ಶೈಕ್ಷಣಿಕ ಕಾರ್ಯಾಗಾರ

ರಾಣಿಬೆನ್ನೂರ:

                   ಶಿಕ್ಷಣ ಮಂತ್ರಿಗಳು ವಾರ್ಷಿಕ ಪರೀಕ್ಷೆ ಹೊರತುಪಡಿಸಿ ಎಲ್ಲ ಪರೀಕ್ಷಗಳನ್ನು ತೆರೆದ ಪುಸ್ತಕ ಪದ್ದತಿಯಲ್ಲಿ ನಡೆಸುವಂತೆ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಆದರೆ ಮಕ್ಕಳು ಈ ಪದ್ದತಿಯಲ್ಲಿ ಪರೀಕ್ಷೆ ಬರೆಯುವ ಮೊದಲು ಮಕ್ಕಳಿಗೆ ಆಯಾ ಪಠ್ಯಕ್ರಮಕ್ಕೆ ಪೂರಕವಾದ ವಿಷಯ ಸಂಗ್ರಹಣಾ ಸಾಮಥ್ರ್ಯವನ್ನು ಶಿಕ್ಷಕರು ಹೊಂದುವ ಅನಿವಾರ್ಯತೆ ಇದೇ ಎಂದು ವಿಶ್ರಾಂತ ಪ್ರಾಧ್ಯಪಕ ಎನ್.ಆರ್. ಜೋಶಿ ಹೇಳಿದರು.
                  ನಗರದ ಎಜು ಏಶಿಯಾ ವಲ್ರ್ಡ ಸ್ಕೂಲ್‍ನಲ್ಲಿ ಶನಿವಾರ ಭಾರತಿ ಶಿಕ್ಷಾ ಪ್ರಕಲ್ಪದ ವತಿಯಿಂದ ಶಿಕ್ಷಕರು ಮತ್ತು ಮಕ್ಕಳಿಗಾಗಿ ಏರ್ಪಡಿಸಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ತೆರೆದ ಪುಸ್ತಕ ಪದ್ದತಿಯ ಪರೀಕ್ಷೆಯಲ್ಲಿ ಪಠ್ಯದಲ್ಲಿ ಮುದ್ರಿತ ವಿಷಯದ ಶೇ 25 ಭಾಗ ಮತ್ತು ಅದಕ್ಕೆ ಪೂರಕವಾಗಿ ಶೇ75ಭಾಗದ ಪ್ರಶ್ನೆಗಳಿರುತ್ತವೆ ಹೀಗಾಗಿ ಮಕ್ಕಳು ಪಠ್ಯಪುಸ್ತಕದ ಜೊತೆಗೆ ಅದಕ್ಕೆ ಪೂರಕ ವಿಷಯಗಳನ್ನು ಅರಿತುಕೊಳ್ಳುವಂತೆ ಪಾಠಮಾಡಲು ಶಿಕ್ಷಕರೂ ವಿಷಯ ಸಂಗ್ರಹಣೆ ಮಾಡಿ ಪಾಠ ಮಾಡುವ ಸಾಮಥ್ರ್ಯ ಪಡೆದುಕೊಳ್ಳಬೇಕು ಎಂದರು.
                  ನಕಾಶೆಗಳನ್ನು ನೋಡುವ ಕ್ರಮ, ಶಬ್ದಕೋಶಗಳ ಸರಿಯಾದ ಬಳಕೆ ಮತ್ತು ಅವುಗಳಲ್ಲಿನ ಕೆಲವು ದೋಷಗಳ ಕುರಿತಂತೆ ಮಕ್ಕಳಿಗೆ ವಿವರವಾಗಿ ತಿಳಿಸಿಕೊಡುವ ಜೊತೆಗೆ ಪರಿಸರ ಹಾಳುಮಾಡುವುದರಿಂದಾಗುವ ದುಷ್ಪರಿಣಾಮಗಳ ಕುರಿತ ನಿದರ್ಶನಗಳೊಂದಿಗೆ ವಿವರಿಸಿದರು.
                   ಪ್ರಾಚಾರ್ಯೆ ಉಮಾ ಬಣಕಾರ, ಭಾರತಿ ಶಿಕ್ಷಾ ಪ್ರಕಲ್ಪದ ದತ್ತಾತ್ರೇಯ ಕುಲಕರ್ಣಿ, ಕೆ.ಎನ್. ಷಣ್ಮುಖ, ಶ್ರೀನಿವಾಸ ಏಕಬೋಟೆ ಮತ್ತು ಶಿಕ್ಷಕರು ಇದ್ದರು.

Recent Articles

spot_img

Related Stories

Share via
Copy link