ನೀತಿ ಸಂಹಿತೆ ಉಲ್ಲಂಘಿಸಿದ ಸಾರಿಗೆ ಸಂಸ್ಥೆ ನೌಕರ

ಬ್ಯಾಡಗಿ:

       ತಾಲೂಕಿನ ಶಿಡೇನೂರ ಗ್ರಾಮದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದ ವೇದಿಕೆಯಲ್ಲಿ ಸಾರಿಗೆ ಸಂಸ್ಥೆಯ ನೌಕರನೊಬ್ಬ ಹಾಡು ಹೇಳುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಘಟನೆ ನಡೆಯಿತು.

      ಹಾಡು ಹೇಳಿದ ವ್ಯಕ್ತಿ ಚಂದ್ರು ಟಿ.ಲಿಂಗಮ್ಮನವರ ಎನ್ನಲಾಗಿದ್ದು ವಾಯುವ್ಯ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದ ವರ್ಕಶಾಪನಲ್ಲಿ ಟೆಕ್ನಿಶನ್ ಮೆಕ್ಯಾನಿಕ್ ಆಗಿ ಸೇವೆ ಸಲ್ಲಿಸುತ್ತಲಿರುವುದಾಗಿ ತನ್ನ ಫೇಸ್‍ಬುಕ್ (ಚಂದ್ರು ಟಿ.ಎಲ್. ಕೆಎಸ್‍ಆರ್‍ಟಿಸಿ) ಅಕೌಂಟ್‍ನಲ್ಲಿ ಹೇಳಿಕೊಂಡಿದ್ದಾನೆ.

         ಈತ ಹವ್ಯಾಸಿ ಹಾಡುಗಾರನಾಗಿದ್ದು ಇತ್ತೀಚೆಗೆ ರಾಜ್ ಮೆಲೋಡಿಸ್ ಎಂಬ ಆರ್ಕ್ರಸ್ಟ್ರಾ ಗುಂಪಿನ ಸದಸ್ಯನಾಗುವ ಮೂಲಕ ವೃತ್ತಿಪರನಾಗುವ ಮೂಲಕ ಗುತ್ತಿಗೆ ಹಣ ಪಡೆದು ಎಲ್ಲೆಂದರಲ್ಲಿ ರಸಮಂಜರಿ ಕಾರ್ಯಕ್ರಮಗಳನ್ನು ಕೊಡು ತ್ತಿದ್ದ. ಆದರೆ ಇಂದು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಗುತ್ತಿಗೆ ಮಾತನಾಡಿಕೊಂಡು ಗಣ್ಯರ ಬರುವ ಮುಂಚೆ ಹಾಡುಗಳನ್ನು ಹೇಳುವ ಮೂಲಕ ಕಾರ್ಯಕರ್ತರ ಮನರಂಜಿಸುವುದರಲ್ಲಿ ತೊಡಗಿದ್ದ.

        ಡಿ.ಆರ್.ಪಾಟೀಲ ‘ಸಿಂಹ’ ಹಾಡಿಗೆ ಧ್ವನಿಗೂಡಿಸಿದ ಚಂದ್ರು: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಡಿ.ಆರ್.ಪಾಟೀಲ, ಸೇರಿದಂತೆ ಬಸವರಾಜ ಶಿವಣ್ಣನವರ, ಎಸ್.ಆರ್.ಪಾಟೀಲ, ಇವರು ಕಾಂಗ್ರೆಸ್ ಪಕ್ಷದ ಸಿಂಹಗಳಿದ್ದಂತೆ ಎಂಬ ಗ್ರೂಪ್ ಸಾಂಗ್‍ಗೆ ಧ್ವನಿಗೂಡಿಸಿದ ಚಂದ್ರು ಲಿಂಗಮ್ಮನವರ ಕಾಂಗ್ರೆಸ್ ಅಭ್ಯರ್ಥಿಯನ್ನು ಗುಣಗಾನ ಮಾಡುವ ಮೂಲಕ ಒಂದು ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡಿದ ಘಟನೆಯೂ ನಡೆಯಿತು.

      ಚುನಾವಣಾ ಪ್ರಚಾರದ ಈ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ, ಮಾಜಿ ಸಚಿವ ಬಸವರಾಜ ಶಿವಣ್ಣನವರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಪ್ರೇಮಾ ಪಾಟೀಲ, ತಾಲೂಕಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಕರಲಿಂಗಪ್ಪನವರ, ತಾಲೂಕಾ ಪಂಚಾಯತ ಅಧ್ಯಕ್ಷೆ ಸವಿತಾ ಸುತ್ತಕೋಟಿ, ಧುರೀಣರಾದ ಎಸ್.ಆರ್.ಪಾಟೀಲ, ಬೀರಣ್ಣ ಬಣಕಾರ, ಪ್ರಧಾನ ಕಾರ್ಯದರ್ಶಿ ರಮೇಶ ಸುತ್ತಕೋಟಿ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link