ಗುತ್ತಿಗೆದಾರರು ನಿರ್ಲಕ್ಷ ಕೆಟ್ಟು ಹೋದ ನೀರಿನ ಘಟಕ

ಎಂ ಎನ್ ಕೋಟೆ :

     ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಹೊಸಕೆರೆ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಸುಮಾರು 15 ದಿನಗಳು ಕಳೆದರೂ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ವಾರಕ್ಕೆ ಎರಡು ಮೂರು ಸರಿ ಕೆಟ್ಟು ಹೋಗುತ್ತದೆ.

      ಸಂಬಂಧ ಪಟ್ಟ ಗುತ್ತಿಗೆದಾರರು ನಿರ್ಲಕ್ಷ ಮಾಡುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಇದ್ದರೂ ಸಹ ಅಧಿಕಾರಿಗಳು ನಿರ್ಲಕ್ಷ ಮಾಡುತ್ತಿದ್ದಾರೆ. 15ದಿನಗಳಿಂದ ಕುಡಿಯುವ ನೀರಿನ ಘಟಕವನ್ನು ಮುಚ್ಚಿದ್ದಾರೆ. ಸಾರ್ವಜನಿಕರು ದಿನ ನಿತ್ಯ ಬಂದು ನೋಡಿಕೊಂಡು ಅಧಿಕಾರಿಗಳನ್ನು ಹಿಡಿ ಶಾಪ ಹಾಕಿಕೊಂಡು ಹೋಗುತ್ತಾರೆ. ಶುದ್ದ ನೀರಿನ ಘಟಕದ ನಿರ್ವಾಹಕರನ್ನು ಕೇಳಿದರೆ ನಮ್ಮ ಸಂಬಂಧ ಪಟ್ಟವರಿಗೆ ತಿಳಿಸಿದ್ದೇನೆ ಇದು ವರೆಗೂ ಬಂದಿಲ್ಲ ಎಂದು ಸಾಬೂಬು ಹೇಳುತ್ತಾರೆ.

      ಸಂಬಂಧಪಟ್ಟ ಗ್ರಾಮ ಪಂಚಾಯಿತಿಯವರು ಕೂಡ ಇದರ ಬಗ್ಗೆ ಕ್ರಮಕೈಗೊಂಡಿಲ್ಲ ಇದೆ ರೀತಿ ಮುಂದುವರೆದರೆ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಹೊಸಕೆರೆ ಗ್ರಾಮಸ್ಥರು ಎಚ್ಚರಿಸಿದ್ದಾರೆ.

       ಪಿಡಿಓ ಗಂಗಣ್ಣ ಮಾತನಾಡಿ ಶುದ್ದ ನೀರಿನ ಘಟಕದ ಬಗ್ಗೆ ಗಮನಕ್ಕೆ ಬಂದಿದೆ. ಒಂದು ವಾರದಿಂದ ಸ್ಥಗಿತಗೊಂಡಿದೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೂತೆ ಚರ್ಚಿಸಿದ್ದೇನೆ ಅದಷ್ವು ಬೇಗನೆ ಶುದ್ದ ನೀರಿನ ಘಟಕವನ್ನು ಸರಿಪಡಿಸುವಂತೆ ಮನವಿ ಮಾಡಲಾಗಿದೆ.

              ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link