ಹಾವೇರಿ :
ತಾಲೂಕಿನ ಕನಕಾಪೂರ ಗ್ರಾಮದ ಹನಮಂತಗೌಡ ಬೀರನಗೌಡ ಕರೆಗೌಡ್ರ. ಈ ರೈತನಿಗೆ ಪರಿಹಾರ ನೀಡದೇ ಹೋದರೆ ದಿ 12 ರಂದು ಬೆಳಿಗ್ಗೆ 11 ಗಂಟೆಗೆ ಸಹಾಯಕ ಕೃಷಿ ನಿರ್ದೇಶಕರ ಇಲಾಖೆ ಎದುರಿಗೆ ರೈತನಿಗೆ ಸೂಕ್ತ ಪರಿಹಾರ ನೀಡುವವರೆಗೂ ಅಹೋ ರಾತ್ರಿ ಸತ್ಯಾಗ್ರಹವನ್ನು ಮಾಡಲಾಗುವುದು ಎಂದು ಉತ್ತರ ಕರ್ನಾಟಕ ರೈತ ಸಂಘದ ವತಿಯಿಂದ ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕನಕಾಪೂರ ಗ್ರಾಮದ ರೈತನಾದ ಹನಮಂತಗೌಡ ಬೀರನಗೌಡ ಕರೇಗೌಡ್ರ ಇವರ ಜಮೀನಿನ ಸರ್ವೇ ನಂ: 28/1, 01ಎಕರೆ 33ಗುಂಟೆ ಜಮೀನಿನಲ್ಲಿ ಮಾನಸೋಂಟಾ ಕಂಪನಿಯವರ ಡಿ.,ಕೆ,ಸಿ 9133ಕುಸಿ ಎಫ್.ಸಿ 50 ಲಾಟ್ ನಂ: 742ರ ನಂಬರಿನ ಗೋವಿನ ಜೋಳ ಬೀಜವನ್ನು ಬಿತ್ತನೆ ಮಾಡಿದ್ದು ಅದು ಅವು ಅವಧಿ ಮಿರಿದ ಬೀಜವೆಂದು ತಿಳಿಯದಾಗಿದೆ ಮೊದಲು ಮೆಕ್ಕೆ ಜೋಳದ ಬೆಳೆ ಉತ್ತಮವಾಗಿ ಬೆಳೆದು ಅದು ತೆನೆ ಕಟ್ಟದೆ ಚಿಕ್ಕ ಚಿಕ್ಕ ತೆನೆ ತೆಗೆದು ಬೆಳೆ ಸಂಪೂರ್ಣ ಒಣಗಿ ಹಾಳಾಗಿದೆ ಇದರ ಬಗ್ಗೆ ಅ 30 ರಂದು ಸಹಾಯಕ ಕೃಷಿ ಇಲಾಖೆ ನಿರ್ದೇಶಕರಿಗೆ ಮತ್ತು ಮಾನಸೋಂಟಾ ಕಂಪನಿಯವರಿಗೆ ತಿಳಿಸಿದರೂ ಯಾವುದೇ ಕ್ರಮ ವಹಿಸಿರುವುದಿಲ್ಲ.
ಕೃಷಿ ಇಲಾಖೆಯವರು ನಮ್ಮ ಹೊಲಕ್ಕೆ ಬಂದು ಮೆಕ್ಕೆ ಜೋಳದ ಬೆಳೆ ಫಸಲನ್ನು ವೀಕ್ಷಣೆ ಮಾಡಿ ಫಸಲು ಸಂಪೂರ್ಣ ಒಣಗಿ ಹಾಳಾಗಿದ್ದನ್ನು ಕಂಡು ಕಣ್ಣಾರೆ ನೋಡಿರುತ್ತಾರೆ. ಇವರು ಮಾನಸೋಂಟಾ ಕಂಪನಿಗೆ ತಿಳಿಸುತ್ತೇವೆ ಮತ್ತು ತಜ್ಞರ ಕಡೆಯಿಂದ ವರದಿ ಮಾಡಿಸುತ್ತೇವೆ ಅಂತಾ ಹೇಳುತ್ತಾ ಕಾಲ ಹರಣ ಮಾಡುತ್ತಾ ಹಾರಿಕೆ ಉತ್ತರ ನೀಡಿರುತ್ತಾರೆ.ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರಾಣೆಬೆನ್ನೂರಿಗೆ ಹೈದರಾಬಾದ ಮೂಲದ ಖುಲ್ಲಾ ಹಾಗೂ ಕಳಪೆ ಬಿತ್ತನೆ ಬೀಜವು ರಾಜಾರೊಷವಾಗಿ ಮಾರಾಟವಾಗುತ್ತಿದೆ ಎಂದು ಕೃಷಿ ಇಲಾಖೆಗೆ ಜೂನ್ 27 ರಂದು ಮನವಿ ಮಾಡಿದರೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೇ ಕೃಷಿ ಅಧಿಕಾರಿಗಳು ಕಳಪೆ ಬೀಜ ಮಾರಾಟಗಾರರ ಜೊತೆ ಶಾಮಿಲಾಗಿರುತ್ತಾರೆ ಎಂಬ ಶಂಕೆ ಉಂಟಾಗುತ್ತಿದೆ.ಸರ್ಕಾರವು ಸಂಪೂರ್ಣ ತನಿಖೆ ಮಾಡಿ ಭ್ರಷ್ಟ ಅಧಿಕಾರಿಗಳ ಮೇಲೆ ಹಾಗೂ ಮಾನಸೋಂಟಾ ಕಂಪನಿಯ ಮೇಲೆ ಕ್ರಿಮಿನಲ್ ಕೇಸು ಮಾಡಿ ರೈತನಿಗೆ ಸೂಕ್ತಪರಿಹಾರ ನೀಡುವವರೆಗೂ ಉಕ ರೈತ ಸಂಘದಿಂದ ಆಹೋ ರಾತ್ರಿ ಧರಣಿ ಮಾಡಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಪ್ರ.ಕಾ ರಾಜಶೇಖರ್ ದೂದಿಹಳ್ಳಿ, ಜಿಲ್ಲಾಧ್ಯಕ್ಷ ಹನಮಂತಪ್ಪ ಬ ದಿವಿಗಿಹಳ್ಳಿ ಜಿಲ್ಲಾ ಸಂಘಟನಾ ಸಂಚಾಲಕರಾದ ಫಕ್ಕೀರೇಶ ಕಾಳಿ. ತಾಲೂಕಾಧ್ಯಕ್ಷ.ಫಕ್ಕೀರಗೌಡ ಗಾಜಿಗೌಡ್ರ. ಶಿಗ್ಗಾಂವ ತಾಲೂಕಾಧ್ಯಕ್ಷ ರಾಮನಗೌಡ ಹ ತರ್ಲಗಟ್ಟ . ಸವಣೂರ ತಾಲೂಕಾಧ್ಯಕ್ಷ ರೇಣುಕಾಸ್ವಾಮಿ ಚ ಹಿರೇಮಠ .ಹಿರೆಕೆರೂರ ತಾಲೂಕಾಧ್ಯಕ್ಷ ಜಗದೀಶ ಕೂಸಗೂರ. ತಾಲೂಕು ಅಧ್ಯಕ್ಷ ಶ್ರೀಮತಿ ಸರೋಜವ್ವ ಕರ್ಜಗಿ ತಾಲೂಕು ಉಪಾಧ್ಯಕ್ಷ ಶ್ರೀಮತಿ ಗಿರಿಜವ್ವ ಜ ಕಾಶಂಬಿ. ರೈತ ಮುಖಂಡರಾದ ನಾಗಪ್ಪ ತಿ ಉಕ್ಕುಂದ ನಾಗಪ್ಪ ರಾಮಜ್ಜನವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.