ಹಗರಿಬೊಮ್ಮನಹಳ್ಳಿ:
ಗಾಂಧೀಜಿಯವರ ಜೀವನದ ಆದರ್ಶತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಹೆಗ್ಡಾಳ್ ರಾಮಣ್ಣ ಅಭಿಪ್ರಾಯ ಪಟ್ಟರು.
ಅವರು ಪಟ್ಟಣದ ಶಾಸಕರ ಜನಸಂಪರ್ಕ ಅಶೋಕ ಫಾರ್ಮ್ಹೌಸ್ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಗಾಂಧೀಜಿಯವರ 150ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡದಿರು. ಗಾಂಧೀಜಿಯವರಿಗಿದ್ದ ದೇಶ ಅಭಿಮಾನ, ಪ್ರೀತಿಯೇ ಬ್ರೀಟಿಷ ಕಪಿಮುಷ್ಠಿಯಿಂದ ದೇಶವನ್ನು ಬಿಡಿಸಿಕೊಳದ್ಳುವಲ್ಲಿ ಅವರು ಅನುಸರಿಸಿದ ಶಾಂತಿಮಂತ್ರದ ಮೂಲಕ ನಡೆಸಿದ ಹೋರಾಟದ ಅಂಗವಾಗಿ ದೇಶ ನಮಗೆ ಸ್ವಾತಂತ್ರ ವಾಗಲು ಸಾಧ್ಯವಾಯಿತು ಎಂದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸೋಮಲಿಂಗಪ್ಪ ಮಾತನಾಡಿ, ದೇಶ ಸ್ವಾತಂತ್ರ್ಯ ಪಡೆಯುವಲ್ಲಿ ಮಹಾತ್ಮ ಗಾಂಧಿಜೀ ಯವರ ಹೋರಾಟ ಮಹತ್ತರವಾದುದ್ದು, ಸ್ವಾತಂತ್ರವನ್ನು ನಾವು ಅನುಭವಿಸುತ್ತಿದ್ದೇವೆ ಇಂದು ಅವರ 150ನೇ ವರ್ಷದ ಜಯಂತಿ ದೇಶದಲ್ಲಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಅವರು ಕಂಡ ಕನಸು ನನಸಾದರೆ ಸಾರ್ಥಕವಾಗುತ್ತೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕೊಟ್ಟೂರು ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ, ಜಿ.ಪಂ.ಮಾಜಿ ಸದಸ್ಯ ಭೀಮಜ್ಜ, ಪುರಸಭೆ ಸದಸ್ಯರಾದ ವಿ.ಹನುಂತಪ್ಪ, ನಾಮನಿರ್ದೇಶಿತರಾದ ಹುಡೇದ್ಗುರುಬಸವರಾಜ್, ಡಿಶ್ ಮಂಜುನಾಥ, ಸೋಗಿ ಕೊಟ್ರೇಶ, ಶಾಸಕರ ಆಪ್ತ ಸಹಾಯಕ ಎನ್.ಎಂ.ಸಿದ್ದೇಶ್ವರಯ್ಯ, ಕೆ.ಜಿ.ಎನ್. ದಾದಾಪೀರ್, ಜೀವ ಸೋಮನಾಥ, ಮಂಜುನಾಥ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ