ಮಧುಗಿರಿ : ತೆಪ್ಪೋತ್ಸವದ ಪ್ರಯುಕ್ತ ವೈಭವದ ಮೆರವಣಿಗೆ

ಮಧುಗಿರಿ :

    ಐತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮನ ತೆಪ್ಪೋತ್ಸವು ನೋಡುಗರ ಹಾಗೂ ಭಕ್ತಾದಿಗಳು ಮನಸೂರೆಗೊಂಡು ದೇವಿ ಕೃಪೆಗೆ ಪಾತ್ರರಾತ್ರದರು.ಸುಮಾರು 54 ವರ್ಷಗಳ ನಂತರ ಈ ತೆಪ್ಪೋತ್ಸವನ್ನು ಕೆ ಎನ್ ಆರ್ ಮತ್ತು ಆರ್ ಆರ್ ಅಭಿಮಾನಿಗಳು ಪಣ್ಣೆ ರೈತರಿಂದ ವಿಜೃಂಭಣೆಯಿಂದ ಆಚರಿಸಲಾಗಿದೆ.

    ಬೆಳಗ್ಗೆ 11ಘಂಟೆ ಪಟ್ಟಣದ ಸಿವಿಲ್ ಬಸ್ ನಿಲ್ದಾಣದ ಬಳಿ ಯಿರುವ ಮಾರಮ್ಮನ ದೇವಾಲಯದ ಬಳಿಯಿಂದ ಆರಂಭವಾದ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.ಮೆರವಣಿಗೆಯಲ್ಲಿ ತಮಟೆ , ಚಂಡಿ ವಾಧ್ಯ , ಡೊಳ್ಳು ಕುಣಿತ , ಸಂಗೀತ ವಾದ್ಯ ಡಿಜೆ ಸಂಗೀತವನ್ನು ಆಯೋಜಿಸಲಾಗಿತ್ತು.

   ಮೆರವಣಿಗೆಯ ನಂತರ ಮಾರಮ್ಮನ ದೇವಾಲಯದ ಬಳಿ ಪ್ರಸಾದ ವ್ಯವಸ್ಥೆ ಹಾಗೂ ಸಂಜೆ ತೆಪ್ಪೋತ್ಸವ ವೀಕ್ಷಣೆಗಾಗಿ ಬೃಹತ್ ಎಲ್ ಇ ಡಿ ಯನ್ನು ಸಹ ಆಯೋಜಿಸಲಾಗಿದೆ.ಈ ಕಾರ್ಯಕ್ರಮವು 54 ವರ್ಷಗಳ ನಂತರ ನಡೆಯುತ್ತಿದ್ದು ಪಟ್ಟಣದ ಜನರಲ್ಲಿ ಮಾರಮ್ಮನ ಜಾತ್ರೆಯು ಮತ್ತೆ ಮರುಕಳುಹಿಸಿದೆ ಎಂಬ ಭಾವನೆ ಮೂಡಿದೆ.ಬಿಗಿ ಪೊಲೀಸ್ ಬಂದೊಬಸ್ತ್ ನಲ್ಲಿ ಮೆರವಣಿಗೆಯು ನಡೆದಿದ್ದು ಸಾವಿರಾರು ಜನರು ಕಾರ್ಯಕ್ರಮವನ್ನು ನೋಡಿ ಬೆರಗಾಗಿದ್ದಾರೆ.

   ಮೆರವಣಿಗೆಯಲ್ಲಿ ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ , ಮಾಜಿ ಜಿ.ಪಂ ಅಧ್ಯಕ್ಷೆ ಶಾಂತಲರಾಜಣ್ಣ , ಕಲ್ಲಹಳ್ಳಿ ದೇವರಾಜು , ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ , ತಾಪಂ ಇಓ ಲಕ್ಷಣ್ , ತಹಸೀಲ್ದಾರ್ ಶಿರೀನ್ ತಾಜ್ , ಮುಖಂಡರಾದ ಜಿ.ಎಸ್ ಜಗದೀಶ್ , ಗೋಪಾಲಯ್ಯ , ಶಂಕರನಾರಾಯಣ , ರಘು ಹಾಗೂ ಸಾವಿರಾರು ಭಕ್ತರು ಹಾಜರಿದ್ದರು.

Recent Articles

spot_img

Related Stories

Share via
Copy link