ಪ್ರತಿಭಟನೆ ನಡೆಸಿ ತಹಶೀಲ್ದಾರ ಗೆ ಮನವಿ

ರಾಣಿಬೆನ್ನೂರ:

                 ತೈಲ ಬೆಲೆ ಏರಿಕಯ ವಿರುದ್ಧ ಕಾಂಗ್ರೆಸ್ ಮತ್ತು ಎಡಪಕ್ಷಗಳು ನೀಡಿದ್ದ ಭಾರತ್ ಬಂದ್ ಕೆರಗೆ ಬೆಂಬಲಿಸಿ ಕಾಂಗ್ರೇಸ್ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಬಿ.ರಾಮಮೂರ್ತಿ ಅವರಿಗೆ ಮನವಿ ಅರ್ಪಿಸಿದರು. ಅವರು ಇಲ್ಲಿನ ಎಪಿಎಂಸಿ ಮಾರುಕಟ್ಟೆಯ ಗಣೇಶ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಸಂಚರಿಸಿ ಅಶೋಕ ಸರ್ಕಲ್ ಮೂಲಕ ಅಂಚೆವೃತ್ತದ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.
                 ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡ ಅವರು, ಕೇಂದ್ರ ಸರಕಾರವು ಅಚ್ಛೆದಿನ್ ಆಯೇಗಾ ಎನ್ನುತ್ತಾ ಜನರನ್ನು ವಂಚಿಸುವುದರ ಮೂಲಕ ಜನಸಾಮಾನ್ಯರ ಮೇಲೆ ಅಗತ್ಯ ವಸ್ತುಗಳ ದರ ಏರಿಸುವುದರ ಮೂಲಕ ಬರೆ ಎಳೆಯುವ ಕೆಲಸವನ್ನು ಮಾಡುವುದರ ಮೂಲಕ ಶ್ರೀಮಂತರ ಪರವಾಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ ಅವರು. ಪೆಟ್ರೋಲ್ ಮತ್ತು ಡಿಜೆಲ್ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಲೇ ಇದೆ. ಆದರೂ ಸಹ ಕೇಂದ್ರ ಸರಕಾರವು ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ನೋವಿನ ಸಂಗತಿ ಎಂದರು.
                 ತಾಪಂ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ಉಪಾಧ್ಯಕ್ಷೆ ಚೈತ್ರಾ ಮಾಗನೂರ, ಜಿಪಂ ಸದಸ್ಯರಾದ ಏಕನಾಥ ಭಾನುವಳ್ಳಿ, ಮಾರುತಿ ರಾಠೋಡ, ಶಿವಾನಂದ ಕನ್ನಪ್ಪಳವರ, ಬಸಣ್ಣ ಮರದ, ನಗರಾಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ, ಕೃಷ್ಣಪ್ಪ ಕಂಬಳಿ, ನಗರಸಭೆ ಸದಸ್ಯ ಶೇಖಪ್ಪ ಹೊಸಗೌಡ್ರ, ಸುರೇಶ ಜಡಮಲಿ, ರವೀಂದ್ರಗೌಡ ಪಾಟೀಲ. ರುದ್ರುಮುನಿ ರಾಮಕ್ಕನವರ, ಜಯಶ್ರೀ ಪೀಸೆ, ಹೆಗ್ಗಪ್ಪಳವರ ಸೇರಿದಂತೆ ಮತ್ತಿತರರು ಇದ್ದರು.

Recent Articles

spot_img

Related Stories

Share via
Copy link