ಅಂತರ ಕಾಲೇಜು ಫುಟ್‍ಬಾಲ್ ಪಂದ್ಯಾವಳಿ ವಿಜೇತರು

ತುಮಕೂರು

      ತುಮಕೂರು ವಿಶ್ವವಿದ್ಯಾನಿಲಯ ಹಾಗೂ ಉಮಾ ಪ್ರಥಮ ದರ್ಜೆ ಕಾಲೇಜು ಕ್ಯಾತ್ಸಂದ್ರ ಇವರ ಸಂಯುಕ್ತಾಶ್ರಯದಲ್ಲಿ ಪುರುಷರ ಅಂತರ ಕಾಲೇಜುಗಳ ಫುಟ್‍ಬಾಲ್ ಪಂದ್ಯಾವಳಿಯನ್ನು ಸೆ.18 ರಂದು ಕ.ರಾ.ರ.ಸಾ.ನಿ.ದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಗಜೇಂದ್ರಕುಮಾರ್ ಉದ್ಘಾಟಿಸಿದರು.

       ಅತಿಥಿಗಳಾಗಿ ಆಗಮಿಸಿದ್ದ ದೈಹಿಕ ಶಿಕ್ಷಣ ವಿಭಾಗದ ಸಂಯೋಜಕ ಆರ್.ಸುದೀಪ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಭಾಗವಹಿಸಿ, ಕ್ರೀಡಾ ಸಾಧನೆ ಮೆರೆಯುವಂತಾಗಬೇಕು. ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಒಳ್ಳೆಯ ಹೆಸರು ತಂದುಕೊಡುವಂತಾಗಬೇಕು ಎಂದರು.

       ಕ್ರೀಡಾ ಸಂಯೋಜಕ ಟಿ.ಪಾಂಡಿಯನ್ ಮಾತನಾಡಿ, ಫುಟ್‍ಬಾಲ್ ಕ್ರೀಡೆಯನ್ನು ಬ್ರಿಟೀಷ್ ಸೈನಿಕರು ಭಾರತಕ್ಕೆ ಪರಿಚಯಿಸಿದರು. ಇದರಲ್ಲಿ 11 ಮಂದಿಯ 2 ತಂಡಗಳ ನಡುವೆ ಪಂದ್ಯ ನಡೆಯುತ್ತದೆ. ಇಂದು ಸುಮಾರು 200 ದೇಶಗಳಲ್ಲಿ ಈ ಕ್ರೀಡೆ ಅಸ್ತಿತ್ವದಲ್ಲಿದೆ ಎಂದು ವಿವರಿಸಿದರು. ಈ ಸ್ಪರ್ಧೆಯಲ್ಲಿ ಹಲವಾರು ಪ್ರಥಮ ದರ್ಜೆ ಕಾಲೇಜುಗಳು ತಮ್ಮ ತಂಡಗಳೊಂದಿಗೆ ಭಾಗವಹಿಸಿದ್ದು, ಅಂತಿಮ ಹಣಾಹಣಿಯಲ್ಲಿ ಪಾವಗಡ ಪ್ರಥಮ ದರ್ಜೆ ಕಾಲೇಜಿನ ವಿರುದ್ಧ ಶ್ರೀ ಉಮಾ ಪ್ರಗತಿ ಪ್ರಥಮ ದರ್ಜೆ ಕಾಲೇಜು ಕ್ಯಾತ್ಸಂದ್ರ ಇವರು ವಿಜಯವನ್ನು ಸಾಧಿಸಿದರು. ಪ್ರೊ.ಸುರೇಶ್ ಸ್ವಾಗತಿಸಿದರೆ, ಡಾ.ಕೆಂಪರಾಜ್ ನಿರೂಪಿಸಿದರು. ಪ್ರಾಂಶುಪಾಲ ಪ್ರೊ.ಸೈಯಿದ್ ಅಕ್ರಂ ಅಲಿ ಉಪಸ್ಥಿತರಿದ್ದರು.

                      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link