ರಟ್ಟೀಹಳ್ಳಿ:
ಜಗತ್ತು ಇಂದು ಏಷ್ಟೇ ಮುಂದುವರೆದಿದ್ದರೂ ಸುಶಿಕ್ಷಿತರು ಕೂಡಾ ಮೂಡನಂಬಿಕೆ ಮತ್ತು ಕಂದಾಚಾರಗಳಿಗೆ
ಒಳಗಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ.
ಆದರೆ ವಿದ್ಯಾರ್ಥಿಗಳಾದ ನೀವುಗಳು ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಬೇಕೆಂದು ಹಿರೇಕೆರೂರಿನ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಹನುಮಂತಪ್ಪ ತಿಳಿಸಿದರು.
ಅವರು ತಾಲೂಕಿನ ಕಡೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಪಶುಸಂಗೋಪನೆ,ಪಶುವೈದ್ಯ ಮತ್ತು ಸೇವಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಾವೇರಿ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ಪ್ರಾಣಿ ಜನ್ಯ, ಆಹಾರ,ಮೂಢನಂಬಿಕೆಗಳ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮುಂದುವರೆದು ಮಾತನಾಡುತ್ತಾ ಗ್ರಾಮೀಣ ಭಾಗದಲ್ಲಿ ಕುರಿ,ಹಸು,ಎಮ್ಮೆ ಮುಂತಾದ ಪ್ರಾಣಿಗಳನ್ನು ಸಾಕುವವರು ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ,ರೆಬಿಸ್,ಅಂಥ್ರಾಕ್ಸ್,ಬ್ರಸೆಲಾದಂತಹ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಎಂದರು.ಮನೆಗಳಲ್ಲಿ ಇಲಿ,ಹೆಗ್ಗಣ,ನಾಯಿ,ಹಲ್ಲಿಗಳ ಮಲ ಮೂತ್ರದ ವಿಸರ್ಜನೆಗಳಿಂದ ಹರಡುವ ರೋಗಗಳ ಕುರಿತು ವಿದ್ಯಾರ್ಥಿಗಳಿಗೆ ನೇರ ಸಂವಾದದ ಮೂಲಕ ಮಾಹಿತಿ ನೀಡಿದರು.
ಮನುಷ್ಯರು ಮತ್ತು ಪ್ರಾಣಿಗಳಿಗೆ ಖಾಯಿಲೆ ಬಂದಾಗ ಯಂತ್ರ,ಮಂತ್ರ ಮತ್ತು ಗುಡಿಗುಂಡಾರಗಳಿಗೆ ಹೋಗದೆ ವೈದ್ಯರ ಬಳಿ ಕರೆದುಕೊಂಡು ಹೋಗಬೇಕೆಂದರು.ಈ ಸಂದರ್ಭದಲ್ಲಿ ಡಾ.ಬಿ.ಎಲ್.ಪವನಕುಮಾರ,ಶಾಲೆಯ ಮುಖ್ಯ ಶಿಕ್ಷಕ ಎಂ.ಎಸ್.ದಿವಿಗೀಹಳ್ಳಿ , ಶಿಕ್ಷಕರಾದ ಎಂ.ಎಂ.ಕೆರೂರ,ಸಿ.ಹೆಚ್.ಬತ್ತೇರ,ವಿರೇಶ.ಆಲದಕಟ್ಟಿ,ಷಣ್ಮುಖಜಿ.ಹೆಚ್ , ಬಿ.ಡಿ.ಪಾಟೀಲ , ಎಸ್.ಎಂ.ಪಟ್ಟಣಶೆಟ್ಟಿ , ಎಸ್.ಕೆ.ಗುಳೇದಗುಡ್ಡ,ಗೀತಾ.ಶೇತಸನದಿ,ಎಂ.ಸಿ ತುಮ್ಮಿನಕಟ್ಟಿ ಶ್ರೀಕಾಂತ.ಮಾಳಗಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ