ಮಾವೋ ದಾಳಿಗೆ ಅಮಾಯಕರ ಬಲಿ

ರಾಯಪುರ : 

                  ಛತ್ತೀಸ್‌ಗಢದ ಸುಕ್‌ಮಾ ಜಿಲ್ಲೆಯಲ್ಲಿ ಮಾವೋ ಬಂಡುಕೋರರು ಅಡಗಿಸಿಟ್ಟಿದ್ದ  ಐಇಡಿ ಸ್ಫೋಟಗೊಂಡ ಪರಿಣಾಮ ಅಪರಿಚಿತ ಮಹಿಳೆ  ಸಹಿತ ಇಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ. ನಗರ ಹೊರವಲಯದಲ್ಲಿ ನಡೆದ ಈ ಘಟನೆಯಲ್ಲಿ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಲ್ಲಿನ  ಎಸ್‌ಪಿ ಅಭಿಷೇಕ್‌ ಮೀಣ ತಿಳಿಸಿದ್ದಾರೆ. 

                 ಭದ್ರತಾ ಪಡೆಗಳನ್ನು ಗುರಿಯಾಗಿ ಇರಿಸಿ ಈ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ ಇಂತಹ ಐಇಡಿಗಳನ್ನು  ಮಾವೋ ಬಂಡುಕೋರರು ಬಳಸುವುದು ಸಾಮಾನ್ಯವಾಗಿದೆ ಮತ್ತು  ಮಾವೋವಾದಿ  ಈ ಬಗೆಯ ಕೃತ್ಯಗಳಿಗೆ ಈಗಾಗಲೆ  ಹಲವಾರು ಪೊಲೀಸರು ಮತ್ತು ಜನಸಾಮಾನ್ಯರು  ಬಲಿಯಾಗಿದ್ದಾರೆ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ . 

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link