ಹಾವೇರಿ:
ನಮ್ಮ ರಾಜ್ಯದಲ್ಲಿ ಮಾನವ ಹಕ್ಕುಗಳು ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆ ತಡೆಯುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ವೇದಿಕೆಯ ರಾಜ್ಯ ಅಧ್ಯಕ್ಷ ಹೆಚ್.ಎಮ್.ಖಾದ್ರಿ ಅವರು ಹೇಳಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ವೇದಿಕೆ ವತಿಯಿಂದ ನಗರದ ಲ್ಯೂಡಾಲ್ಪ ಪ್ರೌಢ ಶಾಲೆ ಹಮ್ಮಿಕೊಂಡಿದ್ದ ಮಕ್ಕಳ ಹಾಗೂ ಮಾನವ ಹಕ್ಕುಗಳ ಜಾಗೃತಿ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೀತ ಪದ್ದತಿ, ಬಾಲ ಕಾರ್ಮಿಕತೆಯಂತಹ ಅನಿಷ್ಠ ಪದ್ಧತಿಗಳು ಸಮಾಜದಲ್ಲಿ ಇನ್ನೂ ಜೀವಂತವಾಗಿವೆ. ಅವುಗಳ ನಿರ್ಮೂಲನೆಗಾಗಿ ರಾಜ್ಯದ್ಯಾಂತ ಹೆಚ್ಚು ಜಾಗೃತಿ ಮೂಡಿಸುವುದು ನಮ್ಮ ಮಾನವ ಹಕ್ಕುಗಳ ಧ್ಯೇಯೋದ್ದೇಶವಾಗಿದೆ ಎಂದು ಹೇಳಿದರು.
ಸಾಹಿತಿ ಸತೀಶ್ ಕುಲಕರ್ಣಿ ಅವರು ಮಾತನಾಡಿ, ಮಕ್ಕಳು ತಮ್ಮ ರಕ್ಷಣೆಯನ್ನು ತಾವೆ ಮಾಡಿಕೊಳ್ಳಬೇಕು. ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಮಕ್ಕಳ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎಸ್.ಹೆಚ್.ಮಜೀದ್ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ಎಂ.ಆರ್. ಜಾಲಗಾರ ಅವರು “ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೋ) ಕಾಯ್ದೆ-2012”ರ ಕುರಿತು, ಚಿತ್ರದುರ್ಗ ಜಿಲ್ಲೆಯ ಮಾನವ ಹಕ್ಕುಗಳ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸನತ್‍ಕುಮಾರ ನೀರಿನ ಮಿತ ಬಳಕೆ ಹಾಗೂ ಪೌಷ್ಠಿಕಾಂಶ ಆಹಾರ ಸೇವನೆಯ ಕುರಿತು ಮಾತನಾಡಿದರು.
ಲ್ಯೂಡಾಲ್ಪ್ ಪ್ರೌಢಶಾಲೆಯ ಸಹಕಾರ್ಯದರ್ಶಿ ಶಾಮತರಾಜ ಕತ್ತೆಬೆನ್ನೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್.ಎನ್.ಕುಂದೂರ , ಪುಟ್ಟಪ್ಪ ಹರವಿ, ಹಸೀನಾ ಹೆಡಿಯಾಲ, ಶ್ರೀಮತಿ ಹೊನ್ನಮ್ಮ ಚಂದಾಪುರ, ಶ್ರೀಮತಿ ಮುಕ್ತುಬಾಯಿ ಕಿಳ್ಳಿಕ್ಯಾತರ, ರಾಮಣ್ಣ ಬಾದಗಿ ಮತ್ತು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ