ನವದೆಹಲಿ: 

ಸಾಲದ ದೊರೆ ಮಲ್ಯರಿಂದ ಪಾಠ ಕಲಿತ ಬ್ಯಾಂಕ್ ಗಳು ದೇಶದ ಎಲ್ಲಾ ಉದ್ಯಮಿಗಳ ಸಾಲದ ವಿವರಗಳ ಪರಿಶೀಲನೆಗೆ ಮುಂದಾಗಿವೆ ಅಂತಹುದೇ ಇನ್ನೊಂದು ಪ್ರಕರಣವಾದ ವಿಡಿಯೋಕಾನ್ ಸಂಸ್ಥೆ ಸಾಲ ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿರುವ ಐಸಿಐಸಿಐ ಬ್ಯಾಂಕ್ ಸಿಇಒ ಚಂದ ಕೊಚ್ಚರ್ ರಾಜಿನಾಮೆ ನೀಡಿದ್ದು ಐಸಿಐಸಿಐನ ನೂತನ ಸಿಇಒ ಆಗಿ ಸಂದೀಪ್ ಬಕ್ಷಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಐಸಿಐಸಿಐ ತಿಳಿಸಿದೆ.
ಈ ಹಿಂದೆ ಐಸಿಐಸಿಐ ನ ಪ್ರುಡೆನ್ಷಿಯಲ್ ಲೈಫ್ ಇನ್ಶುರೆನ್ಸ್ ನ ಎಂಡಿ ಮತ್ತು ಸಿಇಒ ಆಗಿ ಕೆಲಸ ಮಾಡುತ್ತಿದ್ದ ಸಂದೀಪ್ ಬಕ್ಷಿಯವರನ್ನು ಇದೀಗ ಅವರನ್ನು ಸಿಇಒ ಆಗಿ ನೇಮಿಸಲಾಗಿದೆ.
ಐಸಿಐಸಿಐ ಬ್ಯಾಂಕ್ ವಿಡಿಯೋಕಾನ್ ಸಮೂಹ ಕಂಪನಿಗೆ 2012ರಲ್ಲಿ 3,250 ಕೋಟಿ ರುಪಾಯಿ ಸಾಲ ನೀಡಿತ್ತು. ಆದರೆ ಸಾಲದ ಶೇ. 80ರಷ್ಟು ಹಣವೂ ಮರು ಪಾವತಿಯಾಗಿಲ್ಲ. ಈ ಸಂಬಂಧ ಚಂದ ಕೊಚ್ಚರ್ ಅವರು ವಿಚಾರಣೆ ಎದುರಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








