ಹರಪನಹಳ್ಳಿ:
ಅಂಗವಿಕಲತೆ ಕೇವಲ ಅನುಕಂಪವಾಗಬಾರದು ಅವರಲ್ಲಿ ಆತ್ಮಸ್ಥೈರ್ಯ ಮತ್ತು ಆತ್ಮ ವಿಶ್ವಾಸವನ್ನು ತುಂಬುವ ಕೆಲಸವನ್ನು ಶಿಕ್ಷಕರು, ಪೋಷಕರ ಮಾಡಬೇಕಾಗಿದೆ. ಇದು ಅವರ ಜವಾಬ್ದಾರಿ ಎಂಬುದನ್ನು ಅರಿಯಬೇಕಿದೆ ಎಂದು ಜಿಪಂ ಅಧ್ಯಕ್ಷೆ ಕೆ.ಆರ್.ಜಯಶೀಲಾ ಅಭಿಪ್ರಾಯಪ್ಟರು.
ಪಟ್ಟಣದ ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಅಭಿಯಾನ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಉಚಿತ ವೈದ್ಯಕೀಯ ಮೌಲ್ಯಂಕಿತ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಪಂ ಸದಸ್ಯ ಡಾ.ಮಂಜುನಾಥ ಉತ್ತಂಗಿ ಮಾತನಾಡಿ ಸರಕಾರದಿಂದ ಮಾಡುವ ಕಾರ್ಯಕ್ರಮಗಳು ಕೇವಲ ನೆಪ ಮಾತ್ರಕ್ಕೆ ಸೀಮಿತವಾಗದೆ ಸಂಬಂಧಿಸಿದ ಇಲಾಖೆಗಳಿಗೆ, ರಾಜಕಾರಣಿಗಳಿಗೆ ತಿಳಿಸುವ ಮೂಲಕ ಆ ಯೋಜನೆಯ ಫಲಾನುಭವಿಗಳಿಗೆ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಇಂತಹ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದರು.
ಹಲುವಾಗಲು ಜಿಪಂ ಸದಸ್ಯೆ ಸುವರ್ಣ ಅರುಂಡಿ ಮಾತನಾಡಿ ವಿಕಲಚೇತನರು ಸಮಾಜದಲ್ಲಿ ತಮ್ಮ ಬದುಕಿನುದ್ದಕ್ಕು ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸ ತುಂಬುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು ಎಂದ ಅವರು ವಿಕಲಚೇತನರಲ್ಲಿ ಆಸಕ್ತಿಯ ಕಲಿಕೆಯ ಗುಣವಿದ್ದು ಅವರು ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದರು.
ತಾಪಂ ಅಧ್ಯಕ್ಷೆ ಅನ್ನಪೂರ್ಣ ಮಾತನಾಡಿ ನಿಮ್ಮ ಮುಂದೆ ನಾವೇ ವಿಕಲಚೇತನರಾಗಿದ್ದೇವೆ ಯಾಕೆಂದರೆ ನಾವು ಕೂಡ ಸಂಬಂಧಿಕರ ನಡುವೆ ಬೆರೆತಾಗ ಈ ಭಾವನೆ ಬರುತ್ತದೆ. ಆದರೆ ಇಂದು ಎಲ್ಲವು ಇದ್ದು ದಿಕ್ಕಿಲ್ಲದವರಿಗೆ ದೇವರೆ ಗತಿ ಎನ್ನುವ ಹಾಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಪೋಷಕರು ಸಂಬಂಧಿಕರಲ್ಲಿ ವಿವಾಹ ಮಾಡುವುದನ್ನು ಬಿಡಬೇಕು ಎಂದು ಹೇಳಿದರು.
ಜಿಪಂ ಉಪಾದ್ಯಕ್ಷೆ ರಶ್ಮಿ ರಾಜಪ್ಪ, ಬಿಇಓ ಎಲ್.ರವಿ, ಸತ್ಥೂರು ಶಾಲೆಯ ಮುಖ್ಯ ಶಿಕ್ಷಕ ಶೇಖರಪ್ಪ, ಮಾತನಾಡಿದರು.ಇಸಿಓ ಡಿ.ಎಸ್.ಲಿಂಗೇಶ್, ತಾಪಂ ಸದಸ್ಯ ವೈ.ಬಸಪ್ಪ, ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಅಂಜಿನಪ್ಪ, ಒಕ್ಕೂಟದ ಅಧ್ಯಕ್ಷ ಎಂ.ಆಂಜನೇಯ, ಕಾರ್ಯದರ್ಶಿ ರಾಜಶೇಖರ, ಎಂ.ಆರ್.ಡಬ್ಲೂ ಧನರಾಜ್, ಶಿಕ್ಷಕರಾದ ಮಂಜುನಾಥ ಪೂಜಾರ, ರವಿಕುಮಾರ, ಬಸವರಾಜ, ವಿ.ಆರ್.ಡಬ್ಲೂ, ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
