ಹಗರಿಬೊಮ್ಮನಹಳ್ಳಿ:
ಭಾರತೀಯ ಜನತಾಪಕ್ಷದ ಓಬಿಸಿ ಎ ಘಟಕದ ತಾಲೂಕು ಅಧ್ಯಕ್ಷರಾಗಿ ಕಲ್ಲಳ್ಳಿ ನಿಂಗಪ್ಪ ಇವರು ಆಯ್ಕೆಯಾಗಿದ್ದಾರೆ ಎಂದು ಕ್ಷೇತ್ರದ ಅಧ್ಯಕ್ಷ ನೆರೆಗಲ್ ಕೊಟ್ರೇಶ್ ತಿಳಿಸಿದರು.
ಅವರು ಪಟ್ಟಣದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ ಬಳಿಕ ನಿಂಗಪ್ಪರ ಆಯ್ಕೆಬಗ್ಗೆ ತಿಳಿಸಿದರು. ಇತ್ತೀಚಿಗೆ ಹೊಸಪೇಟೆಯಲ್ಲಿ ನಡೆದ ಬಿಜೆಪಿ ಜಿಲ್ಲಾ ವಿಶೇಷಕಾರ್ಯಕಾರಿಣಿ ಸಭೆಯಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಜಿಲ್ಲಾಧ್ಯಕ್ಷರು ಮತ್ತು ಶ್ರೀರಾಮುಲುರವರು ಕಲ್ಲಳ್ಳಿ ನಿಂಗಪ್ಪರನ್ನು ಆಯ್ಕೆಮಾಡುವ ಮೂಲಕ ಆದೇಶ ನೀಡಿದ್ದಾರೆ ಎಂದರು.
ನಂತರ ಈಗ ಗಾಂಧಿ ಜಯಂತಿಯಂದು ಕಲ್ಲಳ್ಳಿ ನಿಂಗಪ್ಪನಿಗೆ ಪಕ್ಷದ ಜವಬ್ದಾರಿ ಸ್ಥಾನದ ಬಗ್ಗೆ ವಿವರಿಸುತ್ತ, ಮುಂದಿನ ಸಂಘಟನೆ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದರು.
ಓಬಿಸಿ ಎ ಘಟಕದ ಅಧ್ಯಕ್ಷರಾದ ಕಲ್ಲಳ್ಳಿ ನಿಂಗಪ್ಪ ಪ್ರತಿಕ್ರಿಯಿಸಿ, ಬಿಜೆಪಿಯು ನನ್ನ ಮೇಲೆ ಭರಸವೆಯನ್ನಿಟ್ಟು ಸಂಘಟನೆ ಮಾಡಲು ಮತ್ತು ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸೂಚಿಸಿದ ಹಿನ್ನೆಲೆಯಲ್ಲಿ, ಪಕ್ಷದ ಬಲವರ್ಧನೆಗಾಗಿ, ಶಾಂತಿ ಶಿಸ್ತಿನಿಂದ, ಪಕ್ಷದ ಎಲ್ಲಾ ಪದಾಧಿಕಾರಿಗಳೊಂದಿಗೆ, ಹಿರಿಯರ ಸಲಹೆಯನ್ನು ಸ್ವೀಕರಿಸಿ ಪಕ್ಷ ಸಂಘಟಿಸುವೆ ಎಂದರು.ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಜೆ.ಬಿ.ಶರಣಪ್ಪ, ಡಾ.ಅಜ್ಜಯ್ಯ ಹಾಗೂ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
