ಮೈಸೂರು:
ಮೈಸೂರು ದಸರಾ ಮಹೋತ್ಸವ ಅಕ್ಟೋಬರ್ 10 ರಿಂದ ಆರಂಭಗೊಳ್ಳಲಿದ್ದು, ವಿವಿಧ ಪ್ರಮುಖ ಆಕರ್ಷಣೀಯ ಕಾರ್ಯಕ್ರಮಗಳಿಗೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಅಕ್ಟೋಬರ್ 14ರಂದು ಓಪನ್ ಸ್ಟ್ರೀಟ್ ಫೆಸ್ಟಿವಲ್ ಆಯೋಜನೆ ಮಾಡಲಾಗಿದೆ. ಕೃಷ್ಣರಾಜ್ ಬೊಲಿವಾರ್ಡ್ ರಸ್ತೆಯಲ್ಲಿ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಡೆಯಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎಚ್.ಜನಾರ್ಧನ್ ತಿಳಿಸಿದ್ದಾರೆ.
ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಜತೆ ಆಗಮಿಸಿರುವ ಮಾವುತರಿಗೆ ಇಂದು ಅರಮನೆ ಆಡಳಿತ ಮಂಡಳಿ ಭರ್ಜರಿ ಸಾಂಪ್ರದಾಯಿಕ ಔತಣಕೂಟವನ್ನು ಆಯೋಜಿಸಿತ್ತು. ಮೈಸೂರು ದಸರಾ ಮಹೋತ್ಸವದಲ್ಲಿ ಈ ಭಾರಿ ಆಟೋ ಕ್ರಾಸ್ ರೇಸ್ ಮೆರಗು ನೀಡಲಿದ್ದು, ಅಕ್ಟೊಬರ್ 7 ರಂದು ಟ್ರ್ಯಾಕ್ ರೇಸ್ ನಡೆಯಲಿದೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೇಸ್ಗಾಗಿ ಸಿದ್ದತೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/dasara-1.gif)