ಕ್ಷತ್ರಿಯ ಜನಾಂಗ ಸಮಾವೇಶ

ಹಾವೇರಿ :

     ದೇಶದ ರಕ್ಷಣೆ,ಐತಿಹಾಸಿಕ ಪರಂಪರೆ ಹಾಗೂ ಹಿಂದುತ್ವ ಉಳಿಯಲು ಕ್ಷತ್ರಿಯ ಸಮಾಜದ ಪಾತ್ರ ಬಹುಮುಖ್ಯವಾಗಿದೆ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷರಾದ ಉದಯಸಿಂಗ್ ಹೇಳಿದರು. ನಗರದ ಹಾನಗಲ್ ರೋಡಿನ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಪ್ರಾಚೀನ ಕಾಲದಿಂದಲೂ ಧೈರ್ಯ,ಸ್ಥೈರ್ಯದಿಂದ ದೇಶ ಹಾಗೂ ಎಲ್ಲ ವರ್ಗದ ಜನರ ಸಂರಕ್ಷಣೆ ಮಾಡುವ ಕಾರ್ಯ ಮಾಡುತ್ತಾ ದೇಶಕ್ಕಾಗಿ ತ್ಯಾಗ ಬಲಿದಾನಕ್ಕೆ ಕ್ಷತ್ರಿಯರು ಸದಾಸಿದ್ಧರಿರುತ್ತಾರೆ. ರಕ್ಷಣೆ ಮಾಡಲು ಬೇರೆ ಬೇರೆ ಸ್ಥಳಗಳಿಗೆ ಹೋಗಿ ಅಲ್ಲಿನ ಸಂಸ್ಕøತಿ ಕಲಿತಾ ಕ್ಷತ್ರಿಯ ಸಮಾಜ 40 ಕ್ಕೂ ಹೆಚ್ಚು ಉಪಪಂಗಡಗಳನ್ನು ಹೊಂದಿವೆ. ಇವೆಲ್ಲವುಗಳ ಒಕ್ಕೂಟ ಮಾಡುವ ಉದ್ದೇಶದಿಂದ ನಾವು ಮುಂದೆ ಬಂದಿದ್ದೇವೆ.

        ಎಲ್ಲರ ಸಹಕಾರ ಮುಖ್ಯವಾಗಿದೆ. ನಾವು ರಾಜಮನತನದವರಾಗಿದ್ದು, ಪ್ರಜಾತಂತ್ರ ವ್ಯವಸ್ಥೆಗೆ ಹೊಂದಿಕೊಂಡು ಎಲ್ಲರಿಗೂ ಮಾದರಿಯಾದರಾಗಿ ಬಾಳಿದವರಾಗಿದ್ದೇವೆ. ಹಿರಿಯರ ಮಾರ್ಗದರ್ಶನದಲ್ಲಿ ಸ್ವಾಭಿಮಾನದಿಂದ ಬದಕಲು ಎಲ್ಲ ಉಪಪಂಗಡದವರು ಒಂದಾಗಿ ಒಗ್ಗಟ್ಟು ತೊರಿಸಬೇಕಾಗಿದೆ.

       ಕ್ಷತ್ರಿಯರು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಒಗ್ಗಟ್ಟಿನಿಂದ ಬಾಳಿದರೆ ರಾಜಕೀಯ ನಾಯಕರಿಗೆ ನಾವು ಏನು ಎಂಬುವುದು ಗೊತ್ತಾಗುತ್ತದೆ. ಪ್ರಪಂಚದ ಯಾವುದೇ ಭಾಗದಲ್ಲಿ ಹೋದರೂ ಕ್ಷತ್ರಿಯರು ಗೊತ್ತಾಗುತ್ತಾರೆ. ದೇಶ ಹಾಗೂ ರಾಜ್ಯದಲ್ಲಿ ನಾವೇಲ್ಲರೂ ಒಗ್ಗಾಟ್ಟಾದರೆ ರಾಜಕೀಯ ನಾಯಕರು ನಮ್ಮ ಮನೆಯ ಬಾಗಿಲಿಗೆ ಬರುತ್ತಾರೆ. ನಮಗೆ ಯಾವುದೇ ಆರ್ಥಿಕ ಹಾಗೂ ಸ್ಥಾನಮಾನ ಕೇಳದೇ ಸಂಘಟಿತರಾದರೆ ಸಾಕು ನಮಗೆ ಅವರೇ ನಮ್ಮ ಅನಿವಾರ್ಯತೆ ಅರಿತು ಎಲ್ಲ ಸೌಲಭ್ಯ ಒದಗಿಸುತ್ತಾರೆ ಎಂದು ಒಗ್ಗಟಿನ ಮಂತ್ರ ಹೇಳಿದರು.

       ಸಂಘಟನೆ ಮಾಡಿ ನಮ್ಮ ಬಲ ಸಾಮಥ್ಯ ಮುಂದೆ ತೊರಿಸೋಣ ಎಂದು ಉದಯಸಿಂಗ್ ಹೇಳಿದರು. ವಕೀಲರು ಹಾಗೂ ಯಾದವ್ ಸಮಾಜದ ರಾಜ್ಯಾಧ್ಯಕ್ಷರಾದ ಎಫ್ ಎಂ ಕಟ್ಟೇಗೌಡ್ರ ಮಾತನಾಡಿ ಕ್ಷತ್ರಿಯ ಒಕ್ಕೂಟದಲ್ಲಿ ಇಷ್ಟೆಲ್ಲ ವರ್ಗದವರು ಇದ್ದೇವೆ ಎಂದರೆ ನಾವು ಸಂಘಟನೆ ಮಾಡಿದರೆ ರಾಜ್ಯದ ವಿಧಾನಸೌಧದಲ್ಲಿ ನಮ್ಮ ಸೀಟು ಎಷ್ಟು ಆಗುತ್ತೇವೆ ಎಂದು ರಾಜಕೀಯ ಪಕ್ಷದವರಿಗೆ ನಡುಕ ಉಂಟಾಗುತ್ತದೆ.

       ಕ್ಷತ್ರಿಯರು ಎಲ್ಲರೂ ಸಂಘಟನೆ ಮಾಡೋಣ ಎಂದರು. ಕ್ಷತ್ರಿಯ ಒಕ್ಕೂಟದ ಯುವ ಘಟಕದ ರಾಜ್ಯಾಧ್ಯಕ್ಷ ಕೃಷ್ಣಸಾ ಧಲಬಂಜನ್ ಮಾತನಾಡಿ ಸಮಾಜದಿಂದ ನಾಯಕರಾಗುತ್ತಾರೆ. ಇಂದಿನ ದಿನಮಾನಗಳಲ್ಲಿ ಎಲ್ಲ ರಂಗದಲ್ಲಿ ಪ್ರಗತಿ ಸಧಿಸಬೇಕಾದರೆ ಕ್ಷತ್ರಿಯರು ಒಗ್ಗಟ್ಟು ಆಗಬೇಕಾಗಿದೆ. ಯುವಕರು ಜಾಗೃತರಾಗಿ ಕ್ಷತ್ರಿಯ ಗುಣಗಳನ್ನು ಅಳವಡಿಸಿಕೊಂಡು ಋಣ ತಿರಿಸುವ ಕಾಲ ಬಂದಿದೆ ಎಂದರು.

       ಜಿಲ್ಲಾಧ್ಯಕ್ಷರಾಗಿ ನಾಗರಾಜ ಜೋರಾಪುರಿ,ಪ್ರಧಾನ ಕಾರ್ಯದರ್ಶಿ ರಘುವೀರ್ ಚವ್ಹಾಣ, ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ಜಯರಾಮ್ ಮಾಳಾಪುರ, ಪ್ರಮೋಧ್ ನವಲೆ. ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ರತ್ನಾ ಎಂ ಪುಲಿತ್,ಕಾರ್ಯದರ್ಶಿಯಾಗಿ ಸರೋಜಾ ಮಾಗಡಿ ಇವರುಗ ಕ್ಷತ್ರಿಯ ಮುಖಂಡರಾದ ಲಕ್ಷ್ಮಣ ಗಂಡಗಾಳೇಕರ,ರಾಜು ನವಲೆ,ಸುಭಾಶ ಚವ್ಹಾಣ,ಗಣೇಶಸಿಂಗ್ ಬ್ಯಾಳಿ ಮಾತನಾಡಿದರು.

        ಜಿಲ್ಲಾಧ್ಯಕ್ಷರಾಗಿ ಪದಗ್ರಹಣ ಮಾಡಿದ ನಾಗರಾಜ ಜೋರಾಪುರಿ ಮಾತನಾಡಿ ಉಪಪಂಗಡದವರು ಸೇರಿದರೆ ನಾವು ಯಾವುದೇ ಪಕ್ಷಕ್ಕೆ ಹಾಗೂ ಯಾರಿಗೂ ತಲೆಬಾಗಿಬೇಕಾಗಿಲ್ಲ ನಾವೆಲ್ಲರೂ ಅಣ್ಣ ತಮ್ಮರಂತೆ ಇರಬೇಕು. ಕ್ಷತ್ರಿಯ ಒಕ್ಕೂಟವನ್ನು ಬಲಪಡಿಸಬೇಕಾಗಿದೆ. ಜಿಲ್ಲೆಯ ಎಲ್ಲ ಉಪಪಂಗಡಗಳು ಒಂದಾಗಲು ನಾವು ಹಗಲಿರುಳು ಕೆಲಸ ಮಾಡು ಸಿದ್ದರಿದ್ದೇವೆ ಎಂದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ರತ್ನಾ ಎಂ ಪುಲಿತ್ ಮಾತನಾಡಿ ಕ್ಷತ್ರಿಯ ಮಹಿಳೆಯರು ಎಲ್ಲ ರಂಗದಲ್ಲಿ ಪ್ರವೇಶ ಮಾಡಿ ಧೀರತನದಿಂದ ಮುಂದೆ ಬರಲು ಇದೊಂದು ಅವಕಾಶವಾಗಿದೆ ಎಂದರು.

        ಪ್ರಾಸ್ತಾವಿಕ ಮಾತನಾಡಿದ ತಾರಾಸಿಂಗ್ ಎಲ್ಲ ಸಮಾಜದವರು ಒಗ್ಗಟ್ಟಾಗಿ ತಮ್ಮ ಹಕ್ಕು ಸೌಲಭ್ಯಗಳನ್ನು ಪಡೆಯಲು ಸಂಘಟನೆ ಹಾಗೂ ಹೋರಾಟ ಮಾಡುತ್ತಾರೆ.ಎಲ್ಲ ಉಪಪಂಗಡಗಳು ಸೇರಿ ರಾಜ್ಯದಲ್ಲಿ ಕ್ಷತ್ರಿಯರು 1ಕೋಟಿ 25 ಲಕ್ಷ ಜನ ಸಂಖ್ಯೆ ಹೊಂದಿರುವ ಅಂದಾಜು ಇದೆ. ಸಂಘಟನೆಯಿಂದ ನಾವು ಎಲ್ಲ ರಂಗದಲ್ಲಿ ಮುಂದೆ ಬರಬೇಕಾಗಿದೆ ಎಂದರು.

        ಈ ಮೊದಲು ನಗರದ ಹುಕ್ಕೇರಿಮಠದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ, ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ್ ಮಾನೆಯವರು ಬೈಕ್ ರ್ಯಾಲಿಗೆ ಚಾಲನೆ ನೀಡಿ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ರ್ಯಾಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಕ್ಷತ್ರಿಯ ಮುಖಂಡರಾದ ಪ್ರಕಾಶ ಮುಂಜೋಜಿ,ಅಶೋಕಸಿಂಗ್ ರಜಪೂತ್,ಚಂದ್ರಶೇಖರ ಜಾಧವ್, ಮಹಾವೀರ ಘನಾತೆ,ಕೆಕೆ ರಜಪೂತ್, ಉಮೇಶ್ ವಾಘ,ಶೇಖರಸಿಂಗ್ ಧಾರವಾಡಕರ್,ರಮೇಶ ಮಾಳವಾದ್.ವಸಂತ ಎಂ,ಯಲ್ಲಪ್ಪ ಲದ್ವಾ,ಹರೀಶ ಕಲಾಲ, ಸುರೇಶ ಆರ್,ಪ್ರಕಾಶ ಜೆ,ಕೆಎಸ್ ಬಡಾಡೆ.ಚಂದ್ರಪ್ಪ ಕೆ,ದತ್ತು ಘಾಟಗೆ ಸೇರಿದಂತೆ ಕ್ಷತ್ರಿಯ ಸಮಾಜದ ಭಾಂದವರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link