ಜೀವಂತ ದೇವರ ದರ್ಶನ

ಕಾಠ್ಮಂಡು: 
      ದೇವರು ಎಂದರೆ ನಂಬುವ ಜನ ಹೆಚ್ಚಾಗಿ ಕಾಣಸಿಗುವುದು ಏಶಿಯಾ ಖಂಡದಲ್ಲಿಯೇ ಅದರಂತೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪಟ್ಟಾಭಿಷೇಕವಾದ ನೇಪಾಳದ ಜೀವಂತ ದೇವತೆ ತ್ರಿಶ್ನಾ ಶಕ್ಯ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ .ಮಳೆ ಹಾಗೂ ಬೆಳೆಯ ದೇವತೆ ಇಂದ್ರನನ್ನು ಪೂಜಿಸುವ ನೇಪಾಳದ ಸಾಂಪ್ರದಾಯಿಕ ಉತ್ಸವ ಇಂದ್ರಜಾತ್ರ ಸಂದರ್ಭದಲ್ಲಿ ನಿನ್ನೆ ಸಾರ್ವಜನಿಕವಾಗಿ ಎಲ್ಲರೆದುರು ಆಕೆಯನ್ನು ಹೊರತರಲಾಯಿತು. ಯುನೆಸ್ಕೊದ ವಿಶ್ವ ಪಾರಂಪರಿಕ ಕೇಂದ್ರವಾದ ಬಸಂತಪುರ್ ದರ್ಬಾರ್ ಸ್ಕ್ವೇರ್ ಪ್ರದೇಶದಲ್ಲಿರುವ ಕುಮಾರಿ ಘರ್ ಶಕ್ಯಳ ನಿವಾಸವಾಗಿದೆ.
     ಆಕೆಯ ನಿವಾಸದ ಹತ್ತಿರ ನಿನ್ನೆ ಮುಂಜಾನೆಯಿಂದಲೇ ಸಾವಿರಾರು ಮಂದಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ತ್ರಿಶ್ನಾ ಶಕ್ಯಳನ್ನು ರಥದಲ್ಲಿ ಕೂರಿಸಿ ಅರಮನೆಯಿಂದ ಹೊರತಂದು ಪುರಾತನ ನಗರದಾದ್ಯಂತ ರಥದಲ್ಲಿ ಸುತ್ತಿಸಲಾಯಿತು. ಜೀವಂತ ದೇವತೆ ಜೊತೆ ಗಣೇಶನ ವಿಗ್ರಹ ಮತ್ತು ಭೈರವನ ಮೂರ್ತಿಗಳನ್ನು ಕೂಡ ನಗರದಾದ್ಯಂತ ರಥದಲ್ಲಿ ಸುತ್ತಿಸಲಾಯಿತು. ನೇಪಾಳದ ಸಾಂಪ್ರದಾಯಿಕ ಪುರಾತನ ಅರಮನೆ ಆವರಣದ ಎದುರು ಈ ಸಂದರ್ಭದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.ಡುಲಿಕೆಲ್ ಮತ್ತು ದೊಲಖ ಜೊತೆ ಕಾಠ್ಮಂಡು ಕಣಿವೆಯಲ್ಲಿ 8 ದಿನಗಳ ಇಂದ್ರಜಾತ್ರ ಉತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. 
                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link