಲ್ಲಣ್ಣ ಸ್ಮಾರಕ ರಂಗನಾಥ ಪ.ಪೂ. ಕಾಲೇಜಿನ ಆವರಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಶಾಸಕರು ಹಾಗೂ ಮಾಜಿ ಸಚಿವರಾದ ಬಿ.ಸತ್ಯನಾರಾಯಣ್ ಉದ್ಘಾಟಿಸುವರು.
              ಹಿರಿಯ ಭೂವಿಜ್ಞಾನಿಗಳಾದ ಡಾ||ಟಿ.ಆರ್.ಅನಂತರಾಮು ಸ್ಮರಣ ಸಂಚಿಕೆಯ ಲೋಕಾರ್ಪಣೆ ಮಾಡುವರು. ಪ್ರಜಾಪ್ರಗತಿಯ ಸಂಪಾದಕ ಎಸ್.ನಾಗಣ್ಣ ಸ್ಮರಣ ಸಂಚಿಕೆಯೊಳಗಿನ ಎಲ್ಲಾ ಲೇಖಕರಿಗೆ ಸನ್ಮಾನ ಮಾಡುವರು. ಹಿರಿಯ ಸಾಹಿತಿ ವಿದ್ಯಾವಾಚಸ್ಪತಿ ಡಾ||ಕವಿತಾಕೃಷ್ಣ ಕೃತಿ ಕುರಿತು ಮಾತನಾಡುವರು. ಸ್ಮರಣ ಸಂಚಿಕೆಯ ಸಂಪಾದಕ ಬರಗೂರು ವಿರೂಪಾಕ್ಷ ಅಧ್ಯಕ್ಷತೆ ವಹಿಸುವರು.
               ಕುಂಚಿಟಿಗರ ಸಂಘದ ಅಧ್ಯಕ್ಷ ಆರ್.ನಾಗರಾಜು, ಕಾರ್ಯದರ್ಶಿ ಹೆಚ್.ಜಿ.ಲಿಂಗಯ್ಯ, ಕಾಲೇಜಿನ ಪ್ರಾಚಾರ್ಯ ಎಂ.ಲೋಕನಾಥ್, ಪ್ರೊ||ಕೆ.ಹನುಮಂತರಾಯಪ್ಪ, ಕಳ್ಳಂಬೆಳ್ಳ ಪಿ.ಎಸ್.ಐ. ಮುತ್ತುರಾಜ್ ಹೆಚ್. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು ದಿ.ಕೆ.ಸೋಮಶೇಖರಪ್ಪ ಅವರ ಧರ್ಮಪತ್ನಿ ಶ್ರೀಮತಿ ಪಾರ್ವತಿ ಕೆ.ಸೋಮಶೇಖರಪ್ಪ ಗಣ್ಯ ಉಪಸ್ಥಿತರಿರುವರು. ಓರ್ವ ಉತ್ತಮ ಪ್ರಾಧ್ಯಾಪಕರೂ ಆಗಿದ್ದ ದಿ.ಕೆ.ಸೋಮಶೇಖರಪ್ಪನವರ ಶಿಷ್ಯರು, ಅವರ ಒಡನಾಡಿಗಳು, ಸ್ನೇಹಿತರು ಹಾಗೂ ಸಾರ್ವಜನಿಕರು ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕಣಜನಹಳ್ಳಿ ಶ್ರೀಧರ್ ಹಾಗೂ ಕೋಟೆ ಚಂದ್ರಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Recent Articles

spot_img

Related Stories

Share via
Copy link