ಬೈಕ್ ಮರಕ್ಕೆ ಕಟ್ಟಿ ವ್ಹೀಲಿಂಗ್ ಮಾಡುವವರಿಗೆ ಎಚ್ಚರಿಕೆಯನ್ನು ನೀಡಿರುವ ಸಾರ್ವಜನಿಕರು.

ಬೆಂಗಳೂರು

   ವ್ಹೀಲಿಂಗ್ ಮಾಡುತ್ತಾ ಪಾದಚಾರಿಗೆ ಡಿಕ್ಕಿ ಹೊಡೆದು, ಸ್ಥಳದಲ್ಲಿಯೇ ಯುವಕನೊಬ್ಬ ಬಿಟ್ಟು ಪರಾರಿಯಾದ ಬೈಕ್‍ನ್ನು ಹೆಚ್‍ಬಿಆರ್ ಲೇಔಟ್‍ನ ಸ್ಥಳೀಯರು ಮರಕ್ಕೆ ಕಟ್ಟಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಕಳೆದ ಸೆ.25 ರಂದು ಹೆಚ್‍ಬಿಆರ್ ಲೇಔಟ್ ಬಳಿ ರಾತ್ರಿ 10.30ಕ್ಕೆ ವ್ಹೀಲಿಂಗ್ ಮಾಡಿಕೊಂಡು ಬರುತ್ತಿದ್ದ ಯುವಕನೊಬ್ಬ ಪಾದಚಾರಿಗೆ ಡಿಕ್ಕಿ ಹೊಡೆದು ಆತನಿಗೆ ಏನಾಗಿದೆ ಎಂದು ನೋಡದೆ ಸ್ಥಳದಲ್ಲೇ ಬೈಕ್ ಬಿಟ್ಟು ಪರಾರಿಯಾಗಿದ್ದ.

  ಗಾಯಗೊಂಡ ಪಾದಚಾರಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದರಾದರೂ ಸರಿಯಾದ ಸಮಯಕ್ಕೆ ಪೊಲೀಸರು ಆಗಮಿಸದ ಕಾರಣ ಅಸಮಾಧಾನಗೊಂಡ ಸಾರ್ವಜನಿಕರು ಬೈಕ್ ಅನ್ನು ಅದೇ ಮಾರ್ಗದ ಮರವೊಂದಕ್ಕೆ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಬೈಕ್ ಮರಕ್ಕೆ ಕಟ್ಟಿ ವ್ಹೀಲಿಂಗ್ ಮಾಡುವವರಿಗೆ ಎಚ್ಚರಿಕೆಯನ್ನು ನೀಡಿರುವ ಸಾರ್ವಜನಿಕರು. ವ್ಹೀಲಿಂಗ್ ಮಾಡಿದವರಿಗೂ ಹೀಗೆ ಮಾಡುತ್ತೇವೆ ಎಂದು ಫಲಕ ಬರೆದು ಬೈಕಿಗೆ ನೇತು ಹಾಕಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link